‘ಕೊರೋನಾ ರೋಗಾಣುಗಳ ಹಾವಳಿಯಿಂದ ಉದ್ಭವಿಸಿರುವ ಆಪತ್ಕಾಲೀನ ಸ್ಥಿತಿಯಲ್ಲಿ ಶ್ರಾವಣಮಾಸದ ‘ಮಂಗಳಗೌರಿಯ ವ್ರತವನ್ನು ಹೇಗೆ ಆಚರಿಸಬೇಕು ?

ಶ್ರೀ. ದಾಮೋದರ ವಝೆ

೧. ಮಂಗಳಗೌರಿಯ ವ್ರತ

‘ಶ್ರಾವಣ ಮಾಸದಲ್ಲಿ ಅನೇಕ ಸ್ತ್ರೀಯರು ‘ಮಂಗಳಗೌರಿ’ ವ್ರತವನ್ನು ಪಾಲಿಸುತ್ತಾರೆ. ನವವಧುಗಳು ಈ ವ್ರತವನ್ನು ‘ಸೌಭಾಗ್ಯಪ್ರಾಪ್ತಿ ಮತ್ತು ಪತಿಗೆ ದೀರ್ಘಾಯುಷ್ಯ ಲಭಿಸಲು ಮತ್ತು ಪುತ್ರಪ್ರಾಪ್ತಿಗಾಗಿ’, ಆಚರಿಸುತ್ತಾರೆ. ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಮಂಗಳಗೌರಿ ವ್ರತವನ್ನು ಆಚರಿಸಲಾಗುತ್ತದೆ. (ಈ ವರ್ಷ ೨೧.೭.೨೦೨೦ ರಿಂದ ‘ಶ್ರಾವಣ’ ಮಾಸ ಪ್ರಾರಂಭವಾಗುತ್ತಿದೆ. ೨೧.೭.೨೦೨೦ ಈ ದಿನವು ಮೊದಲನೆಯ ಮಂಗಳವಾರವಾಗಿದೆ.) ಅನೇಕ ಸ್ಥಳಗಳಲ್ಲಿ ಸಭಾಗೃಹದಲ್ಲಿ ಈ ವ್ರತವನ್ನು ಮಾಡುವ ಆಯೋಜನೆಯನ್ನು ಮಾಡಲಾಗುತ್ತದೆ. ‘ಮಂಗಳಗೌರಿ’ಯ ಈ ವ್ರತದ ಕಾಲಾವಧಿ ಎಂಟು ಅಥವಾ ಐದು ವರ್ಷಗಳದ್ದಾಗಿರುತ್ತದೆ. ಪ್ರಸ್ತುತ ಮಹಿಳೆಯರು ಈ ವ್ರತವನ್ನು ಐದು ವರ್ಷ ಮಾಡುತ್ತಾರೆ.

೨. ಸದ್ಯ ‘ಕೊರೋನಾ’ ರೋಗಾಣುಗಳ ಹಾವಳಿಯು ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ‘ತಮ್ಮತಮ್ಮ ಮನೆಯಲ್ಲಿಯೇ ಆದಷ್ಟು ಸೀಮಿತ ಸಂಖ್ಯೆಯ ಮಹಿಳೆಯರು ಸೇರಿ ಪೂಜೆಯನ್ನು ಹೇಗೆ ಮಾಡಬಹುದು ?’, ಎಂಬುದನ್ನು ನೋಡೋಣ

೨ ಅ. ದೇವಿಯ ಪೂಜೆ

೨ ಅ ೧. ಷೋಡಶೋಪಚಾರ ಪೂಜೆ : ದೇವಿಯ ‘ಷೋಡಶೋಪಚಾರ’ ಪೂಜೆಯನ್ನು ಮಾಡಲು ಸಾಧ್ಯವಿರುವವರು ದೇವಿಯ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಕೊನೆಗೆ ‘ಶ್ರೀ ಶಿವಮಙ್ಗಲಾಗೌರ್ಯೈ ನಮ: |’ ಈ ನಾಮಮಂತ್ರವನ್ನು ಜಪಿಸುತ್ತ ಉಪಚಾರಗಳನ್ನು ಅರ್ಪಿಸಬೇಕು.

೨ ಅ ೨. ಪಂಚೋಪಚಾರ ಪೂಜೆ : ಷೋಡಶೋಪಚಾರದ ಪೂಜೆಯನ್ನು ಮಾಡಲು ಸಾಧ್ಯವಿಲ್ಲದವರು ದೇವಿಯ ‘ಪಂಚೋಪಚಾರ’ (ಗಂಧ, ಅರಿಸಿಣ-ಕುಂಕುಮ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯವನ್ನು ತೋರಿಸುವುದು ಈ ಕ್ರಮದಿಂದ) ‘ಶ್ರೀ ಶಿವಮಙ್ಗಲಾಗೌರ್ಯೈ ನಮ: |’

ಈ ನಾಮಮಂತ್ರವನ್ನು ಜಪಿಸುತ್ತ ಪೂಜೆಯನ್ನು ಮಾಡಬೇಕು. ಪೂಜೆಯಾದ ನಂತರ ಶ್ರೀ ಶಿವಮಂಗಳಗೌರಿ ದೇವಿಯ ಆರತಿಯನ್ನು ಹಾಡಬೇಕು. ಈ ಆರತಿಯು ಬರದಿದ್ದರೆ ಇತರ ದೇವಿಯ ಆರತಿಯನ್ನು ಹಾಡಬೇಕು.

೩. ಪೂಜೆಯಾದ ನಂತರ ಸಾಧ್ಯವಿದ್ದಲ್ಲಿ ತಮ್ಮ ಕ್ಷಮತೆಗನುಸಾರ ಮುತ್ತೈದೆಯರಿಗೆ ‘ಸೌಭಾಗ್ಯಬಾಗಿನ’ವನ್ನು ಕೊಡಬೇಕು. ಸಾಧ್ಯವಾದಷ್ಟು ಸೌಭಾಗ್ಯಬಾಗಿನವೆಂದು ಸಾತ್ತ್ವಿಕ ವಸ್ತುಗಳನ್ನು ಕೊಡಬೇಕು.

೪. ಪೂಜೆಯಾದ ನಂತರ ದೇವಿಯ ಕಥೆಯನ್ನು ಓದಬೇಕು. ಯಾರಿಗೆ ಕಥೆಯನ್ನು ಓದಲು ಸಾಧ್ಯವಿಲ್ಲವೋ, ಅವರು ಅಖಂಡ ಸೌಭಾಗ್ಯಕ್ಕಾಗಿ ದೇವಿಯಲ್ಲಿ ಪ್ರಾರ್ಥಿಸಬೇಕು.

೫. ‘ಜಾಗರಣೆ’ ಮಾಡುವುದು

ದೇವಿಯ ‘ಜಾಗರಣೆ’ಯನ್ನು ಮಾಡುವ ಉದ್ದೇಶದಿಂದ ಮಹಿಳೆಯರು ರಾತ್ರಿಯಿಡಿ ಆಟವನ್ನು ಆಡುತ್ತಾರೆ. ಸದ್ಯ ‘ಕೊರೋನಾ’ದ ಸಂಕಟದಿಂದಾಗಿ ಒಟ್ಟುಸೇರಿ ಆಟವಾಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಆಟದ ಬದಲು ರಾತ್ರಿ ಯಾವುದೊಂದು ಧಾರ್ಮಿಕ ಗ್ರಂಥವನ್ನು ಓದಬೇಕು, ಉದಾ. ದೇವಿಭಾಗವತ, ದೇವಿಪುರಾಣ. ಇವುಗಳನ್ನು ಓದುವುದರಿಂದ ಆ ದೇವಿಯ ‘ಜಾಗರಣೆ’ಯೇ ಆಗುವುದು. ಕಾರಣಾಂತರದಿಂದ ಯಾರಿಗಾದರೂ ಗ್ರಂಥವು ಲಭ್ಯವಾಗದಿದ್ದಲ್ಲಿ ಅಥವಾ ಓದಲಾಗದ ಮಹಿಳೆಯರು, ‘ಶ್ರೀ ಶಿವಮಙ್ಗಲಾಗೌರ್ಯೈ ನಮ: |’ ಈ ಜಪವನ್ನು ಮಾಡಬೇಕು ಅಥವಾ ತಮ್ಮತಮ್ಮ ಕುಲದೇವತೆಯ ನಾಮಜಪವನ್ನು ಮಾಡಬೇಕು. ಇದರಿಂದಾಗಿಯೂ ದೇವಿಯ ‘ಜಾಗರಣೆ’ಯಾಗಿ ನಮಗೆ ದೇವಿಯ ಆಶೀರ್ವಾದವು ಪ್ರಾಪ್ತವಾಗುವುದು.’

– ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೭.೨೦೨೦)