
ಅಯೋಧ್ಯಾ (ಉತ್ತರ ಪ್ರದೇಶ) – ಸುದೀರ್ಘ ಅವಧಿಯ ವರೆಗೆ ಅಯೋಧ್ಯೆಯು ಅಭಿವೃದ್ಧಿಯಿಂದ ವಂಚಿತವಾಗಿತ್ತು. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸರಕಾರಗಳು ಹನುಮಾನಗಢಿ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಮಾಜ್ ಮಾಡಿಸುವ ಪಾಪದ ಕೆಲಸವನ್ನು ಮಾಡಿದವು. ದೆಹಲಿಯ ಜಾಮಾ ಮಸೀದಿಯಲ್ಲಿ ಯಾರಾದರೂ ಎಂದಾದರೂ ಹನುಮಾನ ಚಾಲೀಸಾವನ್ನು ಪಠಿಸಲು ಸಾಧ್ಯವೇ? ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಿಕಾಪೂರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನಿಸಿದರು.
ಶ್ರೀರಾಮ ಮತ್ತು ಶ್ರೀ ಹನುಮಾನರ ಆಶೀರ್ವಾದದಿಂದ ಎಲ್ಲಾ ಕೆಲಸಗಳು ತಾವಾಗಿಯೇ ನಡೆಯುತ್ತವೆ !
ಯೋಗಿ ಆದಿತ್ಯನಾಥ ಅವರು ಮಾತು ಮುಂದುವರಿಸಿ, ಅಯೋಧ್ಯೆಯು ಇಂದು ಅಭಿವೃದ್ಧಿ, ಸಮೃದ್ಧಿ ಮತ್ತು ವೈಭವದತ್ತ ಮುನ್ನಡೆಯುತ್ತಿದೆ. ಉದ್ದೇಶವು ಸ್ವಚ್ಛವಾಗಿದ್ದರೆ, ಅಭಿವೃದ್ಧಿಯು ತಾನಾಗಿಯೇ ಆಗುತ್ತದೆ. ಪ್ರಭು ಶ್ರೀರಾಮನ ಕೃಪೆ ಮತ್ತು ಹನುಮಂತನ ಆಶೀರ್ವಾದವಿದ್ದರೆ, ಅಯೋಧ್ಯೆಯ ಎಲ್ಲಾ ಕೆಲಸಗಳು ತಾವಾಗಿಯೇ ನಡೆಯುತ್ತವೆ ಎಂಬುದು ಇಂದು ಅಯೋಧ್ಯೆಯಲ್ಲಿ ಕಂಡುಬರುತ್ತಿದೆ ಎಂದರು.
2 ನಗರ ಪಂಚಾಯಿತಿಗಳ ಹೆಸರು ಬದಲಾವಣೆ
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು 2 ಪ್ರಮುಖ ಘೋಷಣೆಗಳನ್ನು ಮಾಡಿದರು. ಇದರಲ್ಲಿ ಅವರು ‘ ಖಿರೌನಿ ಸೊಹಾವಲ ’ ನಗರ ಪಂಚಾಯಿತಿಯ ಹೆಸರನ್ನು ‘ ಮಾ ಜ್ವಾಲಾ ದೇವಿ ನಗರ ಪಂಚಾಯಿತಿ’ ಮತ್ತು ‘ಭರತಕುಂಡ-ಭದರಸಾ’ ನಗರ ಪಂಚಾಯಿತಿಯ ಹೆಸರನ್ನು ‘ಭರತ ನಗರ ಭರತಕುಂಡ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದರು.
ಉತ್ತರ ಪ್ರದೇಶದ ಮಥುರಾದಲ್ಲಿ ‘ಹೃದಯದಲ್ಲಿ ಬಾಬರ್, ಮುಖದಲ್ಲಿ ರಾಮ’ ಎಂಬ ಫಲಕ ಅಳವಡಿಸಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕರು ಆಕ್ರೋಶ! : UP Poster Row
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಸುಭಾಷಚಂದ್ರ ಬೋಸ್ ಪಾಠದಿಂದ ಹಿಟ್ಲರ್ ಉಲ್ಲೇಖ ತೆಗೆದುಹಾಕಿದ ಎನ್ಸಿಇಆರ್ಟಿ : NCERT Class 8 Book
‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’
ಪಾಕ್ ಸಭೆ ಆರೋಪ: ಹರಿಪ್ರಸಾದ್ಗೆ ರಾಮ್ ಮಾಧವ್ ಕಾನೂನು ಎಚ್ಚರಿಕೆ
ಯಾರೇ ಪಾಪ ಮಾಡಿದ್ದರೂ, ಅವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು!