‘ಕಾಕ್ರೋಚ್ ಜನತಾ ಪಕ್ಷ’ವನ್ನು ಬೆಂಬಲಿಸುವ ಭರದಲ್ಲಿ ನಡೆಸಿದ ಚಳವಳಿಯಲ್ಲಿ ಉದ್ಧವ್ ಠಾಕ್ರೆ ಅವರು ಜಿರಲೆಯನ್ನು ವಿಷ್ಣುವಿನ ಅವತಾರ ಎಂದರು!

ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಭ್ಯ ಘೋಷಣೆಗಳು ಮತ್ತು ನಿಂದನೆ!

ಮುಂಬಯಿ – ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ ದಾದರ್ ರೈಲ್ವೆ ನಿಲ್ದಾಣದಿಂದ ಶಿವಾಜಿ ಪಾರ್ಕ್‌ವರೆಗೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ ಮತ್ತು ಎಂಎನ್‌ಎಸ್ ಪರವಾಗಿ ‘ತ್ರಿರಂಗ’ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ನೂರಾರು ಯುವಕರು ಭಾಗವಹಿಸಿದ್ದರು. ಮೆರವಣಿಗೆಯ ಸಮಾರೋಪ ಭಾಷಣದಲ್ಲಿ ಭಾಜಪ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, ‘ಜಿರಳೆ ವಿಷ್ಣುವಿನ ಅವತಾರ’ ಎಂಬ ಅರ್ಥಹೀನ ಮತ್ತು ಶ್ರೀವಿಷ್ಣುವಿಗೆ ಅವಮಾನಕರ ಹೇಳಿಕೆ ನೀಡಿದರು. ‘ಒಂದು ಜಿರಳೆ ಸರ್ವಾಧಿಕಾರಿಯನ್ನು ಸೋಲಿಸಿದೆ. ಇದು ನಿಜವಾದ ವಿಷ್ಣುವಿನ ಅವತಾರ’ ಎಂದು ಹೇಳಿದರು.

1. ಯಾವುದೇ ಸಭ್ಯ ವ್ಯಕ್ತಿ ಉಚ್ಚರಿಸಲು ಸಾಧ್ಯವಾಗದಂತಹ ಅತ್ಯಂತ ಅಸಭ್ಯ ಮತ್ತು ನಿಂದನೀಯ ಭಾಷೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

2. ಮೆರವಣಿಗೆಯ ಕೊನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ‘‘ಇದು ಸಂಘರ್ಷದ ಆರಂಭ. ಭಾಜಪ ವಿರುದ್ಧ ಭಾರತ, ಎಂಬುದು ಈ ಸಂಘರ್ಷ. ಮೋದಿಜಿ, ನಿಮ್ಮ ಸಚಿವರು ಪಕ್ಷಗಳನ್ನು ಒಡೆಯುವುದರಲ್ಲಿ ನಿರತರಾಗಿದ್ದಾರೆ. ಈಗಲಾದರೂ ದೇಶದ ಕಡೆ ಗಮನ ಕೊಡಿ. ಸಂಘರ್ಷದ ಕಿಡಿ ಬಿದ್ದಿದೆ. ಅದರ ಕಾಡ್ಗಿಚ್ಚು ಇಡೀ ದೇಶಾದ್ಯಂತ ಹಬ್ಬುತ್ತಿದೆ.’ ಎಂದರು.

3. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ, ಮಾಜಿ ಸಂಸದ ಸಂಜಯ್ ರಾವತ್ ಸೇರಿದಂತೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷ ಹಾಗೂ ಎಂಎನ್‌ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಂಗ್ರೆಸ್ ಮತ್ತು ಮಹಾವಿಕಾಸ ಮೈತ್ರಿ ಕೂಟದ ಇತರ ಪಕ್ಷಗಳೂ ಈ ಮೆರವಣಿಗೆಗೆ ಬೆಂಬಲ ನೀಡಿದ್ದವು.

ಸಂಪಾದಕೀಯ ನಿಲುವು

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕರಿಗೆ ಆಡಳಿತಾರೂಢರನ್ನು ವಿರೋಧಿಸುವ ಸ್ವಾತಂತ್ರ್ಯವಿದೆ; ಆದರೆ ಆಡಳಿತಾರೂಢರನ್ನು ಟೀಕಿಸುವಾಗ ಹಿಂದೂ ದೇವತೆಗಳಿಗೆ ಅವಮಾನವೇಕೆ? ಉದ್ಧವ್ ಠಾಕ್ರೆ ಹೀಗೆ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ! ಇತರ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧೈರ್ಯ ಯಾರಾದರೂ ಮಾಡುತ್ತಿದ್ದರೇ?