‘ನಾವು ದಿನವಿಡಿ ಮಾಡುತ್ತಿರುವ ವಿವಿಧ ಕೃತಿ, ನಮ್ಮ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರ ಹಾಗೂ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದ ನಮ್ಮ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣ ನಿರ್ಮಾಣವಾಗುತ್ತಿರುತ್ತದೆ. ಇದರಿಂದಾಗಿ ಸಾಧಕರು ನಾಮಜಪ (ಉಪಾಯಕ್ಕೆ) ಕುಳಿತಾಗ ಅವರಲ್ಲಿ ತುಂಬಾ ತೊಂದರೆದಾಯಕ ಶಕ್ತಿಗಳ ಆವರಣ ಬಂದಿರುತ್ತದೆ. ಈ ಆವರಣದೊಂದಿಗೆ ಸಾಧಕರು ನಾಮಜಪ ಹಾಗೂ ಪ್ರಾರ್ಥನೆಯನ್ನು ಮಾಡುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ನಾಮಜಪದ ಅರ್ಧ ಶಕ್ತಿ ಆವರಣ ನಷ್ಟವಾಗಲು ಖರ್ಚಾಗುತ್ತದೆ. ನಂತರ ಸಾಧಕರಿಗೆ ಆ ನಾಮಜಪದ ಲಾಭವು ಕ್ರಮೇಣವಾಗಿ ಸಿಗಲು ಆರಂಭವಾಗುತ್ತದೆ, ಉದಾ. ಅರ್ಧ ಗಂಟೆ ಮಾಡಿದ ನಾಮಜಪದಲ್ಲಿ ೧೫ ನಿಮಿಷಗಳ ನಾಮಜಪವು ಆವರಣ ನಷ್ಟವಾಗಲು ಖರ್ಚಾಗುತ್ತದೆ. ಇದರಿಂದ ಉಪಾಯದ ಫಲನಿಷ್ಪತ್ತಿ ಕಡಿಮೆಯಾಗುತ್ತದೆ; ಆದ್ದರಿಂದ ಸಾಧಕರು ಸೇವೆ ಹಾಗೂ ನಾಮಜಪ ಮಾಡುವಾಗ ಒಂದು ಗಂಟೆಗೊಮ್ಮೆ ೫ ನಿಮಿಷಗಳ ಕಾಲ ಅವರಿಗೆ ಹೇಳಿದ ಪದ್ದತಿಯಂತೆ, ಅಂದರೆ ಊದುಬತ್ತಿ, ನವಿಲು ಗರಿ ಇತ್ಯಾದಿಗಳಿಂದ ಆವರಣ ತೆಗೆಯಬೇಕು ಹಾಗೂ ಸೇವೆ ಅಥವಾ ನಾಮಜಪವನ್ನು ಆರಂಭಿಸಬೇಕು. – (ಪರಾತ್ಪರ ಗುರು) ಡಾ. ಆಠವಲೆ