ಸೇನಾ ಶಕ್ತಿಯನ್ನು ಹೆಚ್ಚಿಸಲು ಭಾರಿ ಪ್ರಮಾಣದ ಹಣ ಸುರಿಯುತ್ತಿರುವುದರಿಂದ ಪಾಕ್‌ನ ಈ ದುಸ್ಥಿತಿ! – ತಜ್ಞರ ಅಭಿಪ್ರಾಯ

ಇಸ್ಲಾಮಾಬಾದ್ (ಪಾಕಿಸ್ತಾನ) – ವಿಶ್ವದ ಎಲ್ಲಾ ಖಂಡಗಳ ಹಸಿವಿನ ಕುರಿತು ವಿಶ್ವಸಂಸ್ಥೆಯು ೨೦೨೫ ರ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ವಿಶ್ವದ ಹಲವು ಬಡ ಪ್ರದೇಶಗಳಲ್ಲಿ ಹಸಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದಾಗ್ಯೂ, ಪಾಕಿಸ್ತಾನದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ‘ಯುರೇಷಿಯನ್ ಟೈಮ್ಸ್’ ನೀಡಿರುವ ವಿಶ್ವಸಂಸ್ಥೆಯ ವರದಿಯ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಶೇಕಡಾ ೩೭% ರಷ್ಟು ಭಾರಿ ಏರಿಕೆಯಾಗಿದೆ. ಹಲವು ತಜ್ಞರು ಇದನ್ನು ಸೇನೆಗಾಗಿ ಮಾಡಲಾಗುತ್ತಿರುವ ಹೆಚ್ಚುವರಿ ವೆಚ್ಚಕ್ಕೆ ಜೋಡಿಸಿದ್ದಾರೆ. ಬಡವರ ಹಕ್ಕಿನ ಹಣವನ್ನು ಸೇನೆಯ ಮೇಲೆ ವೆಚ್ಚ ಮಾಡುತ್ತಿರುವುದು ಪಾಕಿಸ್ತಾನದ ಆರ್ಥಿಕ ಸಂಕಷ್ಟಗಳನ್ನು ಹೆಚ್ಚಿಸುತ್ತಿದೆ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.
ವರದಿಯಲ್ಲಿರುವ ಅಂಕಿ-ಅಂಶಗಳು ಏನು ಹೇಳುತ್ತವೆ?
೧. ಜಗತ್ತಿನಲ್ಲಿ ಹಸಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ೨೦ ವರ್ಷಗಳ ಹಿಂದೆ, ಅಂದರೆ ೨೦೦೪-೨೦೦೫ ರಲ್ಲಿ ವಿಶ್ವದ ಶೇಕಡಾ ೧೪% ರಷ್ಟು ಜನಸಂಖ್ಯೆಯು ಹಸಿವನ್ನು ಎದುರಿಸುತ್ತಿತ್ತು. ಈಗ ಈ ಸಂಖ್ಯೆ ಕಡಿಮೆಯಾಗಿ ಶೇಕಡಾ ೭.೮% ಕ್ಕೆ ಇಳಿದಿದೆ.
೨. ೨೦೨೫ ರ ವರ್ಷದಲ್ಲಿ ಸತತ ಮೂರನೇ ವರ್ಷವೂ ಜಾಗತಿಕ ಹಸಿವಿನ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ವಿಶ್ವದ ೬೪.೫ ಕೋಟಿ ಜನರು, ಅಂದರೆ ಜಾಗತಿಕ ಜನಸಂಖ್ಯೆಯ ಶೇಕಡಾ ೭.೮% ರಷ್ಟು ಭಾಗವು ಹಸಿವನ್ನು ಎದುರಿಸುತ್ತಿತ್ತು. ಈ ಸಂಖ್ಯೆಯು ೨೦೨೪ ರಲ್ಲಿ ಶೇಕಡಾ ೮.೧% ಹಾಗೂ ೨೦೨೨ ರಲ್ಲಿ ಶೇಕಡಾ ೮.೬% ರಷ್ಟಿತ್ತು.
೩. ೨೫ ವರ್ಷಗಳ ಹಿಂದಿನವರೆಗೆ ಚೀನಾದಲ್ಲೂ ಹಸಿವಿನ ಸಮಸ್ಯೆಯಿತ್ತು. ಆದರೀಗ ಈ ಸಮಸ್ಯೆ ಪರಿಹರಿಸಿದ್ದು, ಭಾರತದಲ್ಲೂ ಹಸಿವಿನ ಸಮಸ್ಯೆ ವಿರುದ್ಧ ವೇಗವಾಗಿ ಕೆಲಸ ನಡೆಯುತ್ತಿದೆ.
ಸೇನಾ ಶಕ್ತಿ ಹೆಚ್ಚಿಸಲು ಪಾಕಿಸ್ತಾನ ಸುರಿಸುತ್ತಿದೆ ಭಾರೀ ಹಣ!
ಪಾಕಿಸ್ತಾನವು ಅಪೌಷ್ಟಿಕತೆ ಮತ್ತು ಆಹಾರ ಭದ್ರತೆಯ ವಿಷಯದಲ್ಲಿ ಕೊನೆಯ ಸ್ಥಾನಗಳಲ್ಲಿದ್ದರೂ, ರಕ್ಷಣಾ ವೆಚ್ಚದ ವಿಷಯದಲ್ಲಿ ಏಷ್ಯಾದಲ್ಲಿಯೇ ಅತ್ಯುನ್ನತ ದೇಶಗಳಲ್ಲಿ ಸೇರಿದೆ. ರಕ್ಷಣಾ ವೆಚ್ಚಕ್ಕೆ ಅನುಗುಣವಾಗಿ ೨೦೨೫ ರಲ್ಲಿ ಪಾಕಿಸ್ತಾನವು ಏಷ್ಯಾದಲ್ಲಿ ೮ನೇ ಸ್ಥಾನದಲ್ಲಿತ್ತು. ೨೦೨೬-೨೦೨೭ ರ ಸಾಲಿಗಾಗಿ ೧೦.೮ ಬಿಲಿಯನ್ ಡಾಲರ್ (೧ ಲಕ್ಷ ಕೋಟಿ ಭಾರತೀಯ ರೂಪಾಯಿಗೂ ಹೆಚ್ಚು) ರಕ್ಷಣಾ ಬಜೆಟ್ ಘೋಷಿಸಿತು. ಇದು ೨೦೨೫ ಕ್ಕೆ ಹೋಲಿಸಿದರೆ ಶೇಕಡಾ ೧೮% ರಷ್ಟು ಹೆಚ್ಚಾಗಿದೆ.
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ನೇಪಾಳದಿಂದ ಭಾರತೀಯ ಕರೆನ್ಸಿ ಮೇಲಿನ ನಿಷೇಧ ಹಿಂಪಡೆ
ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿಯ ಬಾಂಗ್ಲಾದೇಶದ ರಹಸ್ಯ ಭೇಟಿಯಿಂದ ಚರ್ಚೆಗೆ ವೇಗ
‘ಪ್ರಸ್ತುತ ಕೇಂದ್ರ ಸರಕಾರವು ಪಾಕಿಸ್ತಾನವನ್ನು ಅನುಸರಿಸುತ್ತಿದೆಯಂತೆ !’
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ