ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗುವ ಸಾಧ್ಯತೆಯಿರುವುದರಿಂದ ಇಂಧನ ರಹಿತ ಸೈಕಲ್‌ಅನ್ನು ಆಯ್ಕೆ ಮಾಡಿ

‘ಸೈಕಲ್ ಇಂಧನವಿಲ್ಲದ ಸಾರಿಗೆ ಸಾಧನವಾಗಿದೆ. ಸೈಕಲ್ ಓಡಿಸಿದರೆ ವ್ಯಾಯಾಮವಾಗುತ್ತದೆ ಹಾಗೂ ಅದನ್ನು ಓಡಿಸುವುದು ವ್ಯಕ್ತಿಗತ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಇತರ ವಾಹನಗಳು ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ; ಆದರೆ ಸೈಕಲ್ ಓಡಿಸುವುದರಿಂದ ಯಾವುದೇ ಮಾಲಿನ್ಯವಾಗುವುದಿಲ್ಲ. ಆದ್ದರಿಂದ ಸೈಕಲ್ ಇದು ಪರಿಸರಸ್ನೇಹಿಯಾಗಿದೆ.
ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆ ಉಂಟಾಗುತ್ತದೆ. ಆಗ ಈ ಇಂಧನಗಳಿಂದ ಕಾರ್ಯನಿರ್ವಹಿಸುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳ ಉಪಯೋಗವಾಗಲಿಕ್ಕಿಲ್ಲ. ಸಂಭಾವ್ಯ ಆಪತ್ಕಾಲದ ಪರಿಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಸೈಕಲ್ ಹೊಂದಿರುವವರು ಸೈಕಲ್ ಬಳಸಬಹುದಾದ ಸ್ಥಿತಿಯಲ್ಲಿದೆಯೇ ? ಎಂದು ನೋಡಬೇಕು. ಸೈಕಲ್ ಹಾಳಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. ಸೈಕಲ್ ಅನ್ನು ಹೇಗೆ ಸರಿಪಡಿಸುವುದು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಅದನ್ನು ಸರಿಪಡಿಸಲು ಕಲಿಯಿರಿ. ಉತ್ತಮ ಗುಣಮಟ್ಟದ ಸೈಕಲ್ ಮತ್ತು ಬಾಳಿಕೆ ಬರುವ ಬಿಡಿಭಾಗಗಳನ್ನು ಈಗ ಖರೀದಿಸಿ. ಭವಿಷ್ಯದಲ್ಲಿ, ಸೈಕಲ್ ಹಾಳಾದರೆ ಮನೆಯಲ್ಲಿಯೇ ಸರಿಪಡಿಸಬಹುದು.
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !