‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’

ಕಾಂಗ್ರೆಸ್‌ನ ಹಿಂದೂ ದ್ವೇಷಿ ಗೃಹ ಸಚಿವ ಪ್ರಿಯಾಂಕ ಖರ್ಗೆಯವರ ಹುರುಳಿಲ್ಲದ ಹೇಳಿಕೆ!

ಪ್ರಿಯಾಂಕ್ ಖರ್ಗೆ

ಬೆಂಗಳೂರು – ‘ಕುಂಕುಮವನ್ನು ಕೇಸರಿಯಿಂದ ತಯಾರಿಸಲಾಗುತ್ತದೆ. (ಈ ವಿನೂತನ ಸಂಶೋಧನೆಗಾಗಿ ಕಾಂಗ್ರೆಸ್‌ನ ಗೃಹ ಸಚಿವರಿಗೆ ಬಹುಮಾನ ನೀಡಬೇಕು! – ಸಂಪಾದಕರು) ಶೇ. 90 ರಷ್ಟು ಕುಂಕುಮವು ಇಸ್ಲಾಮಿ ದೇಶಗಳಿಂದ ಬರುತ್ತದೆ. ಹೀಗೆ ಹೇಳಿದಾಗ ನಾಳೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’, ಎಂಬ ಪ್ರಶ್ನೆಯನ್ನು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ ಖರ್ಗೆ ಯವರು ಎತ್ತಿದ್ದಾರೆ. ಈ ಜನರಿಗೆ (ಸಂಘ ಮತ್ತು ಬಿಜೆಪಿಗೆ) ಅವರ ಕಡೆಗೆ (ಇಸ್ಲಾಮಿ ದೇಶಗಳ ಕಡೆಗೆ) ನೋಡುವುದೂ ಇಷ್ಟವಿಲ್ಲ, ಎಂದು ಹೇಳುತ್ತಾ ಪ್ರಿಯಾಂಕ ಖರ್ಗೆ ಯವರು ಬಿಜೆಪಿ ಮತ್ತು ರಾ. ಸ್ವ. ಸಂಘದ ಮೇಲೆ ಟೀಕಿಸಿದರು. ಇಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಕುಂಕುಮದ ಬಗ್ಗೆ ಹೇಳಿಕೆ ನೀಡಿದರು.

1. ಪ್ರಿಯಾಂಕ ಖರ್ಗೆಯವರ ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆಯೇ ಅದರ ಮೇಲೆ ಟೀಕೆಗಳು ವ್ಯಕ್ತವಾಗತೊಡಗಿವೆ. ಮೂಲತಃ ಕುಂಕುಮ ಕೇಸರಿಯಿಂದ ತಯಾರಾಗುವುದಿಲ್ಲ. ಅರಿಶಿನ ಮತ್ತು ಸುಣ್ಣದಂತಹ ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ಕುಂಕುಮವನ್ನು ತಯಾರಿಸಲಾಗುತ್ತದೆ; ಆದರೆ ಗೃಹ ಸಚಿವರಿಗೆ ಇದು ಕೂಡ ತಿಳಿದಿಲ್ಲ ಎಂದು ಹೇಳುತ್ತಾ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟೀಕಿಸುತ್ತಿದ್ದಾರೆ.

2. ಕೇಂದ್ರೀಯ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರು ಕೂಡ ಈ ವಿಡಿಯೋ ವಿಷಯವಾಗಿ ಪ್ರಿಯಾಂಕ ಖರ್ಗೆ ಯವರ ಮೇಲೆ ಟೀಕೆ ಮಾಡಿದ್ದಾರೆ. ಅವರು ಖರ್ಗೆಯವರಿಗೆ ಕುಂಕುಮ ಹೇಗೆ ತಯಾರಾಗುತ್ತದೆ ಎಂಬುದೂ ಗೊತ್ತಿಲ್ಲ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮೂಲತಃ ಕುಂಕುಮದ ಅತಿ ಹೆಚ್ಚು ಉತ್ಪಾದನೆಯು ಭಾರತದಲ್ಲಿಯೇ ಆಗುತ್ತದೆ. ಆದ್ದರಿಂದ ಇಸ್ಲಾಮಿ ದೇಶಗಳಿಂದ ಅದನ್ನು ಖರೀದಿಸುವ ಮತ್ತು ಹಿಂದೂಗಳು ಅದನ್ನು ಬಳಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಾಸ್ತವದಲ್ಲಿ ಹಿಂದೂಗಳಿಗೆ ಪ್ರಶ್ನೆಗಳನ್ನು ಕೇಳುವಲ್ಲಿ ಸಮಯ ಕಳೆಯುವ ಬದಲು, ಕಾಂಗ್ರೆಸ್‌ನ ಗೃಹ ಸಚಿವರು ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ತಮ್ಮ ಬುದ್ಧಿ ಮತ್ತು ಸಮಯವನ್ನು ಬಳಸಿದರೆ, ಜನರಿಗೆ ಒಳ್ಳೆಯದಾಗುತ್ತದೆ!