ಸಾಧಕರಿಗಾಗಿ ಮಹತ್ವದ ಸೂಚನೆ !

೧. ವಾಸ್ತು ಅಥವಾ ಭೂಮಿಯನ್ನು ಖರೀದಿಸುವ ಮೊದಲು ಅದರ ನಕ್ಷೆಯನ್ನು ಅಥವಾ ಛಾಯಾಚಿತ್ರವನ್ನು ಧರ್ಮಪ್ರಚಾರಕ ಸಂತರು ಅಥವಾ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವ ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ತೋರಿಸಿ ಅದರಲ್ಲಿ ಯಾವ ಸ್ಪಂದನಗಳು ಅರಿವಾಗುತ್ತವೆ, ‘ತೊಂದರೆದಾಯಕವೋ ಅಥವಾ ಒಳ್ಳೆಯ ಸ್ಪಂದನವೋ ? ಎಂಬುದನ್ನು ತಿಳಿದುಕೊಂಡು ಖರೀದಿಸುವ ನಿರ್ಣಯವನ್ನು ತೆಗೆದುಕೊಳ್ಳಬೇಕು !

೧ ಅ. ವಾಸ್ತು ಅಥವಾ ಭೂಮಿಯ ನಕ್ಷೆಯನ್ನು ನೋಡಿ ‘ಯಾವ ಸ್ಪಂದನಗಳು ಅರಿವಾಗುತ್ತ ?’, ಎಂಬುದರ ಅಧ್ಯಯನ ಮಾಡುವುದರ ಮಹತ್ವ ! : ‘ಸಾಧಕರು ಹೊಸ ವಾಸ್ತು (ಬಡಾವಣೆ, ಬಂಗಲೆ, ‘ಫಾರ್ಮ್ ಹೌಸ್ (ಹೊಲದಲ್ಲಿರುವ ಮನೆ), ಅಂಗಡಿ, ಗೋದಾಮು), ಖಾಲಿ ಜಾಗ (ಪ್ಲಾಟ್), ಕೃಷಿಭೂಮಿ ಮುಂತಾದವುಗಳನ್ನು ಖರೀದಿಸುವ ಮೊದಲು ಅವುಗಳ ನಕಾಶೆಯನ್ನು (ಡ್ರಾಯಿಂಗ್) ನೋಡಿ ಸ್ಪಂದನಗಳ ಅಧ್ಯಯನ ಮಾಡುವುದು ಆವಶ್ಯಕವಾಗಿದೆ. ವಾಸ್ತು ಅಥವಾ ಭೂಮಿಯಲ್ಲಿ ತೊಂದರೆದಾಯಕ ಸ್ಪಂದನಗಳಿದ್ದರೆ ಆ ಸ್ಪಂದನಗಳೊಂದಿಗೆ ಹೋರಾಡಲು ನಮ್ಮ ಸಾಧನೆಯು ಖರ್ಚಾಗುತ್ತದೆ. ಇಂತಹ ಸ್ಪಂದನಗಳಿಂದಾಗಿ ತಲೆ ನೋವು, ಹೊಟ್ಟೆ ತೊಳೆಸುವುದು ಮುಂತಾದ ಶಾರೀರಿಕ ತೊಂದರೆಗಳು ಮತ್ತು ಅಸ್ವಸ್ಥತೆ, ನಿರುತ್ಸಾಹ  ಇವುಗಳಂತಹ ಮಾನಸಿಕ ತೊಂದರೆಗಳೂ ಆಗಬಹುದು.

ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳಿದ್ದರೆ, ತೊಂದರೆಯಿರುವ ಸಾಧಕರ ಮೇಲೆ ಆಕ್ರಮಣ ಮಾಡಲು ಕೆಟ್ಟಶಕ್ತಿಗಳಿಗೆ ಸುಲಭವಾಗುತ್ತದೆ. ಆದುದರಿಂದ ಆ ಸಾಧಕರ ಸಾಧನೆಯು ಹೆಚ್ಚು ಪ್ರಮಾಣದಲ್ಲಿ ಖರ್ಚಾಗುತ್ತದೆ. ಇದರಿಂದ ‘ವಾಸ್ತು ಅಥವಾ ಭೂಮಿಯನ್ನು ಖರೀದಿಸುವ ಮೊದಲು ಅದರ ನಕ್ಷೆಯನ್ನು ನೋಡಿ ಸ್ಪಂದನಗಳ ಅಧ್ಯಯನ ಮಾಡುವುದು ಏಕೆ ಆವಶ್ಯಕವಾಗಿದೆ ?, ಎಂಬುದು ಗಮನಕ್ಕೆ ಬರುತ್ತದೆ.

೧ ಆ. ಸ್ಪಂದನಗಳ ಅಧ್ಯಯನವನ್ನು ಯಾರು ಮಾಡಬೇಕು ? ನಾವು ಖರೀದಿಸಲಿರುವ ವಾಸ್ತು ಅಥವಾ ಭೂಮಿಯ ನಕ್ಷೆಯನ್ನು ಸಾಧಕರು, ಧರ್ಮಪ್ರಚಾರಕ ಸಂತರು ಅಥವಾ ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ; ಆದರೆ ಕೆಟ್ಟಶಕ್ತಿಗಳ ತೊಂದರೆ ಇಲ್ಲದಿರುವ ಮತ್ತು ಸೂಕ್ಷ್ಮ ವಿಷಯಗಳು ತಿಳಿಯುವ ಸಾಧಕರಿಗೆ ತೋರಿಸಬೇಕು. ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದ ಸಾಧಕರ ಪರೀಕ್ಷಣೆಯ ಉತ್ತರವನ್ನು ಇನ್ನೋರ್ವ ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ; ಆದರೆ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಮತ್ತು ಸೂಕ್ಷ್ಮವಿಷಯವನ್ನು ತಿಳಿಯುವ ಸಾಧಕನಿಗೆ ತೋರಿಸಿ ಉತ್ತರ ಹೊಂದಾಣಿಕೆ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಸಂತರ ಉತ್ತರದ ಪರೀಕ್ಷಣೆಯನ್ನು ಮಾಡಬೇಕಾದ ಆವಶ್ಯಕತೆಯಿಲ್ಲ. ನಕ್ಷೆಯನ್ನು ನೋಡಿ ಒಳ್ಳೆಯ ಸ್ಪಂದನಗಳ ಅರಿವಾಗುತ್ತಿದ್ದರೆ ವಾಸ್ತು ಅಥವಾ ಭೂಮಿ ಖರೀದಿಸಲು ನಿರ್ಧಾರ ಮಾಡಬೇಕು.’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೫.೮.೨೦೨೦)

೨. ಜ್ಯೋತಿಷ್ಯ ವಿಶಾರದ ಸೌ. ಪ್ರಾಜಕ್ತಾ ಜೋಶಿ ಇವರ ಮಾರ್ಗದರ್ಶನ

೨ ಅ. ವಾಸ್ತುಸುಖ ದೊರಕಲು ಜ್ಯೋತಿಷ್ಯಶಾಸ್ತ್ರಕ್ಕನುಸಾರ ಮುಂದಿನ ಅಂಶಗಳ ಅಧ್ಯಯನ ಮಾಡುವುದು ಆವಶ್ಯಕ

೧. ‘ಯಾವ ವ್ಯಕ್ತಿಯ ಹೆಸರಿನಲ್ಲಿ ವಾಸ್ತು ಅಥವಾ ಭೂಮಿಯನ್ನು ಖರೀದಿಸುವುದಿದೆಯೋ, ಆ ವ್ಯಕ್ತಿಗೆ ಜಾತಕದಲ್ಲಿ ವಾಸ್ತುಸುಖದ ಯೋಗವಿರಬೇಕಾಗುತ್ತದೆ. ಕುಟುಂಬದಲ್ಲಿನ ಯಾವ ವ್ಯಕ್ತಿಗೆ ವಾಸ್ತು ಲಾಭದಾಯಕವಾಗಿದೆ, ಆ ವ್ಯಕ್ತಿಯ ಹೆಸರಿನಲ್ಲಿ ವಾಸ್ತುವನ್ನು ಖರೀದಿಸಬೇಕು.

೨. ವಾಸ್ತುಶಾಸ್ತ್ರಕ್ಕನುಸಾರ ವಾಸ್ತುವಿನ ಪರೀಕ್ಷಣೆಯಾಗುವುದು ಆವಶ್ಯಕವಾಗಿದೆ, ಉದಾ. ಪೂರ್ವ ಮತ್ತು ಉತ್ತರ ದಿಕ್ಕಿಗೆ ಭೂಮಿಯ ಅಥವಾ ವಾಸ್ತುವಿಗೆ ಇಳಿಜಾರು ಇರಬೇಕು.

೩. ಒಳ್ಳೆಯ ಸ್ಪಂದನಗಳ ಅರಿವಾಗುತ್ತಿರುವ ವಾಸ್ತು ಅಥವಾ ಭೂಮಿಯನ್ನು ಖರೀದಿಸಿದ ಮೇಲೆ ಒಳ್ಳೆಯ ಸ್ಪಂದನಗಳನ್ನು ಉಳಿಸಲು ನಿರಂತರ ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸುವುದು ಆವಶ್ಯಕವಿದೆ.

೨ ಆ. ಜಾತಕದಿಂದ ಅಪೇಕ್ಷಿತವಿರುವ ಫಲವು ವಾಸ್ತುವಿನ ಮಾಧ್ಯಮದಿಂದ ದೊರಕುವ ಹಿಂದಿನ ಸಾಧ್ಯತೆ

೧. ಜಾತಕದಂತೆ ಕಾಲವು ಉತ್ತಮ; ಆದರೆ ವಾಸ್ತು ದೋಷಯುಕ್ತವಾಗಿರುವುದು

೨. ಜಾತಕದಂತೆ ಕಾಲವು ಅಶುಭ; ಆದರೆ ವಾಸ್ತು ದೋಷಮುಕ್ತವಾಗಿರುವುದು

೩. ಜಾತಕದಂತೆ ಕಾಲವು ಉತ್ತಮ ಮತ್ತು ವಾಸ್ತು ನಿರ್ದೋಷವಿರುವುದು

೨ ಇ. ವಾಸ್ತುಶಾಸ್ತ್ರದಲ್ಲಿ ಭೂಮಿಯ ಸಂದರ್ಭದಲ್ಲಿ ವಿಚಾರ ಮಾಡುವಾಗ ಪರಿಸರ, ಒಳಗಿನ ಖಾಲಿ ಜಾಗ, ಅದರ ಮೇಲೆ ಕಟ್ಟಿದ ಕಟ್ಟಡ, ಕಟ್ಟಡದಲ್ಲಿನ ಪ್ರತಿಯೊಂದು ಮಹಡಿಗಳು, ಪ್ರತಿಯೊಂದು ಕೋಣೆ, ಆ ಕೋಣೆಯಲ್ಲಿರುವ ಸಾಹಿತ್ಯಗಳು ಇತ್ಯಾದಿಗಳ ಅನೇಕ ವಿಷಯಗಳ ವಿಚಾರವನ್ನು ಮಾಡುತ್ತಾರೆ.

೨ ಈ. ಚೌಕಟ್ಟಿನಲ್ಲಿದ್ದಂತೆ ಪರೀಕ್ಷಿಸಿ ಸಾಧಕರ ಮೇಲೆ ವಿಶ್ವಾಸವನ್ನಿಟ್ಟು ಭಾವದ ಸ್ಥಿತಿಯಲ್ಲಿ ವಾಸ್ತು ಖರೀದಿ ಮಾಡಿ ಒಳ್ಳೆಯ ಸ್ಪಂದನಗಳನ್ನು ಶಾಶ್ವತವಾಗಿ ಉಳಿಸಲು ನಿಯಮಿತವಾಗಿ ವಾಸ್ತುಶುದ್ಧಿ ಮಾಡಬೇಕು.

– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ ವಿಶಾರದ), ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೮.೨೦೨೦)