ಮೂಲತಃ ಹಿಂದೂವಾಗಿದ್ದ ಪಾದ್ರಿಯು ಕ್ರೈಸ್ತ ಯುವತಿಯ ಪ್ರೇಮಪಾಶಕ್ಕೆ ಸಿಲುಕಿ ಮತಾಂತರಗೊಂಡಿದ್ದ
3 ದಶಕಗಳಿಂದ ಮುಗ್ಧ ಹಿಂದೂಗಳ ಮತಾಂತರ ಮಾಡುತ್ತಿದ್ದನು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿಯ ಮೋಹನಲಾಲಗಂಜ್ ಪ್ರದೇಶದಲ್ಲಿ ಮತಾಂತರದಲ್ಲಿ ತೊಡಗಿದ್ದ ಅಂತರರಾಜ್ಯ ಗ್ಯಾಂಗ್‌ನ ಚಟುವಟಿಕೆಗಳನ್ನು ಬಯಲಿಗೆಳೆಯಲಾಗಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ನ ಮುಖ್ಯ ಸೂತ್ರಧಾರ ಡೇನಿಯಲ್ ಮತ್ತು ಆತನ ಪತ್ನಿ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಧಾರ್ಮಿಕ ಸಾಹಿತ್ಯ, ಮತಾಂತರದ ಪುಸ್ತಕಗಳು, ಬ್ಯಾಂಕ್ ಪಾಸಬುಕ್, ಕಾರು ಮತ್ತು ಒಂದು ಡೈರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ ಉಪಾಯುಕ್ತ ರಲ್ಲಾಪಲ್ಲಿ ವಸಂತ ಕುಮಾರ ನೀಡಿದ ಆಘಾತಕಾರಿ ಮಾಹಿತಿ !
೧. ಈ ಗ್ಯಾಂಗ್‌ನ ಮುಖ್ಯ ಸೂತ್ರಧಾರ ಡೇನಿಯಲ್ ನ ಮೂಲ ಹೆಸರು ಬಾಲ ಸುಬ್ರಹ್ಮಣ್ಯಂ ಎಂದಾಗಿತ್ತು. ಆತ ಮೂಲತಃ ತಮಿಳುನಾಡಿನ ನಿವಾಸಿ. ಆತನಿಗೆ 16 ವರ್ಷವಾಗಿದ್ದಾಗ ಸುಬಲಾ ಎಂಬ ಕ್ರೈಸ್ತ ಯುವತಿಯ ಪ್ರೇಮಪಾಶಕ್ಕೆ ಸಿಲುಕಿದ್ದ. ಆಕೆಯ ಮಾತಿನಂತೆ ಆತ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದ. (ಕೇವಲ ಮುಸ್ಲಿಂ ಯುವತಿಯರು ಮಾತ್ರವಲ್ಲದೆ, ಕ್ರೈಸ್ತ ಯುವತಿಯರೂ ಹಿಂದೂ ಯುವಕರ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರುತ್ತಾರೆ ಎಂಬುದನ್ನು ಗಮನಿಸಿ ! – ಸಂಪಾದಕರು)
೨. ವಿವಾಹದ ನಂತರ ಡೇನಿಯಲ್ ತಮಿಳುನಾಡಿನ ಎಫ್.ಜಿ.ಪಿ.ಸಿ. ಚರ್ಚ್‌ನ ಸೂಚನೆಯಂತೆ ಮತಾಂತರದ ಕೆಲಸವನ್ನು ಪ್ರಾರಂಭಿಸಿದನು. 1998 ರಲ್ಲಿ ಈ ದಂಪತಿಯನ್ನು ಲಕ್ಷ್ಮಣಪುರಿಗೆ ಕಳುಹಿಸಲಾಯಿತು. ಡೇನಿಯಲ್ ನಿಗೆ ವಾರಾಣಸಿ ಪ್ರಾಂತ್ಯದ ಪಾದ್ರಿಯ ಜವಾಬ್ದಾರಿಯನ್ನು ನೀಡಿ, ಪ್ರತಿ ವರ್ಷ ಗರಿಷ್ಠ ಸಂಖ್ಯೆಯ ಜನರ ಮತಾಂತರ ಮಾಡುವ ವಾರ್ಷಿಕ ಗುರಿಯನ್ನು ನೀಡಲಾಗುತ್ತಿತ್ತು. ಅದಕ್ಕೆ ಪ್ರತಿಯಾಗಿ ಚರ್ಚ್‌ನಿಂದ ಬೃಹತ ಪ್ರಮಾಣದ ಧನಸಹಾಯವನ್ನು ಕಳುಹಿಸಲಾಗುತ್ತಿತ್ತು.
೩. ಈ ಗ್ಯಾಂಗ್ ಬಡ ಮತ್ತು ಸಂಕಷ್ಟದಲ್ಲಿರುವ ಗ್ರಾಮಸ್ಥರನ್ನು ಗುರಿಯಾಗಿಸಿಕೊಳ್ಳುತ್ತಿತ್ತು. ಮೊಣಕಾಲು ನೋವು ಗುಣಪಡಿಸುವುದು, ಅಸಾಧ್ಯ ಕಾಯಿಲೆಗಳಿಗೆ ಚಿಕಿತ್ಸೆ, ಆರ್ಥಿಕ ಕಷ್ಟಗಳನ್ನು ದೂರ ಮಾಡುವುದು, ವಿವಾಹ ನಿಶ್ಚಯಿಸುವುದು ಮತ್ತು ಮಗು ನೀಡುವ ಆಮಿಷ ಒಡ್ಡಿ ‘ಪ್ರಾರ್ಥನಾ ಸಭೆ’ಯ ಹೆಸರಿನಲ್ಲಿ ಜನರ ಬ್ರೈನ್ ವಾಶ್ ಮಾಡಲಾಗುತ್ತಿತ್ತು.
ಬಯಲಿಗೆ ಬಂದಿದ್ದು ಹೇಗೆ ?
ಮೋಹನಲಾಲಗಂಜ್ ನ ಭರಸವಾ ಗ್ರಾಮದ ನಿವಾಸಿ ಅಮಿತ ಕುಮಾರ ಎಂಬುವವರು ಈ ಕೃತ್ಯವನ್ನು ವಿರೋಧಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಅವರ ಮೇಲೆಯೂ ಧರ್ಮ ಬದಲಾಯಿಸುವಂತೆ ಒತ್ತಡ ಹೇರಿ, ಅಸಭ್ಯವಾಗಿ ನಡೆದುಕೊಂಡು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದಾಗ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿತು. ಅವರು ಜುಲೈ 22ರಂದು ಈ ಕುರಿತು ದೂರು ನೀಡಿದ ನಂತರ ಪೊಲೀಸರು ಸಂಪೂರ್ಣ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಿದರು.
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ
ಶ್ರೀರಾಮಮಂದಿರದ ಕಾಣಿಕೆ ಕಳವು ಪ್ರಕರಣಕ್ಕೆ ಹೊಸ ವಿಶೇಷ ತನಿಖಾ ತಂಡ ರಚನೆ
‘ಕಾಕ್ರೋಚ್ ಜನತಾ ಪಕ್ಷ’ವನ್ನು ಬೆಂಬಲಿಸುವ ಭರದಲ್ಲಿ ನಡೆಸಿದ ಚಳವಳಿಯಲ್ಲಿ ಉದ್ಧವ್ ಠಾಕ್ರೆ ಅವರು ಜಿರಲೆಯನ್ನು ವಿಷ್ಣುವಿನ ಅವತಾರ ಎಂದರು!