ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಬುದ್ಧಿಜೀವಿಗಳಿಗೆ ಜಿಜ್ಞಾಸೆಯಿಲ್ಲದಿರುವುದರಿಂದ ಅವರು ತಮ್ಮಲ್ಲಿರುವ ಅಲ್ಪ ಜ್ಞಾನದಲ್ಲಿ (ಅಜ್ಞಾನದಲ್ಲಿ) ಇರುತ್ತಾರೆ ಅವರಿಗೆ ಮುಂದು ಮುಂದಿನದು ಏನೂ ತಿಳಿಯುವುದಿಲ್ಲ.

ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರಗಳಲ್ಲಿ ರಾಷ್ಟ್ರ-ಧರ್ಮಕ್ಕಾಗಿ ಕಾರ್ಯವನ್ನು ಮಾಡಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ಕಳೆದ ೭೨ ವರ್ಷಗಳಲ್ಲಿ ಅನೇಕ ಸಲ ಸಿದ್ಧವಾಗಿದೆ. ಈಗ ಅದರ ಜೊತೆಗೆ ಆಧ್ಯಾತ್ಮಿಕ ಸ್ತರದಲ್ಲಿಯು ಕಾರ್ಯ ಮಾಡುವುದು ಅತ್ಯಾವಶ್ಯಕವಾಗಿದೆ, ಇದನ್ನು ಎಲ್ಲರೂ ಗಮನದಲ್ಲಿಡುವುದು ಆವಶ್ಯಕವಾಗಿದೆ.

ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷವನ್ನು ಬದಲಾಯಿಸುವವರು ಸಾವಿರಾರು ಜನರಿರುತ್ತಾರೆ. ಆದರೆ ಸ್ವಾರ್ಥತ್ಯಾಗಿ ಸಾಂಪ್ರದಾಯಿಕರ ಮನಸ್ಸಿನಲ್ಲಿ ಸಂಪ್ರದಾಯ ಬದಲಾಯಿಸುವ ವಿಚಾರವು ಒಮ್ಮೆಯು ಬರುವುದಿಲ್ಲ.

ಪಾಶ್ಚಾತ್ಯ ಸಂಸ್ಕೃತಿ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳಿಗೆ ಸುಖ ನೀಡುವುದಕ್ಕಾಗಿ ಚಡಪಡಿಸುತ್ತಿದ್ದರೆ ಹಿಂದೂ ಸಂಸ್ಕೃತಿ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತದೆ.

ಎಲ್ಲಿ ಯಂತ್ರಗಳ ಮೂಲಕ ಸಂಶೋಧನೆಯನ್ನು ಮಾಡಿ ಬದಲಾದ ನಿಷ್ಕರ್ಷಗಳನ್ನು ಹೇಳುವ ವಿಜ್ಞಾನಿಗಳು ಮತ್ತು ಎಲ್ಲಿ ಲಕ್ಷಗಟ್ಟಲೆ ವರ್ಷಗಳ ಹಿಂದೆ ಯಂತ್ರಗಳಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಅಂತಿಮ ಸತ್ಯವನ್ನು ಹೇಳುವ ಋಷಿಗಳು

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಇತರ ಎಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ಪದ್ಧತಿಯಿಂದ ರಾಷ್ಟ್ರದ ಪರಾಕಾಷ್ಠೆಯ ಅಧೋಗತಿಯಾಗಿದೆ.

ಸತ್ಯಯುಗದಲ್ಲಿ ನಿಯತಕಾಲಿಕೆಗಳು, ದೂರದರ್ಶನ, ಜಾಲತಾಣಗಳು ಮುಂತಾದವುಗಳ ಆವಶ್ಯಕತೆಯೇ ಇರಲಿಲ್ಲ; ಏಕೆಂದರೆ ಕೆಟ್ಟ ವಾರ್ತೆಗಳು ಇರುತ್ತಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುತ್ತಿದ್ದುದರಿಂದ ಆನಂದದಿಂದ ಇದ್ದರು.

ಧರ್ಮ ಶಬ್ದದ ಅರ್ಥ

ಕೆಟ್ಟಶಕ್ತಿಗಳಿಂದ ಜಗತ್ತಿನ ರಕ್ಷಣೆಯನ್ನು ಮಾಡುವ ಹಾಗೆಯೇ ಮಾನವನಿಗೆ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯೊಂದಿಗೆ ಮೋಕ್ಷಪ್ರಾಪ್ತಿಯನ್ನು ಮಾಡಿಕೊಡುವ ತತ್ತ್ವವೆಂದರೆ ಧರ್ಮ ! ಹೆಚ್ಚಿನ ವಿದೇಶಿ ಭಾಷೆಗಳಲ್ಲಿ ಧರ್ಮ ಶಬ್ದಕ್ಕೆ ಸಮಾನಾರ್ಥ ಶಬ್ದವು ಇಲ್ಲ ! ಹಾಗಿರುವುದರಿಂದ ಅವರಿಗೆ ಧರ್ಮಾಚರಣೆ ಮಾಡುವುದು ಕಠಿಣವಾಗುತ್ತದೆ.

ಹಿಂದೂ ಧರ್ಮದಲ್ಲಿ ಹೇಳಿದಂತೆ ಆಳವಾದ ಜ್ಞಾನವು ಇತರ ಒಂದಾದರೂ ಪಂಥದಲ್ಲಿ ಇದೆಯೇ ? ವಿಜ್ಞಾನಕ್ಕಾದರೂ ಇದರ ಅರಿವಿದೆಯೇ ? – (ಪರಾತ್ಪರ ಗುರು) ಡಾ. ಆಠವಲೆ.