೪. ವೈಶಿಷ್ಟ್ಯಗಳು
ಈ. ಪರಮಾರ್ಥಕ್ಕೆ ಪೂರಕವಾಗಿರುವ ವಿಧಿವಿಧಾನಗಳು ಮತ್ತು ಪ್ರಪಂಚಕ್ಕೆ ಮಾರಕ ಸಂಗತಿಗಳ ನಿಷೇಧವು ಚಾತುರ್ಮಾಸದ ವೈಶಿಷ್ಟ್ಯವಾಗಿದೆ.
ಉ. ಚಾತುರ್ಮಾಸದಲ್ಲಿನ ಶ್ರಾವಣ ಮಾಸವು ವಿಶೇಷ ಮಹತ್ವದ್ದಾಗಿದೆ. ಭಾದ್ರಪದ ಕೃಷ್ಣ ಪಕ್ಷದಲ್ಲಿ ಮಹಾಲಯ ಶ್ರಾದ್ಧಗಳನ್ನು ಮಾಡುತ್ತಾರೆ.
ಊ. ಚಾತುರ್ಮಾಸದಲ್ಲಿ ಹಬ್ಬ ಮತ್ತು ವ್ರತಗಳು ಹೆಚ್ಚಿನ ಪ್ರಮಾಣದಲ್ಲಿರುವುದರ ಕಾರಣಗಳು : ಶ್ರಾವಣ, ಭಾದ್ರಪದ, ಆಶ್ವಯುಜ ಮತ್ತು ಕಾರ್ತಿಕ ಈ ನಾಲ್ಕು ತಿಂಗಳುಗಳಲ್ಲಿ (ಚಾತುರ್ಮಾಸದಲ್ಲಿ) ಪೃಥ್ವಿಯ ಮೇಲೆ ಬರುವ ಲಹರಿಗಳಲ್ಲಿ ತಮೋಗುಣವು ಹೆಚ್ಚಿರುವ ಯಮಲಹರಿಗಳ ಪ್ರಮಾಣವು ಅಧಿಕವಾಗಿರುತ್ತದೆ. ಅವುಗಳನ್ನು ಎದುರಿಸಲು ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ. ಹಬ್ಬ ಮತ್ತು ವ್ರತಗಳ ಮೂಲಕ ಸಾತ್ತ್ವಿಕತೆಯು ಹೆಚ್ಚುವುದರಿಂದ ಚಾತುರ್ಮಾಸದಲ್ಲಿ ಹೆಚ್ಚು ಹಬ್ಬ ಮತ್ತು ವ್ರತಗಳಿವೆ. ಶಿಕಾಗೋ ಮೆಡಿಕಲ್ ಸ್ಕೂಲ್‌ನ ಸ್ತ್ರೀರೋಗತಜ್ಞರಾದ ಪ್ರೊಫೆಸರ್ ಡಾ.ಡಬ್ಲ್ಯು.ಎಸ್.ಕೋಗರ್‌ರು ನಡೆಸಿದ ಸಂಶೋಧನೆಯ ಪ್ರಕಾರ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ ಈ ನಾಲ್ಕು ತಿಂಗಳಿನಲ್ಲಿ, ವಿಶೇಷವಾಗಿ ಭಾರತದ ಸ್ತ್ರೀಯರಲ್ಲಿ ಗರ್ಭಕೋಶಕ್ಕೆ ಸಂಬಂಧಿಸಿದ ರೋಗಗಳು ಪ್ರಾರಂಭವಾಗುತ್ತವೆ ಅಥವಾ ಹೆಚ್ಚುತ್ತವೆ, ಎಂಬುದು ಕಂಡುಬಂದಿತು.
ಎ. ಚಾತುರ್ಮಾಸದಲ್ಲಿ ನಾಲ್ಕು ತಿಂಗಳುಗಳ ಕಾಲ ವ್ರತಸ್ಥರಾಗಿರಬೇಕಾಗಿರುತ್ತದೆ.
೫. ವ್ರತಗಳು
ಸಾಮಾನ್ಯ ಜನರು ಚಾತುರ್ಮಾಸದಲ್ಲಿ ಯಾವುದಾದರೊಂದು ವ್ರತವನ್ನು ಮಾಡುತ್ತಾರೆ. ಪರ್ಣಭೋಜನ (ಎಲೆಯಲ್ಲಿ ಊಟ ಮಾಡುವುದು), ಏಕಭೋಜನ (ಒಂದು ಹೊತ್ತು ಊಟ ಮಾಡುವುದು), ಅಯಾಚಿತ (ಯಾಚಿಸದೇ ಸಿಕ್ಕಷ್ಟು ಊಟ ಮಾಡುವುದು), ಏಕವಾಡಿ (ಒಂದೇ ಬಾರಿ ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಊಟ ಮಾಡುವುದು), ಮಿಶ್ರಭೋಜನ (ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಅವೆಲ್ಲವನ್ನೂ ಕಲಸಿ ತಿನ್ನುವುದು) ಮುಂತಾದ ಭೋಜನದ ನಿಯಮಗಳನ್ನು ಪಾಲಿಸಬಹುದು.
ಭಾರತಮಾತೆಯ ಉದರದಲ್ಲಿ ಜನ್ಮ ಪಡೆಯುವ ಸೌಭಾಗ್ಯ
ಅತ್ರ ಜನ್ಮಸಹಸ್ರಾಣಾಂ ಸಹಸ್ರೈರಪಿ ಕೋಟಿಭಿಃ | ಕದಾಚಿಲ್ಲಭತೇ ಜನ್ತುರ್ಮಾನುಷ್ಯಂ ಪುಣ್ಯಸಞ್ಚಯಾತ್ || – ಗರುಡಪುರಾಣ, ಕಾಂಡ ೨, ಅಧ್ಯಾಯ ೪೯, ಶ್ಲೋಕ ೧೪
ಅರ್ಥ : ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ. – (ಆಧಾರ : ಶ್ರೀ ಗೀತಾ ಸ್ವಾಧ್ಯಾಯ, ‘ವಾರ್ಷಿಕ ಸಹಯೋಗ, ಆಗಸ್ಟ್ ೨೦೧೭)