
ಢಾಕಾ (ಬಾಂಗ್ಲಾದೇಶ) – ಅಮೆರಿಕದ ಬೇಹುಗಾರಿಕೆ ಸಂಸ್ಥೆಯಾದ ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ (ಸಿ.ಐ.ಎ.)ಯ ಮಾಜಿ ಹಿರಿಯ ಅಧಿಕಾರಿ ಜೆರಾಲ್ಡ್ ಪಿ. ಹ್ಯಾಮಿಲ್ಟನ್ ಅವರನ್ನು ಅಮೆರಿಕನ್ ರಾಯಭಾರ ಕಚೇರಿಯು ಢಾಕಾದ ಐಷಾರಾಮಿ ಹೋಟೆಲ್ ಒಂದರಲ್ಲಿ ತಂಗುವಂತೆ ಮಾಡಿದೆ. ಅವರ ಈ ರಹಸ್ಯ ಢಾಕಾ ಭೇಟಿ ಮತ್ತು ಅಮೆರಿಕನ್ ರಾಯಭಾರ ಕಚೇರಿಯಿಂದ ಸಿಕ್ಕ ನೆರವು, ಈ ವಲಯದ ತಜ್ಞರ ಗಮನ ಸೆಳೆದಿದೆ. ಬಾಂಗ್ಲಾದೇಶದ ರಾಜಕೀಯದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳು ಪದೇ ಪದೇ ಕೇಳಿಬಂದಿರುವುದರಿಂದ ಈ ಭೇಟಿಯು ಹೆಚ್ಚು ಗಮನಾರ್ಹವೆನಿಸಿದೆ.
೧. ಹ್ಯಾಮಿಲ್ಟನ್ ಅವರು ‘ಸಿ.ಐ.ಎ.’ನಲ್ಲಿ ೩೫ ವರ್ಷಗಳನ್ನು ಕಳೆದಿದ್ದು, ಹಲವು ಹಿರಿಯ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಸಂಸ್ಥೆಯು ಐತಿಹಾಸಿಕವಾಗಿ ವಿದೇಶಗಳಲ್ಲಿ ರಹಸ್ಯ ಮಾಹಿತಿ ಸಂಗ್ರಹಿಸುವುದು, ಗುಪ್ತ ಕಾರ್ಯಾಚರಣೆಗಳನ್ನು ನಡೆಸುವುದು ಮತ್ತು ವಿದೇಶಿ ಬೇಹುಗಾರಿಕೆ ಸಂಸ್ಥೆಗಳ ನಿರ್ವಹಣೆ ಮಾಡುವ ಕೆಲಸಗಳಿಗೆ ಜವಾಬ್ದಾರಿಯಾಗಿದೆ ಎಂದು ಪರಿಗಣಿಸಲಾಗಿದೆ.
೨. ಬಾಂಗ್ಲಾದೇಶದಲ್ಲಿ ಅನೇಕ ಸಂದರ್ಭಗಳಲ್ಲಿ ‘ಸಿ.ಐ.ಎ.’ ಢಾಕಾದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪಗಳು ಬಂದಿವೆ. ಇದರಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಎಲ್ಲಕ್ಕಿಂತ ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ಸರಕಾರವನ್ನು ಪತನಗೊಳಿಸಲು ಮತ್ತು ಅಧಿಕಾರ ಬದಲಾವಣೆಗೆ ಸಂಚು ರೂಪಿಸಿದ್ದಾಗಿ ಅಮೆರಿಕದ ಮೇಲೆ ಶೇಖ್ ಹಸೀನಾ ಅವರು ಬಹಿರಂಗವಾಗಿ ಆರೋಪ ಮಾಡಿದ್ದರು.
೩. ಬಾಂಗ್ಲಾದೇಶದ ಪ್ರಸ್ತುತ ತಾರಿಖ್ ರೆಹಮಾನ್ ಸರಕಾರದಲ್ಲಿ ಖಲೀಲುರ್ ರೆಹಮಾನ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಅಮೆರಿಕದ ಒತ್ತಡವೇ ಕಾರಣ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ಪಾಕಿಸ್ತಾನ: ಹಸಿವಿನ ದರದಲ್ಲಿ ಶೇಕಡಾ ೩೭% ರಷ್ಟು ಏರಿಕೆ ! – ವಿಶ್ವಸಂಸ್ಥೆ
ನೇಪಾಳದಿಂದ ಭಾರತೀಯ ಕರೆನ್ಸಿ ಮೇಲಿನ ನಿಷೇಧ ಹಿಂಪಡೆ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಭಾಗಿಯಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ! – ಟ್ರಂಪ್ ಎಚ್ಚರಿಕೆ