ನೈಸರ್ಗಿಕ ಆಪತ್ತುಗಳನ್ನು ಹೇಗೆ ಎದುರಿಸಬೇಕು ? 

ಆಪತ್ಕಾಲದಲ್ಲಿ ನೆರೆಹಾವಳಿ ಅಥವಾ ಭೂಕಂಪದಂತಹ ನೈಸರ್ಗಿಕ ಸಂಕಟಗಳನ್ನು ಸಮಾಜವು ಎದುರಿಸಬೇಕಾಗುತ್ತದೆ. ಇಂತಹ ಘಟನೆಗಳು ನೈಸರ್ಗಿಕ ಆಗಿರುವುದರಿಂದ ಸಮಾಜ ಜಾಗರೂಕವಿಲ್ಲದಿರುವಾಗ ಅನಿರೀಕ್ಷಿತವಾಗಿ ಘಟಿಸುತ್ತವೆ. ನೆರೆ ಮತ್ತು ಭೂಕಂಪದಂತಹ ಪ್ರಸಂಗಗಳನ್ನು ಧೈರ್ಯದಿಂದ ಎದುರಿಸಲು ಏನು ಮಾಡಬೇಕು ?

ನೆರೆಹಾವಳಿ

೧. ನೆರೆಹಾವಳಿಯ ಸುಳಿವು ಸಿಕ್ಕಿದಾಗ ವಹಿಸಬೇಕಾದ ಕಾಳಜಿ

ಅ. ಆಡಳಿತದ ವತಿಯಿಂದ ಧ್ವನಿವರ್ಧಕ, ಆಕಾಶವಾಣಿ ಮತ್ತು ದೂರ ದರ್ಶನ ಇತ್ಯಾದಿಗಳಿಂದ ಆಗಾಗ ನೀಡುವ  ಸೂಚನೆಗಳನ್ನು ನಿರಂತರ ಆಲಿಸುವುದು, ವೀಕ್ಷಿಸುವುದು ಮಾಡಬೇಕು.

ಆ. ಅಮೂಲ್ಯವಾದ ವಸ್ತುಗಳನ್ನು ಹಾಗೂ ಮಹತ್ವದ ಕಾಗದಪತ್ರಗಳನ್ನು ಸುರಕ್ಷಿತ ಸ್ಥಳದಲ್ಲಿಡಬೇಕು. ಇದರಿಂದ ಅವು ಸುರಕ್ಷಿತವಾಗಿರುವವು ಅಥವಾ ಸಂಕಟಕಾಲದಲ್ಲಿ ಮನೆಯಿಂದ ಹೊರಡುವಾಗ ಅವುಗಳನ್ನು ಜೊತೆಗೆ ಕೊಂಡೊಯ್ಯಬಹುದು. ಅದರಿಂದ ಹಾನಿಯಾಗುವುದಿಲ್ಲ ಅಥವಾ ಆದರೂ ಸ್ವಲ್ಪ ಪ್ರಮಾಣದಲ್ಲಿ ಆಗಬಹುದು.

ಇ. ಪ್ರಥಮೋಪಚಾರದ ಸಾಹಿತ್ಯಗಳು ಮತ್ತು ಇತರ ಆವಶ್ಯಕ ಸಾಹಿತ್ಯಗಳನ್ನು ಸುರಕ್ಷಿತ ಸ್ಥಳದಲ್ಲಿಡಬೇಕು.

ಈ. ಸಾಕಷ್ಟು ತಿಂಡಿತಿನಿಸುಗಳು ಮತ್ತು ಕುಡಿಯುವ ಶುದ್ಧ ನೀರನ್ನು ಎತ್ತರದಲ್ಲಿ ಹಾಗೂ ಸುರಕ್ಷಿತ ಸ್ಥಳದಲ್ಲಿಡಬೇಕು.

ಉ. ನೀವು ಏನಾದರೂ ನೆರೆಹಾವಳಿಯ ಪರಿಸರದಲ್ಲಿ ವಾಸಿಸುತ್ತಿದ್ದರೆ, ಆಗ ತಕ್ಷಣವೇ ಕುಟುಂಬಸಮೇತ ಸುರಕ್ಷಿತ ಸ್ಥಳಕ್ಕೆ ಹೋಗಬೇಕು.

ಊ. ಮನೆಯಲ್ಲಿನ ಡ್ರೈನೇಜ್‌ಪೈಪ್‌ಗಳನ್ನು ಸ್ವಚ್ಛವಾಗಿಡಬೇಕು. (ಅವುಗಳು ತುಂಬಿರಬಾರದು.)

೨. ಪ್ರತ್ಯಕ್ಷ ನೆರೆ ಬಂದಾಗ

ಅ. ವಿದ್ಯುತ್ ಮತ್ತು ವಿದ್ಯುತ್ ಉಪಕರಣಗಳ ಎಲ್ಲ ಗುಂಡಿ (ಬಟನ್)ಗಳನ್ನು ಬಂದ್ ಮಾಡಬೇಕು.

ಆ. ಯಾವುದಾದರೊಂದು ಎತ್ತರದ ಪ್ರದೇಶಕ್ಕೆ ಹೋಗಬೇಕು. ಮನೆಯ ಮೇಲೆ ಎರಡನೇ ಮಹಡಿ ಇದ್ದಲ್ಲಿ, ಅಲ್ಲಿ ಹೋಗಬೇಕು

ಇ. ಹಾವು, ಇತರ ವಿಷಜಂತುಗಳ ಬಗ್ಗೆ ಎಚ್ಚರದಿಂದಿರಬೇಕು.

ಈ. ನೆರೆಯ ನೀರನ್ನು ಕುಡಿಯಬಾರದು. ಮಳೆಯ ನೀರನ್ನು ಒಂದು ಸ್ವಚ್ಛ ಪಾತ್ರೆಯಲ್ಲಿ ಸಂಗ್ರಹಿಸಿ ಅದನ್ನೇ ಕುಡಿಯಬೇಕು.

ಉ. ರಭಸವಾಗಿ ಹರಿಯುವ ಝರಿ ಅಥವಾ ನೀರಿನಲ್ಲಿ, ನಡೆಯುವುದು, ಈಜುವುದು ಅಥವಾ ಆಟವಾಡುವುದು ಇತ್ಯಾದಿ ಪ್ರಯತ್ನಗಳನ್ನು ಮಾಡಬಾರದು.

ಭೂಕಂಪ

೧. ಭೂಕಂಪ ಆದಾಗ ಏನು ಮಾಡಬೇಕು ?

ಅ. ತಕ್ಷಣ ಹೊರಗೆ ಮೈದಾನಕ್ಕೆ ಹೋಗಬೇಕು.

ಆ. ಬಹುಮಹಡಿ ಕಟ್ಟಡದಿಂದ ಕೆಳಗೆ ಬರಲು ಲಿಫ್ಟ್ ಬಳಸಬಾರದು.

ಇ. ಮನೆಯಿಂದ ಹೊರಗೆ ಹೋಗಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿನ ಗಾಜಿನ ಕಿಟಕಿಗಳು, ಕಪಾಟು, ವಿದ್ಯುತ್ ತಂತಿ ಮತ್ತು ಇತರ ಸಹಜವಾಗಿ ಬೀಳುವಂತಹ ವಸ್ತುಗಳಿಂದ ದೂರವಿರಬೇಕು.

ಈ. ಮನೆಯಲ್ಲಿನ ಮೇಜು ಅಥವಾ ಮಂಚ ಇತ್ಯಾದಿಗಳ ಕೆಳಗೆ ಆಶ್ರಯ ಪಡೆಯಬೇಕು.

ಉ. ಗ್ಯಾಸ್/ ವಿದ್ಯುತ್‌ನ ಎಲ್ಲ ‘ಬಟನ್ಗಳನ್ನು ಬಂದ್ ಮಾಡಬೇಕು.

ಎ. ನೀವು ವಾಹನ ಓಡಿಸುತ್ತಿದ್ದರೆ ಸುರಕ್ಷಿತ ಸ್ಥಳದಲ್ಲಿ ನಿಲ್ಲಬೇಕು.