‘ಪ್ರಸ್ತುತ ಕೇಂದ್ರ ಸರಕಾರವು ಪಾಕಿಸ್ತಾನವನ್ನು ಅನುಸರಿಸುತ್ತಿದೆಯಂತೆ !’

  • ದೇಶದ್ರೋಹದ ಆರೋಪವಿರುವ ಉಮರ್ ಖಾಲಿದ್‌ನನ್ನು ಬೆಂಬಲಿಸಿದ ವಿದ್ಯಾರ್ಥಿಗೆ ವಿರೋಧಿಸಿದ್ದಕ್ಕೆ ಕಾಂಗ್ರೆಸ್‌ನ ಪ್ರದೇಶ ಅಧ್ಯಕ್ಷರಿಗೆ ಹೊಟ್ಟೆಯುರಿ

  • 5 ವರ್ಷಗಳಲ್ಲಿ ಖಾಲಿದ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸದೇ ಇರುವುದಕ್ಕೆ ಆಕ್ರೋಶ

ಬಿ.ಕೆ. ಹರಿಪ್ರಸಾದ್

ಬೆಂಗಳೂರು – ದೆಹಲಿಯಲ್ಲಿ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯಾದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಯೊಬ್ಬ ದೇಶದ್ರೋಹದ ಆರೋಪವಿರುವ ಉಮರ್ ಖಾಲಿದ್ ಪರವಾಗಿ ಫಲಕವನ್ನು ಹಿಡಿದುಕೊಂಡಿದ್ದನು. ಇದರಿಂದಾಗಿ ಇತರ ಪ್ರತಿಭಟನಾಕಾರ ವಿದ್ಯಾರ್ಥಿಗಳು ಆತನಿಗೆ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಆ ಫಲಕವನ್ನು ತಕ್ಷಣವೇ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದರು. ಆದಾಗ್ಯೂ ರಾಜ್ಯದ ಕಾಂಗ್ರೆಸ್ ವಿದ್ಯಾರ್ಥಿಯ ಈ ಕೃತ್ಯವನ್ನು ಬೆಂಬಲಿಸಿದೆ.

ಕಾಂಗ್ರೆಸ್ ಪ್ರದೇಶಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, 2020 ರ ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ನನ್ನು ನೀವು 5 ವರ್ಷಗಳಿಂದ ಜೈಲಿನಲ್ಲಿಟ್ಟಿದ್ದೀರಿ. ಆತನ ವಿರುದ್ಧ ಸೂಕ್ತ ದೋಷಾರೋಪಪಟ್ಟಿ ಏಕೆ ಸಲ್ಲಿಸಿಲ್ಲ? ಇದೇನು ಪಾಕಿಸ್ತಾನವೇ? ಪ್ರಸ್ತುತ ಸರಕಾರವು ಪಾಕಿಸ್ತಾನದ ಮಾದರಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ಪಾಕಿಸ್ತಾನದ ನೀತಿಯನ್ನು ಅನುಸರಿಸದಿದ್ದರೂ, ರಾಜ್ಯದ ಕಾಂಗ್ರೆಸ್ ಸರಕಾರ ಮಾತ್ರ ಅದನ್ನು ಅಕ್ಷರಶಃ ಪಾಲಿಸುತ್ತಿದೆ. ಅದಕ್ಕಾಗಿಯೇ ಇಂದು ಅಲ್ಲಿನ ಅನೇಕ ಹಿಂದುತ್ವನಿಷ್ಠ ನಾಯಕರ ಮೇಲೆ ಜಿಲ್ಲಾ ನಿಷೇಧ ಹೇರುವುದು, ಹಿಂದೂಗಳ ಮೇಲೆ ದಾಳಿ ಮಾಡುವ ಕಟ್ಟರವಾದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಮುಂತಾದ ಘಟನೆಗಳು ಬೆಳಕಿಗೆ ಬರುತ್ತಿವೆ !