‘ಫೇಸ್‌ಬುಕ್, ‘ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಇತರರಿಗೆ ‘ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವಾಗ, ಹಾಗೆಯೇ ಸ್ವೀಕರಿಸುವಾಗ ‘ಹೆಸರಿನ ಸಾಮ್ಯತೆಯಿಂದ ಗೊಂದಲವಾಗಬಾರದೆಂದು ಯೋಗ್ಯವಿರುವುದನ್ನೇ ಆರಿಸಿ !
೧. ಹೆಸರಿನ ಸಾಮ್ಯತೆಯಿಂದ ಓರ್ವ ವ್ಯಕ್ತಿಯು ಸಾಧಕರ ‘ಫೇಸ್‌ಬುಕ್ನಲ್ಲಿ ‘ಫ್ರೆಂಡ್ ಲಿಸ್ಟ್ನಲ್ಲಿರುವುದು, ಸಂಬಂಧಿತ ವ್ಯಕ್ತಿಯು ಓರ್ವ ಸಾಧಕಿಗೆ ‘ಚ್ಯಾಟಿಂಗ್ ಮೂಲಕ ಅಯೋಗ್ಯ ಭಾಷೆಯಲ್ಲಿ ಪ್ರಶ್ನೆ ಕೇಳುವುದು
‘ಫೇಸ್‌ಬುಕ್ನಲ್ಲಿ ಒಂದೇ ಹೆಸರಿನ ಅನೇಕ ಖಾತೆಗಳು (ಅಕೌಂಟ್ಸ್) ಇರುತ್ತವೆ. ಒಂದು ಜಿಲ್ಲೆಯಲ್ಲಿನ ಓರ್ವ ಸಾಧಕ ಮತ್ತು ಓರ್ವ ವ್ಯಕ್ತಿಯ ಹೆಸರಿನಲ್ಲಿ ಸಾಮ್ಯತೆಯಿತ್ತು. ಅಲ್ಲಿನ ಅನೇಕ ಸಾಧಕ ಮತ್ತು ಸಾಧಕಿಯರು ಆ ವ್ಯಕ್ತಿಯ ‘ಫ್ರೆಂಡ್ ಲಿಸ್ಟ್‌ನಲ್ಲಿದ್ದಾರೆ. ಮೇಲೆ ತಿಳಿಸಿದ ವ್ಯಕ್ತಿಯು ಆ ಜಿಲ್ಲೆಯಲ್ಲಿನ ಓರ್ವ ಸಾಧಕಿಗೆ ‘ಫೇಸ್‌ಬುಕ್ನಲ್ಲಿ ‘ಚ್ಯಾಟಿಂಗ್ ಮೂಲಕ ಅಯೋಗ್ಯ ಭಾಷೆಯಲ್ಲಿ ಅನಾವಶ್ಯಕ ಪ್ರಶ್ನೆಯನ್ನು ಕೇಳಿದನು. ಆಗ ಸಂಬಂಧಿತ ಸಾಧಕಿಯು ಆ ವ್ಯಕ್ತಿಯನ್ನು ‘ಬ್ಲಾಕ್ ಮಾಡಿದಳು (‘ಅವರ ಸಂದೇಶ (ಮೆಸೆಜ್) ಬರಬಾರದು, ಆ ರೀತಿ ವ್ಯವಸ್ಥೆ ಮಾಡಿದಳು). ಇನ್ನೋರ್ವ ಸಾಧಕಿಗೂ ಆ ವ್ಯಕ್ತಿಯ ವಿಷಯದಲ್ಲಿ ಇಂತಹದ್ದೇ ಅನುಭವ ಬಂದಿತು. ಹೆಸರಿನ ಸಾಮ್ಯತೆಯಿಂದ ಸಾಧಕರು ಗೊಂದಲಕ್ಕೀಡಾಗುವುದು ಗಮನಕ್ಕೆ ಬಂದಿದೆ.
೨. ಇತರರ ‘ಫ್ರೆಂಡ್ ರಿಕ್ವೆಸ್ಟ್ ಬಂದಾಗ ಹಾಗೂ ಕಳುಹಿಸುವಾಗ ‘ತಮಗೆ ಅಪೇಕ್ಷಿತವಿರುವ ವ್ಯಕ್ತಿಯ ಖಾತೆ ಆಗಿದೆಯೇ ಎಂದು ಖಚಿತ ಪಡಿಸಿಯೇ ಸ್ವೀಕರಿಸಬೇಕು !
‘ಫೇಸ್‌ಬುಕ್, ‘ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ತಮಗೆ ‘ಫ್ರೆಂಡ್ ರಿಕ್ವೆಸ್ಟ್ (ಮಿತೃತ್ವಕ್ಕಾಗಿ ವಿನಂತಿ) ಕಳುಹಿಸಬಹುದು. ಆದ್ದರಿಂದ ಸಂಬಂಧಿತ ವ್ಯಕ್ತಿಯ ಬಗ್ಗೆ ಖಚಿತಪಡಿಸಿಕೊಳ್ಳದೇ ಅವರ ‘ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬಾರದು. ‘ಆ ವ್ಯಕ್ತಿಯ ಪರಿಚಯ ಇದೆಯೇ ?, ಎಂದು ಪರೀಕ್ಷಿಸಲು ಅವರ ಖಾತೆಗೆ ಹೋಗಿ ಅವರ ಛಾಯಾಚಿತ್ರಗಳನ್ನು, ಹಾಗೆಯೇ ‘ಪೋಸ್ಟ್ ನೋಡುವುದು, ‘ರಾಷ್ಟ್ರ ಮತ್ತು ಧರ್ಮ ಕಾರ್ಯ ಇವುಗಳ ಪ್ರಸಾರ ಮಾಡುವುದು, ಅವರ ಉದ್ದೇಶ ಇದೆಯೇ ?, ಮುಂತಾದ ವಿಷಯಗಳನ್ನು ನೋಡಬೇಕು.
ಓರ್ವ ವ್ಯಕ್ತಿಯ ಖಾತೆಗೆ ‘ಫ್ರೆಂಡ್ಸ್ ರಿಕ್ವೆಸ್ಟ್, ಕಳುಹಿಸುವ ಮೊದಲು ‘ಆ ಖಾತೆಯು ತಮಗೆ ಅಪೇಕ್ಷಿತವಿರುವ ವ್ಯಕ್ತಿಯದ್ದೇ ಆಗಿದೆಯೇ ?, ಎಂದು ಪರೀಕ್ಷಿಸಿ ನೋಡುವುದು ಆವಶ್ಯಕವಾಗಿದೆ. ಅಯೋಗ್ಯ ವ್ಯಕ್ತಿಗೆ ‘ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದರೆ ಮುಂದೆ ತೊಂದರೆಯಾಗಬಹುದು.
೩. ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಸೂಚನೆಗಳನ್ನು ಪಾಲಿಸಿ !
ಅ. ‘ಫ್ರೆಂಡ್ಸ್ ಲಿಸ್ಟ್ನಲ್ಲಿ ತಮಗೆ ಅಪೇಕ್ಷಿತ ವ್ಯಕ್ತಿಯೇ ಇದ್ದಾನವಲ್ಲವೇ ?, ಎಂದು ನೋಡಬೇಕು.
ಆ ಸುರಕ್ಷತೆಯ ದೃಷ್ಟಿಯಿಂದ ‘ಫೇಸ್‌ಬುಕ್ ಮೆಸೆಂಜರನ್ನು ಆದಷ್ಟು ಉಪಯೋಗಿಸಬಾರದು.
ಇ. ಸಾಮಾಜಿಕ ಮಾಧ್ಯಮಗಳ ಬಳಕೆ ಮಾಡುವ ಸಂದರ್ಭದಲ್ಲಿ ಸರಕಾರ ಮತ್ತು ಆಡಳಿತ ಇವುಗಳಿಂದ ಪ್ರಸಾರ ಮಾಡಲಾಗುವ ಮಾರ್ಗದರ್ಶಕ ಸೂಚನೆಗಳ ಪಾಲನೆ ಮಾಡಬೇಕು.
ಈ ವಿಷಯದಲ್ಲಿ ಏನಾದರೂ ಅಡಚಣೆ ಅಥವಾ ಸಂದೇಹಗಳಿದ್ದರೆ ತಮ್ಮ ಜಿಲ್ಲೆಯಲ್ಲಿನ ಸಾಮಾಜಿಕ ಪ್ರಸಾರ ಮಾಧ್ಯಮಗಳ ವಿಷಯದಲ್ಲಿ ಸೇವೆ ಮಾಡುವ ಜವಾಬ್ದಾರ ಸಾಧಕರನ್ನು ಸಂಪರ್ಕಿಸಿ.