ಜಳಗಾಂವ್‌ನಲ್ಲಿ ಶಾಲಾರ್ಥ ಐಡಿ ಹಗರಣ

ಶಾಲಾರ್ಥ ಐಡಿ ಎಂದರೇನು?ಶಾಲಾರ್ಥ ಐಡಿ ಎಂಬುದು ಮಹಾರಾಷ್ಟ್ರ ಸರಕಾರದ ಶಾಲಾ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯು ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ವೇತನಕ್ಕಾಗಿ ನೀಡುವ ಒಂದು ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಈ ಸಂಖ್ಯೆ ಸಿಗದ ಹೊರತು ಸಿಬ್ಬಂದಿಗೆ ಸರಕಾರದಿಂದ ನಿಯಮಿತ ವೇತನ ದೊರೆಯುವುದಿಲ್ಲ. ಈ ಹಗರಣದಡಿಯಲ್ಲಿ, ಶಾಲಾರ್ಥ ಐಡಿಗಳ ಆಧಾರದ ಮೇಲೆ ಕೆಲವು ವ್ಯಕ್ತಿಗಳು ಸರಕಾರದ ವೇತನವನ್ನು ಲೂಟಿ ಮಾಡಿದ್ದಾರೆ. ಇದರಿಂದ ಸರಕಾರಕ್ಕೆ ಭಾರಿ ಆರ್ಥಿಕ ನಷ್ಟವಾಗಿದೆ. |
ನಾಸಿಕ್ – ಜಿಲ್ಲಾ ಪರಿಷತ್ತಿನ ಶಿಕ್ಷಣ ಇಲಾಖೆಯಲ್ಲಿ ನಡೆದ ೧೬೦ ಕೋಟಿ ರೂಪಾಯಿಗಳ ‘ಶಾಲಾರ್ಥ ಐಡಿ’ ಹಗರಣವನ್ನು ವಿಶೇಷ ತನಿಖಾ ತಂಡ (SIT) ಬಯಲಿಗೆಳೆದಿದೆ. ಅಂದಿನ ಶಿಕ್ಷಣಾಧಿಕಾರಿ ಶಶಿಕಾಂತ್ ಹಿಂಗೋಣೇಕರ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ೨೫೯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಯಾವುದೇ ಸರಕಾರಿ ಪ್ರಕ್ರಿಯೆಯನ್ನು ಅನುಸರಿಸದೆ, ನಕಲಿ ದಾಖಲೆಗಳ ಆಧಾರದ ಮೇಲೆ ಅವರ ಉದ್ಯೋಗಗಳಿಗೆ ಅನುಮೋದನೆ ನೀಡಿದ್ದಾರೆ ಎಂಬುದು ಬಹಿರಂಗವಾಗಿದೆ. ಹಗರಣದ ಒಟ್ಟು ೮೪೧ ನಕಲಿ ಆದೇಶಗಳಲ್ಲಿ ಹೆಚ್ಚಿನ ಆದೇಶಗಳನ್ನು ಹಿಂಗೋಣೇಕರ್ ಅವರ ಅಧಿಕಾರಾವಧಿಯಲ್ಲೇ ನೀಡಲಾಗಿದ್ದು, ಈ ಪ್ರಕರಣದಲ್ಲಿ ಈಗ ‘ಸಂಘಟಿತ ಅಪರಾಧ’ (ಮಕೋಕಾ ಮಾದರಿಯ) ಕಾಯ್ದೆಯಡಿ ಪ್ರಕರಣವನ್ನು ಕಠಿಣಗೊಳಿಸಲಾಗಿದೆ.
೧. ಆಗಸ್ಟ್ ೨೮, ೨೦೧೧ ರಿಂದ ಜೂನ್ ೨೦೨೫ ರ ಅವಧಿಯಲ್ಲಿ ಜಳಗಾಂವ್ ಜಿಲ್ಲೆಯ ವಿವಿಧ ಶಾಲೆಗಳ ೨೫೯ ಶಿಕ್ಷಕರು ಮತ್ತು ಸಿಬ್ಬಂದಿಗೆ ನೀಡಲಾದ ಶಾಲಾರ್ಥ ಆದೇಶಗಳು ನಕಲಿ ಎಂದು ಸಾಬೀತಾಗಿದೆ.
೨. ನಕಲಿ ಶಾಲಾರ್ಥ ಐಡಿಗಳನ್ನು ಸೃಷ್ಟಿಸಿ ಸಂಬಂಧಪಟ್ಟ ಸಿಬ್ಬಂದಿಯ ನಿಯಮಿತ ವೇತನ ಮತ್ತು ಭಾರಿ ಪ್ರಮಾಣದ ಬಾಕಿ ಹಣವನ್ನು ಕಬಳಿಸಲಾಗಿದೆ.
೩. ಜಳಗಾಂವ್‌ನ ೩೬೮ ಸಿಬ್ಬಂದಿಯ ಪೈಕಿ ೧೧೬ ಜನರ ದಾಖಲೆಗಳನ್ನು ಶಾಲಾರ್ಥ ವ್ಯವಸ್ಥೆಯಲ್ಲಿ (System) ಅಪ್‌ಲೋಡ್ ಮಾಡೇ ಇರಲಿಲ್ಲ.
೪. ಈ ಭ್ರಷ್ಟಾಚಾರದಲ್ಲಿ ಕೇವಲ ಶಿಕ್ಷಣಾಧಿಕಾರಿ ಮಾತ್ರವಲ್ಲದೆ, ಶಿಕ್ಷಣ ಉಪನಿರ್ದೇಶಕರ ಕಚೇರಿಯ ಅಧಿಕಾರಿಗಳು-ಸಿಬ್ಬಂದಿ, ಶಿಕ್ಷಣ ಸಂಸ್ಥೆಯ ಸಂಚಾಲಕರು, ಮುಖ್ಯೋಪಾಧ್ಯಾಯರು, ಮಧ್ಯವರ್ತಿಗಳು (ದಲ್ಲಾಳಿಗಳು) ಮತ್ತು ಪ್ರಭಾವಿ ರಾಜಕೀಯ ನಾಯಕರ ಪಾತ್ರವೂ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಶ್ರೀರಾಮಮಂದಿರದ ಕಾಣಿಕೆ ಕಳವು ಪ್ರಕರಣಕ್ಕೆ ಹೊಸ ವಿಶೇಷ ತನಿಖಾ ತಂಡ ರಚನೆ
‘ಕಾಕ್ರೋಚ್ ಜನತಾ ಪಕ್ಷ’ವನ್ನು ಬೆಂಬಲಿಸುವ ಭರದಲ್ಲಿ ನಡೆಸಿದ ಚಳವಳಿಯಲ್ಲಿ ಉದ್ಧವ್ ಠಾಕ್ರೆ ಅವರು ಜಿರಲೆಯನ್ನು ವಿಷ್ಣುವಿನ ಅವತಾರ ಎಂದರು!