ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನ‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

ಬದಾಯೂ (ಉತ್ತರಪ್ರದೇಶ) – ಇಲ್ಲಿ ಮಗುವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಕುಟುಂಬವೊಂದರ ನಂಬಿಕೆ ಗಳಿಸಿದ ಮೌಲ್ವಿಯು (ಇಸ್ಲಾಂನ ಅಧ್ಯಯನಕಾರ) ಶಾಕಿರ ಹುಸೇನ‌ಗೆ ನ್ಯಾಯಾಲಯವು ಓರ್ವ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳನ್ನು ಅಪಹರಿಸಿ 3 ತಿಂಗಳುಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿರುವುದು, ಮಹಿಳೆಯ ಮೇಲೆ ಪದೇ ಪದೇ ಬಲಾತ್ಕಾರ ಎಸಗಿರುವುದು ಹಾಗೂ ಇಬ್ಬರ ಮೇಲೆಯೂ ಬಲವಂತವಾಗಿ ಮತಾಂತರಕ್ಕಾಗಿ ಒತ್ತಡ ಹೇರಿರುವ ಪ್ರಕರಣದಲ್ಲಿ ಈತನನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿದೆ. ವಿಶೇಷ ಶೀಘ್ರ ಗತಿಯ ನ್ಯಾಯಾಲಯವು (ಮಹಿಳೆಯರ ಮೇಲಿನ ಅಪರಾಧಗಳು) ಹುಸೇನ‌ಗೆ ವಿವಿಧ ಕಾಯ್ದೆಗಳಡಿಯಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಿದೆ. ಮತಾಂತರದ ಕಾಯ್ದೆಯಡಿಯಲ್ಲಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂಪಾಯಿ ದಂಡ, ಹಾಗೆಯೇ ಅಪಹರಣ, ಒತ್ತೆಯಾಳು, ಅತ್ಯಾಚಾರ ಮತ್ತು ಇತರ ಅಪರಾಧಗಳಿಗಾಗಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಎಲ್ಲಾ ಶಿಕ್ಷೆಗಳನ್ನೂ ಒಟ್ಟಿಗೆ ಅನುಭವಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಸಂಪಾದಕೀಯ ನಿಲುವು

ಇಂತಹ ಜಿಹಾದಿಗಳನ್ನು ಜೀವಿತಾವಧಿಯವರೆಗೆ ಜೈಲಿನಲ್ಲಿ ಇರಿಸಿದರೂ ಅದರಿಂದ ಯಾವುದೇ ಪರಿಣಾಮವಾಗದಿರುವುದರಿಂದ ಅವರಿಗೆ ಗಲ್ಲು ಶಿಕ್ಷೆಯನ್ನೇ ನೀಡುವಂತಹ ಕಾನೂನು ತರುವುದು ಅತ್ಯಗತ್ಯವಾಗಿದೆ !