ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಈಶ್ವರಪ್ರಾಪ್ತಿಯ ಧ್ಯಾಸ ಹೆಚ್ಚಾಗಿ ಪ್ರಾರ್ಥನೆ ಮತ್ತು ನಾಮಜಪ ಇವುಗಳು ತನ್ನಷ್ಟಕ್ಕೇ ನಿಂತು ಕೇವಲ ತಳಮಳವೇ ಉಳಿಯುವುದು

‘ತಳಮಳವೇ ಜೀವವನ್ನು ಮೋಕ್ಷದವರೆಗೆ ಕೊಂಡೊಯ್ಯುತ್ತದೆ. ತಳಮಳ ನಿರ್ಮಾಣವಾಗಲು ಮೊದಲು ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ಅಗತ್ಯವಿರುತ್ತದೆ. ಮುಂದೆ ಈಶ್ವರಪ್ರಾಪ್ತಿಯ ಧ್ಯಾಸವು ಹೆಚ್ಚಾದಾಗ ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ತನ್ನಷ್ಟಕ್ಕೇ ನಿಂತುಹೋಗುತ್ತದೆ. ಕೇವಲ ತಳಮಳ ಮಾತ್ರ ಉಳಿಯುತ್ತದೆ ಮತ್ತು ಅದೇ ಸಾಧಕರಿಂದ ಮುಂದಿನ ಕಾರ್ಯವನ್ನು ಮಾಡಿಸಿಕೊಳ್ಳುತ್ತದೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೦.೬.೨೦೧೯)

ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿ ಎಂದರೆ ‘ಸಾಧನೆ ಮತ್ತು ಉಳಿದ ಎಲ್ಲ ಕಾರ್ಯಗಳು ಕೇವಲ ಮಾಯೆಯೇ ಆಗಿವೆ !

‘ದಿನವಿಡೀ ಮಾಡಿದ ಕೃತಿಗಳ ಬಗ್ಗೆ ಅಭ್ಯಾಸ ಮಾಡಿದರೆ, ಅವುಗಳಲ್ಲಿ ಎಷ್ಟು ಶೇಕಡಾ ಕೃತಿಗಳನ್ನು ಕೆಲಸವೆಂದು ಮಾಡಿದೆವು ಮತ್ತು ಎಷ್ಟು ಶೇಕಡಾ ಕೃತಿಗಳನ್ನು ಸೇವೆ ಎಂದು ಮಾಡಿದೆವು ಎಂಬುದರ ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದ ಎಲ್ಲ ಕಾರ್ಯಗಳು ಕೇವಲ ಮಾಯೆಯೇ ಆಗಿವೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ