ಎಲ್ಲೆಡೆ ಹರಡುತ್ತಿರುವ ‘ಕೊರೋನಾ ಸೋಂಕಿಗೆ ಹೆದರದೇ ಮುಂದಿನ ಸ್ವಯಂಸೂಚನೆಯನ್ನು ನೀಡಿ ಆತ್ಮಬಲವನ್ನು ಹೆಚ್ಚಿಸಿರಿ !
‘ಸದ್ಯ ಭಾರತವಲ್ಲದೇ, ಇತರ ಕೆಲವು ರಾಷ್ಟ್ರಗಳಲ್ಲಿಯೂ ‘ಕೊರೋನಾ ಸೋಂಕಿನ ರೋಗಾಣು ಉತ್ಪನ್ನವಾಗಿದೆ. ಇದರಿಂದ ಎಲ್ಲೆಡೆಯ ಜನ ಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಚಿಕ್ಕಪುಟ್ಟ ಕಾರಣಗಳಿಂದಲೂ ಮನಸ್ಸು ವಿಚಲಿತಗೊಳ್ಳುವುದು, ಚಿಂತೆಯೆನಿಸುವುದು, ಅಲ್ಲದೇ ಭಯವೆನಿಸಿ ಅಸ್ವಸ್ಥತೆಯಾಗುವುದು, ಈ ರೀತಿಯ ಸ್ವಭಾವದೋಷಗಳ ಪ್ರಕಟೀಕರಣವಾಗುವ ಸಾಧ್ಯತೆಯಿರುತ್ತದೆ. ಇಂತಹ ಪ್ರಸಂಗಗಳಲ್ಲಿ ಯೋಗ್ಯ ಸ್ವಯಂಸೂಚನೆಯನ್ನು ನೀಡಿದರೆ, ಸದ್ಯದ ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗುತ್ತದೆ. ಈ ದೃಷ್ಟಿಯಿಂದ ಮನೋಬಲ ಹೆಚ್ಚಾಗಿ ಸ್ಥಿರವಾಗಿರಲು ‘ಅಂತರ್ಮನಕ್ಕೆ ಯಾವ ಸ್ವಯಂಸೂಚನೆಯನ್ನು ನೀಡಬಹುದು ?, ಎನ್ನುವುದನ್ನು ಮುಂದೆ ನೀಡಲಾಗಿದೆ.
೧. ಪ್ರಸಂಗ : ‘ನನಗೆ ಕೊರೋನಾ ರೋಗಾಣುವಿನ ಸೋಂಕು ತಗುಲಬಹುದು, ಎನ್ನುವ ವಿಚಾರದಿಂದ ಭಯವಾಗುವುದು
೧ ಅ. ಸ್ವಯಂಸೂಚನೆ : ಯಾವ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ರೋಗಾಣುವಿನ ಸೋಂಕು ತಗಲಬಹುದು, ಎನ್ನುವ ವಿಚಾರದಿಂದ ಭಯವಾಗುವುದೋ, ಆಗ ‘ನಾನು ಅಗತ್ಯವಿರುವ ಎಲ್ಲ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸುತ್ತಿದ್ದೇನೆ, ಎಂದು ನೆನಪು ಮಾಡಿಕೊಳ್ಳುತ್ತಿದ್ದೇನೆ ಮತ್ತು ದಿನವಿಡಿ ಆದಷ್ಟು ಹೆಚ್ಚು ಸಮಯ ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡಿ ಸತ್‌ನಲ್ಲಿ ಇರುತ್ತೇನೆ.
೨. ಪ್ರಸಂಗ : ‘ನನಗೆ ಕೊರೋನಾ ರೋಗಾಣು ಸೋಂಕು ತಗುಲಿದರೆ ನಾನು ಸಾಯುತ್ತೇನೆ, ಎಂದು ಭಯವಾಗುವುದು
೨ ಅ. ಸ್ವಯಂಸೂಚನೆ : ಯಾವಾಗ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ರೋಗಾಣು ಸೋಂಕು ತಗುಲಿದರೆ ನಾನು ಸಾಯುತ್ತೇನೆ, ಎಂದು ವಿಚಾರ ಬರುವುದೋ, ಆಗ ನಾನು ‘ಈ ರೋಗಾಣುವಿನ ಸೋಂಕು ತಗುಲಿರುವ ಶೇ. ೮೦ ರಷ್ಟು ರೋಗಿಗಳ ರೋಗದ ಸ್ವರೂಪ ಸೌಮ್ಯವಾಗಿರುತ್ತದೆ, ಎನ್ನುವುದು ನನಗೆ ಗಮನಕ್ಕೆ ಬಂದು ನಾನು ಸಕಾರಾತ್ಮಕವಾಗಿರುತ್ತೇನೆ ಮತ್ತು ಕುಟುಂಬದವರು, ಹಿತಚಿಂತಕರು ಹಾಗೂ ಸರಕಾರಿ ಇಲಾಖೆಗಳು ನೀಡಿರುವ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಸರಿಯಾದ ರೀತಿಯಲ್ಲಿ ಕಾಳಜಿ ತೆಗೆದುಕೊಳ್ಳುತ್ತೇನೆ.
೩. ಪ್ರಸಂಗ : ಔಷಧೋಪಚಾರವನ್ನು ಮಾಡಿಯೂ ಮಗಳ ನೆಗಡಿ/ಜ್ವರ ಕಡಿಮೆಯಾಗದ ಕಾರಣದಿಂದ ಅವಳ ಬಗ್ಗೆ ಚಿಂತೆಯೆನಿಸುವುದು
೩ ಅ. ಸ್ವಯಂಸೂಚನೆ : ಯಾವಾಗ ಮಗಳಿಗೆ ಬಹಳಷ್ಟು ದಿನಗಳಿಂದ ನೆಗಡಿ / ಜ್ವರ ಬಂದಾಗ ನನ್ನ ಮನಸ್ಸಿನಲ್ಲಿ ‘ಪ್ರತಿಯೊಂದು ನೆಗಡಿ/ಜ್ವರ ಕೊರೋನಾ ರೋಗಾಣುವಿನ ಸೋಂಕಿನಿಂದ ಆಗಿರುವುದಿಲ್ಲ, ಎಂದು ನನಗೆ ಅರಿವಾಗುವುದು ಮತ್ತು ದೇವರ ಮೇಲೆ ಶ್ರದ್ಧೆಯಿಟ್ಟು ನಾನು ಆಧುನಿಕ ವೈದ್ಯರು ತಿಳಿಸಿದಂತೆ ಅವಳಿಗೆ ಔಷಧಿಗಳನ್ನು ನೀಡುತ್ತೇನೆ ಮತ್ತು ಅವಳ ಸ್ಥಿತಿಯನ್ನು ಆಯಾಯ ಸಮಯದಲ್ಲಿ ವೈದ್ಯರಿಗೆ ತಿಳಿಸುತ್ತೇನೆ.
೪. ಪ್ರಸಂಗ : ‘ಕೊರೋನಾ ರೋಗಾಣುವಿನ ಸಾಂಕ್ರಾಮಿಕತೆಯಿಂದ ನನ್ನ ಕುಟುಂಬದವರಿಗೆ ನನ್ನನ್ನು ಭೇಟಿಯಾಗಲು ಪ್ರಯಾಣ ಮಾಡಲು ಆಗುತ್ತಿಲ್ಲ, ಎಂದು ಚಿಂತೆಯಾಗುವುದು.
೪ ಅ. ಸ್ವಯಂಸೂಚನೆ : ಯಾವಾಗ ‘ನನ್ನ ಕುಟುಂಬದವರಿಗೆ ನನ್ನನ್ನು ಭೇಟಿಯಾಗಲು ಪ್ರಯಾಣ ಮಾಡಲು ಆಗುವುದಿಲ್ಲ, ಎಂಬ ವಿಚಾರದಿಂದ ಚಿಂತೆಯೆನಿಸುವುದೋ ಆಗ ‘ಸಾಂಕ್ರಾಮಿಕತೆಯ ಕಾಲದಲ್ಲಿ ಎಲ್ಲರ ಸುರಕ್ಷತೆಗಾಗಿ ಪ್ರಯಾಣವನ್ನು ಮಾಡದಿರುವುದೇ ಒಳ್ಳೆಯದಿದೆ ಮತ್ತು ಇದು ತಾತ್ಕಾಲಿಕ ಸ್ಥಿತಿಯಾಗಿದೆ, ಎಂದು ನನಗೆ ಅರಿವಾಗುವುದು ಮತ್ತು ನಾನು ‘ನನ್ನ ಮತ್ತು ಕುಟುಂಬದವರಿಗೆ ಕೊರೋನಾ ರೋಗಾಣುವಿನ ಸೋಂಕು ತಗಲಬಾರದು, ಎಂದು ಸರಕಾರವು ಸುರಕ್ಷತೆಯ ದೃಷ್ಟಿಯಿಂದ ನೀಡಿರುವ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಕಾಳಜಿಯನ್ನು ತೆಗೆದುಕೊಳ್ಳುತ್ತೇನೆ.
೫. ಪ್ರಸಂಗ : ಸದ್ಯ ಸಂಚಾರವನ್ನು ನಿಷೇಧಿಸಲಾಗಿದ್ದು ಎಲ್ಲೆಡೆ ಜೀವನಾವಶ್ಯಕ ಸಾಮಾಗ್ರಿಗಳ (ಹಾಲು, ಆಹಾರ ಧಾನ್ಯ, ಔಷಧಿಗಳು ಇತ್ಯಾದಿ) ಕೊರತೆ ಭಾಸವಾಗುತ್ತಿರುವುದರಿಂದ ‘ನನಗೆ ಅವುಗಳು ದೊರೆಯುವುದೇ ? ಎಂದು ಚಿಂತೆಯಾಗುವುದು
೫ ಅ. ಸ್ವಯಂಸೂಚನೆ : ಯಾವಾಗ ನನಗೆ ‘ಸದ್ಯ ಜೀವನಾವಶ್ಯಕ ಸಾಮಾಗ್ರಿಗಳ ಕೊರತೆ ಭಾಸವಾಗುತ್ತಿರುವುದರಿಂದ ನನಗೆ ಆ ಸಾಮಾಗ್ರಿಗಳು ದೊರೆಯುವುದೇ ?, ಎಂದು ಚಿಂತೆಯಾಗುವುದೋ, ಆಗ ‘ಭಾರತ ಸರಕಾರವು ಎಲ್ಲ ನಾಗರಿಕರಿಗೆ ಈ ಸಾಮಾಗ್ರಿಗಳು ದೊರಕಬೇಕು, ಎಂದು ಅವುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಯನ್ನು ಮಾಡಿದೆ, ಎಂದು ನನಗೆ ಅರಿವಾಗುವುದು. ಆದುದರಿಂದ ನಾನು ನಿಶ್ಚಿಂತೆಯಿಂದಿದ್ದು, ನಾಮಜಪ ಮತ್ತು ಪ್ರಾರ್ಥನೆಯ ಮೇಲೆ ಗಮನ ವನ್ನು ಕೇಂದ್ರೀಕರಿಸುತ್ತೇನೆ.
೬. ಸ್ವಯಂಸೂಚನೆಯನ್ನು ನೀಡುವ ಪದ್ಧತಿ
ನಮ್ಮ ಮನಸ್ಸಿನಲ್ಲಿ ಮೇಲಿನಂತೆ ಯಾವ ಅಯೋಗ್ಯ ವಿಚಾರಗಳ ಒತ್ತಡ ಅಥವಾ ಚಿಂತೆಯಾಗುತ್ತದೆಯೋ, ಆ ವಿಚಾರಗಳ ಮೇಲೆ ೧೫ ದಿನಗಳ ಅಥವಾ ವಿಚಾರ ಕಡಿಮೆಯಾಗುವ ವರೆಗೆ ಸಂಬಂಧಪಟ್ಟ ಸ್ವಯಂಸೂಚನೆಯನ್ನು ನೀಡಬೇಕು. ಈ ಸ್ವಯಂಸೂಚನೆಯನ್ನು ದಿನದಲ್ಲಿ ೫ ಸತ್ರ (ಬಾರಿ) ನೀಡಬೇಕು. ಒಂದು ಸ್ವಯಂಸೂಚನೆಯ ಸತ್ರದಲ್ಲಿ ಒಂದು ಸ್ವಯಂಸೂಚನೆಯನ್ನು ೫ ಸಲ ಅಂತರ್ಮನಕ್ಕೆ ನೀಡಬೇಕು.
೭. ಮನಸ್ಸು ಏಕಾಗ್ರಗೊಳಿಸಿ ಸ್ವಯಂಸೂಚನೆಯ ಸತ್ರವನ್ನು ಮಾಡಿರಿ ಮತ್ತು ಕಡಿಮೆ ಸಮಯದಲ್ಲಿ ಮನಸ್ಸಿನಲ್ಲಿರುವ ಆಯೋಗ್ಯ ವಿಚಾರಗಳು ಕಡಿಮೆಯಾಗುವುದನ್ನು ಅನುಭವಿಸಿರಿ !
ಮನಸ್ಸು ಏಕಾಗ್ರತೆಗೊಳಿಸಿ ಸ್ವಯಂಸೂಚನೆಯ ಸತ್ರಗಳನ್ನು ಮಾಡಿದರೆ ಅಂತರ್ಮನದಲ್ಲಿ ಸೂಚನೆಗಳ ಸಂಸ್ಕಾರವಾಗಿ ‘ಮನಸ್ಸಿನಲ್ಲಿರುವ ಒತ್ತಡ ಅಥವಾ ಚಿಂತೆಯ ವಿಚಾರಗಳು ಕಡಿಮೆ ಸಮಯದಲ್ಲಿ ಕಡಿಮೆಯಾಗುತ್ತದೆ, ಎಂದು ಅನೇಕ ಜನರು ಅನುಭವಿಸಿದ್ದಾರೆ. ಇದರಿಂದ ಮನಸ್ಸು ಏಕಾಗ್ರಗೊಳಿಸಿ ಸ್ವಯಂಸೂಚನೆಯ ಸತ್ರವನ್ನು ಮಾಡಬೇಕು. ಮನಸ್ಸಿನಲ್ಲಿ ಬರುವ ನಿರರ್ಥಕ ವಿಚಾರಗಳಿಂದ ಸ್ವಯಂಸೂಚನೆಯ ಸತ್ರಗಳನ್ನು ಏಕಾಗ್ರತೆಯಿಂದ ಕೊಡಲು ಆಗದಿದ್ದರೆ ಸ್ವಲ್ಪ ದೊಡ್ಡ ಸ್ವರದಲ್ಲಿ (ಗುಣುಗುಣಿಸುತ್ತ) ಸ್ವಯಂಸೂಚನೆಯ ಸತ್ರವನ್ನು ನೀಡಬಹುದು ಅಥವಾ ಕಾಗದದ ಮೇಲೆ ಬರೆದಿರುವ ಸ್ವಯಂಸೂಚನೆಯನ್ನು ಓದಬಹುದು. ಇದರಿಂದ ಬೇರೆ ವಿಚಾರಗಳೆಡೆಗೆ ಗಮನ ಹೋಗದೆ ಅದು ತನ್ನಿಂತಾನೇ ಕಡಿಮೆಯಾಗುತ್ತದೆ ಮತ್ತು ಸ್ವಯಂಸೂಚನೆ ಸತ್ರ ಪರಿಣಾಮಕಾರಿಯಾಗುತ್ತದೆ. ದೊಡ್ಡ ಧ್ವನಿಯಲ್ಲಿ ಸೂಚನೆಯ ಸತ್ರವನ್ನು ನೀಡುವಾಗ ‘ಇತರರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು.
ಮೇಲಿನಂತೆ ಬೇರೆ ಯಾವ ವಿಚಾರಗಳಿಂದ ಒತ್ತಡ, ಚಿಂತೆ, ಕಾಳಜಿ ಇತ್ಯಾದಿ ನಿರ್ಮಾಣವಾಗುತ್ತಿದ್ದರೆ, ಅದಕ್ಕೂ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬಹುದು.
(ಮನಸ್ಸಿನ ಸಮಸ್ಯೆಯನ್ನು ದೂರವಾಗಲು ‘ಮನಸ್ಸಿಗೆ ಯೋಗ್ಯ ಸ್ವಯಂಸೂಚನೆಯನ್ನು ನೀಡುವುದು, ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ಒಂದು ಭಾಗವಾಗಿದೆ. ಸಂಪೂರ್ಣ ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ವಿಷಯದ ಮಾಹಿತಿಯನ್ನು ಸನಾತನದ ಗ್ರಂಥಮಾಲಿಕೆ ‘ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ (ಖಂಡ ೭) ಈ ಗ್ರಂಥದಲ್ಲಿ ನೀಡಲಾಗಿದೆ.
‘ಸದ್ಯದ ಪ್ರತಿಕೂಲ ಪರಿಸ್ಥಿತಿಯಲ್ಲಿ ದೇವರೇ ನಮ್ಮನ್ನು ರಕ್ಷಿಸುವವನಿದ್ದಾನೆ, ಎಂಬ ಬಗ್ಗೆ ಶ್ರದ್ಧೆಯನ್ನಿಟ್ಟು, ಸಾಧನೆಯನ್ನು ಹೆಚ್ಚಿಸಿರಿ !
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೭.೩.೨೦೨೦)