ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಬಹಳಷ್ಟು ದಿನಪತ್ರಿಕೆಗಳು ಕೇವಲ ಸುದ್ದಿಯನ್ನು ನೀಡುವುದು ಬಿಟ್ಟು ಹೆಚ್ಚೇನು ಮಾಡುತ್ತವೆ ? ಆದರೆ ಸನಾತನ ಪ್ರಭಾತವು ರಾಷ್ಟ್ರ ಮತ್ತು ಧರ್ಮಗಳ ಸಂದರ್ಭದಲ್ಲಿ ಕೃತಿಗಳಿಗಾಗಿ ಪ್ರೋತ್ಸಾಹವನ್ನು ನೀಡುತ್ತವೆ

ರಾಜಕೀಯ ಕ್ಷೇತ್ರದಲ್ಲಿಯ ಕಾರ್ಯಕರ್ತರ ವಿಷಯವು ಮಾಯೆಯದ್ದು ಆಗಿರುವುದರಿಂದ ಅವರ ಬರಹಗಳು ಹೆಚ್ಚು ಕಾಲ ಉಳಿಯುವುದಿಲ್ಲ ತದ್ವಿರುದ್ಧ ಆಧ್ಯಾತ್ಮಿಕ ಕ್ಷೇತ್ರದಲ್ಲಿಯ ಬರಹಗಳು ಬಹಳ ಕಾಲ ಅಥವಾ ಯುಗಾನುಯುಗವೂ ಉಳಿಯುತ್ತದೆ, ಉದಾ. ವೇದ, ಉಪನಿಷತ್ತುಗಳು, ಪುರಾಣಗಳು ಮುಂತಾದವುಗಳು.

ಯಾರು ಹಿಂದೂಗಳು ಧರ್ಮದ ಮೇಲೆ ಟೀಕೆಯನ್ನು ಮಾಡುತ್ತಾರೆ ಅಂತಹ ಅಜ್ಞಾನಿ ಹಿಂದೂಗಳು ಈ ಜಗತ್ತಿನಲ್ಲಿ ಬೇರೆ ಯಾರು ಇಲ್ಲ.

ದೇವರು ಭೂಮಿ, ನೀರು, ಗಾಳಿ ಮುಂತಾದವುಗಳನ್ನು ಉಚಿತವಾಗಿ ನೀಡುತ್ತಾನೆ. ಆದರೂ ಮಾನವನಿಂದಾಗಿ ಮಾನವನಿಗೆ ಪ್ರತಿಯೊಂದು ವಿಷಯಗಳನ್ನು ಖರೀದಿಸಬೇಕಾಗುತ್ತದೆ

ಯಾರಿಗಾದರೂ ಸಹಾಯ ಮಾಡುವಾಗ ಅವನ ಮುಖ್ಯ ಅಡಚಣೆ ಪ್ರಾರಬ್ಧದಿಂದ ಬಂದಿದೆ, ಇದನ್ನು ಗಮನದಲ್ಲಿಟ್ಟು ಅವನಿಗೆ ಸಾಧನೆಯನ್ನು ಮಾಡಲು ಹೇಳಬೇಕು.

ರಾಜಕೀಯ ಪಕ್ಷಗಳು ನಾವು ಅದನ್ನು ಕೊಡುತ್ತೇವೆ ಇದನ್ನು ಕೊಡುತ್ತೇವೆ, ಎಂದು ಹೇಳಿ ಜನತೆಯನ್ನು ಸ್ವಾರ್ಥಿಯನ್ನಾಗಿ ಮಾಡುತ್ತವೆ ಮತ್ತು ಸ್ವಾರ್ಥದಿಂದ ಜನರಲ್ಲಿ ಜಗಳಗಳಾಗುತ್ತವೆ. ತದ್ವಿರುದ್ಧ ಸಾಧನೆಯು ತ್ಯಾಗವನ್ನು ಮಾಡಲು ಕಲಿಸುತ್ತದೆ. ಇದರಿಂದ ಜನತೆಯಲ್ಲಿ ಜಗಳಗಳಾಗದೇ ಎಲ್ಲರೂ ಒಂದೇ ಕುಟುಂಬವೆಂದು ಆನಂದದಿಂದ ಇರುತ್ತಾರೆ.

ಶಾಲೆಯಿಂದ ಪದವ್ಯೋತ್ತರ ಶಿಕ್ಷಣದವರೆಗೆ ಯಾವುದೇ ಶಿಕ್ಷಣದಲ್ಲಿ ಮಾನವೀಯತೆಯನ್ನು ಕಲಿಸದಿರುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಜನತೆಯನ್ನು ದೋಚುವ ವ್ಯಾಪಾರಿಗಳು ಮತ್ತು ನೌಕರರು ತಯಾರಾಗಿದ್ದಾರೆ.