ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಪರಿಪೂರ್ಣ ಅಧ್ಯಾತ್ಮಶಾಸ್ತ್ರ ಮತ್ತು ಬಾಲ್ಯಾವಸ್ಥೆಯ ವಿಜ್ಞಾನ ಸಾವಿರಾರು ವರ್ಷಗಳ ಹಿಂದೆ ಋಷಿ-ಮುನಿಗಳು ಹೇಳಿದಂತಹ ಮೂಲಭೂತ ಸಿದ್ಧಾಂತದಲ್ಲಿ ಯಾರು ಏನನ್ನು ಬದಲಾಯಿಸಲು ಸಾಧ್ಯವಿಲ್ಲ; ಏಕೆಂದರೆ ಅವರು ಚಿರಂತನವಾದ ಸತ್ಯವನ್ನು ಹೇಳಿ ದ್ದಾರೆ. ಅದುದರಿಂದ ಅದರಲ್ಲಿ ಸಂಶೋಧನೆ ಎಂದೇನಿರುವುದಿಲ್ಲ. ತದ್ವಿರುದ್ಧ ಬುದ್ಧಿಜೀವಿಗಳಿಗೆ ವಿಜ್ಞಾನದಲ್ಲಿ ಸತತವಾಗಿ ಸಂಶೋಧನೆ ಮಾಡಬೇಕಾಗುತ್ತದೆ. ಏಕೆಂದರೆ ಕೆಲವು ವರ್ಷಗಳ ನಂತರ ಅವರ ಸಿದ್ಧಾಂತದಲ್ಲಿ ಬದಲಾವಣೆಯಿರುತ್ತದೆ.

ಬುದ್ಧಿಜೀವಿಗಳು ಬುದ್ಧಿಯ ಆಚೆಗಿರುವ ದೇವರಿಲ್ಲ, ಎಂದು ಹೇಳುವುದು ಹೇಗಿದೆಯೆಂದರೆ ಶಿಶುವಿಹಾರದ ಮಗುವು ವೈದ್ಯರು, ವಕೀಲ ಮುಂತಾದವರು ಇರುವುದಿಲ್ಲವೆಂದು ಹೇಳಿದಂತೆ.

ಹಿಂದೂ ಧರ್ಮದಲ್ಲಿ ಧರ್ಮಪ್ರಸಾರದೊಂದಿಗೆ ಧರ್ಮದ ಆಳಕ್ಕೆ ಹಾಗೆಯೇ ಸೂಕ್ಷ್ಮಕ್ಕೆ ಹೋಗಲು ಮಹತ್ವವಿದೆ.

ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರ ದುಷ್ಪರಿಣಾಮ ಇದುವರೆಗಿನ ೭೨ ವರ್ಷಗಳ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ. ಅದುದರಿಂದ ಅವರಿಗೆ ಧರ್ಮದ ಅಭಿಮಾನವು ತಿಳಿದಿಲ್ಲ. ತದ್ವಿರುದ್ಧ ಮುಸಲ್ಮಾನರಿಗೆ ಧರ್ಮಾಭಿಮಾನವಿರುವುದರಿಂದ ಜಗತ್ತಿನೆಲ್ಲೆಡೆ ಅವರ ಪ್ರಭಾವವಿದೆ.

ಈಶ್ವರೀ ರಾಜ್ಯದಲ್ಲಿ ಜನರು ಆಯಾ ಹಬ್ಬಕ್ಕನುಸಾರವಾಗಿ ಸಾಧನೆಯನ್ನು ಮಾಡುವರು. ರಜೆ ಸಿಕ್ಕಿತೆಂದು ಮಜಾ ಮಾಡಲು ಹೋಗುವುದಿಲ್ಲ.

ಪ್ರತಿಯೊಂದು ತಲೆಮಾರಿನ ಕರ್ತವ್ಯ !

‘ಪ್ರತಿಯೊಂದು ತಲೆಮಾರು ಸಮಾಜ, ರಾಷ್ಟ್ರ ಮತ್ತು ಧರ್ಮದ ದೃಷ್ಟಿಯಿಂದ ಮುಂದಿನ ತಲೆಮಾರಿನಿಂದ ಅಪೇಕ್ಷೆ ಪಡುತ್ತದೆ. ಆದರೆ ಅದರ ಬದಲಾಗಿ, ಪ್ರತಿಯೊಂದು ತಲೆಮಾರಿನವರು ‘ನಾವೇನು ಮಾಡಬಹುದು ? ಎಂಬ ವಿಚಾರವನ್ನು ಮಾಡಿ ಕಾರ್ಯ ಮಾಡಬೇಕು, ಇದರಿಂದಾಗಿ ಮುಂದಿನ ತಲೆಮಾರು ಅದರ ಬಗ್ಗೆ ಏನನ್ನೂ ಮಾಡುವ ಆವಶ್ಯಕತೆ ಉಳಿಯದ ಕಾರಣದ ಅದು ಪೂರ್ಣ ಸಮಯವನ್ನು ಸಾಧನೆಗೆ ನೀಡಬಹುದು !

– (ಪರಾತ್ಪರ ಗುರು) ಡಾ. ಆಠವಲೆ