ಈಗ ೨೦೦ ಮತ್ತು ೫೦೦ ರೂಪಾಯಿ ನೋಟುಗಳನ್ನು ತೆಗೆದುಕೊಂಡು ಹೋಗಲು ಅನುಮತಿ

ಕಾಠ್ಮಂಡು (ನೇಪಾಳ) – ನೇಪಾಳದ ಬಾಲೆನ್ ಶಾ ಸರಕಾರವು ಭಾರತೀಯ ಕರೆನ್ಸಿಯ ಮೇಲಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದ್ದು, ೨೦೦ ಮತ್ತು ೫೦೦ ರೂಪಾಯಿ ನೋಟುಗಳನ್ನು ದೇಶದೊಳಗೆ ತರಲು ಮತ್ತು ಹೊರಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ. ಈ ಅನುಮತಿಯು ನವೆಂಬರ್ ೨೦೧೬ ರ ನಂತರ ಚಲಾವಣೆಗೆ ಬಂದ ನೋಟುಗಳಿಗೆ ಅನ್ವಯಿಸುತ್ತದೆ; ಆದರೆ ಇದರ ಗರಿಷ್ಠ ಮಿತಿ ಪ್ರತಿ ವ್ಯಕ್ತಿಗೆ ೨೫ ಸಾವಿರ ರೂಪಾಯಿಗಳಾಗಿರುತ್ತದೆ. ಇದರಿಂದ ನೇಪಾಳಕ್ಕೆ ಪ್ರಯಾಣಿಸುವ ಭಾರತೀಯರಷ್ಟೇ ಅಲ್ಲದೆ, ಸಾಮಗ್ರಿಗಳನ್ನು ಖರೀದಿಸಲು ಗಡಿ ದಾಟುವ ಗಡಿಪ್ರದೇಶದ ನೇಪಾಳಿ ಜನರಿಗೂ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.
ಭಾರತವು ನವೆಂಬರ್ ೨೦೧೬ ರಲ್ಲಿ ನೋಟು ರದ್ದು ಮಾಡಿದ ನಂತರ ನೇಪಾಳದಲ್ಲಿ ಕೇವಲ ೧೦೦ ರೂಪಾಯಿಯ ನೋಟುಗಳನ್ನು ಮಾತ್ರ ತರಲು ಮತ್ತು ತೆಗೆದುಕೊಂಡು ಹೋಗಲು ಅನುಮತಿಯಿತ್ತು. ನವೆಂಬರ್ ೯, ೨೦೧೬ ಕ್ಕಿಂತ ಮೊದಲು ಚಲಾವಣೆಯಲ್ಲಿದ್ದ ೫೦೦ ಮತ್ತು ೧ ಸಾವಿರ ರೂಪಾಯಿಯ ನೋಟುಗಳು ಮುಂಚಿನಂತೆಯೇ ನಿಷೇಧಿತವಾಗಿರುತ್ತವೆ.
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ಪಾಕಿಸ್ತಾನ: ಹಸಿವಿನ ದರದಲ್ಲಿ ಶೇಕಡಾ ೩೭% ರಷ್ಟು ಏರಿಕೆ ! – ವಿಶ್ವಸಂಸ್ಥೆ
ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿಯ ಬಾಂಗ್ಲಾದೇಶದ ರಹಸ್ಯ ಭೇಟಿಯಿಂದ ಚರ್ಚೆಗೆ ವೇಗ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಭಾಗಿಯಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ! – ಟ್ರಂಪ್ ಎಚ್ಚರಿಕೆ