ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಸತ್ಯವೇ ಚಿರಂತನವಾಗಿರುತ್ತದೆ. ಧರ್ಮಶಾಸ್ತ್ರದಲ್ಲಿ ಸಿದ್ಧಾಂತಗಳು ಯುಗಾನುಯುಗಗಳಿಂದಲೂ ಹಾಗೆಯೇ ಇವೆ. ಅದರಲ್ಲಿ ಬದಲಾವಣೆಗಳನ್ನು ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ತದ್ವಿರುದ್ಧ ವಿಜ್ಞಾನದ ಸಿದ್ಧಾಂತಗಳು ಕೆಲವೇ ವರ್ಷಗಳಲ್ಲಿ ಬದಲಾಗುತ್ತವೆ; ಏಕೆಂದರೆ ವಿಜ್ಞಾನಕ್ಕೆ ಅಂತಿಮ ಸತ್ಯವನ್ನು ಹೇಳಲು ಸಾಧ್ಯವಿಲ್ಲ. ಅಂತಹ ವಿಜ್ಞಾನವನ್ನು ಅಧ್ಯಾತ್ಮಕ್ಕಿಂತ ಶ್ರೇಷ್ಠ ಎಂದು ತಿಳಿಯುವುದಕ್ಕಿಂತ ದೊಡ್ಡ ಅಜ್ಞಾನದ ಬೇರೆ ಉದಾಹರಣೆಯೇ ಇಲ್ಲ. ತಾತ್ಪರ್ಯ, ವಿಜ್ಞಾನದ ಸಂಶೋಧನೆಗೆ ಅಧ್ಯಾತ್ಮಶಾಸ್ತ್ರವು ಮನ್ನಣೆ ನೀಡಿದರೆ ಮಾತ್ರ ಅದನ್ನು ಸತ್ಯವೆಂದು ತಿಳಿಯಬೇಕು, ಎಂಬುದನ್ನು ಗಮನದಲ್ಲಿಡಿರಿ !
‘ಭಾರತದಲ್ಲಿ ‘ಭಾರತರತ್ನ ಸರ್ವೋಚ್ಚ ಸ್ಥಾನವಾಗಿದೆ. ಜಗತ್ತಿನಲ್ಲಿ ‘ನೋಬೆಲ್ ಪ್ರೈಸ್ ಸರ್ವೋಚ್ಚ ಸ್ಥಾನವಾಗಿದ್ದರೆ, ಸನಾತನವು ಘೋಷಿಸುತ್ತಿರುವ ‘ಜನ್ಮ-ಮೃತ್ಯುಗಳಿಂದ ಮುಕ್ತರು ಮತ್ತು ‘ಸಂತರು ಎಂಬ ಸ್ಥಾನಗಳು ಈಶ್ವರನ ವಿಶ್ವದಲ್ಲಿ ಎಲ್ಲಕ್ಕಿಂತ ಮಹತ್ವದ್ದಾಗಿದೆ !
ಪ್ರತಿಯೊಂದು ಪೀಳಿಗೆಯ ಕರ್ತವ್ಯ !
ಪ್ರತಿಯೊಂದು ಪೀಳಿಗೆಯು ಮುಂದಿನ ಪೀಳಿಗೆಯತ್ತ ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಸಂದರ್ಭದಲ್ಲಿ ಆಪೇಕ್ಷೆಯಿಂದ ನೋಡುತ್ತದೆ. ಅದರ ಬದಲು ಪ್ರತಿಯೊಂದು ಪೀಳಿಗೆಯು ‘ನಾವು ಏನು ಮಾಡಬಹುದು ?, ಎಂಬ ವಿಚಾರವನ್ನು ಮಾಡಿ ಹೇಗೆ ಕಾರ್ಯ ಮಾಡಬೇಕೆಂದರೆ ಮುಂದಿನ ಪೀಳಿಗೆಗೆ ಆ ಬಗ್ಗೆ ಏನೂ ಮಾಡುವ ಆವಶ್ಯಕತೆಯೇ ಉಳಿಯಬಾರದು, ಇದರಿಂದ ಆ ಪೀಳಿಗೆಯು ಎಲ್ಲ ಸಮಯವನ್ನು ಸಾಧನೆಗಾಗಿ ನೀಡಬಹುದು ! – (ಪರಾತ್ಪರ ಗುರು) ಡಾ. ಆಠವಲೆ