ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ್ಯವೀರ ಸಾವರಕರ್ ಅವರ ಕೊಡುಗೆಯ ಸೇರ್ಪಡೆ
ವಿಭಜನೆಗೆ ಕಾಂಗ್ರೆಸ್ ಮೊದಲು ನಿರಾಕರಿಸಿ, ನಂತರ ಒಪ್ಪಿಗೆ ನೀಡಿದ್ದರ ಕುರಿತೂ ಉಲ್ಲೇಖ

(ಎನ್.ಸಿ.ಇ.ಆರ್.ಟಿ. ಎಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು)
ನವ ದೆಹಲಿ – ಎನ್.ಸಿ.ಇ.ಆರ್.ಟಿ.ಯ ‘ಎಕ್ಸ್ ಪ್ಲೋರಿಂಗ್ ಸೊಸೈಟಿ : ಇಂಡಿಯಾ ಆಂಡ್ ಬಿಯಾಂಡ್’ ಎಂಬ ಪರಿಷ್ಕೃತ ಪುಸ್ತಕದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಅವರ ಸಂದರ್ಭದಿಂದ ‘ಹಿಟ್ಲರ್’ ಹೆಸರನ್ನು ತೆಗೆದುಹಾಕಲಾಗಿದೆ. ಇದರೊಂದಿಗೆ ಸ್ವಾತಂತ್ರ್ಯವೀರ ಸಾವರಕರ ಅವರ ‘ಸ್ವರಾಜ್ಯ’ದ ಬೇಡಿಕೆಯನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಪುಸ್ತಕದಲ್ಲಿನ ಇತಿಹಾಸದ ‘ಇಂಡಿಯಾಸ್ ಲಾಂಗ್ ರೋಡ್ ಟು ಇಂಡಿಪೆಂಡೆನ್ಸ್’ ಎಂಬ ಪಾಠದಲ್ಲಿ ಭಾರತದ ವಿಭಜನೆಯ ಸಂದರ್ಭಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ.
೧. ಹೊಸ ಪುಸ್ತಕದಲ್ಲಿ ‘ಭಾರತದ ವಿಭಜನೆಗೆ ಭಾರತೀಯ ಕಾಂಗ್ರೆಸ್ ನಿಂದಲೂ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಅದನ್ನು ಸ್ವೀಕರಿಸುವುದು ಒಂದೇ ಮಾರ್ಗವಾಗಿತ್ತೇ ?,
ಎಂಬುದು ಇಂದಿಗೂ ವಿವಾದದ/ಚರ್ಚೆಯ ವಿಷಯವಾಗಿದೆ’, ಎಂದು ಬರೆಯಲಾಗಿದೆ. ಹಳೆಯ ಪುಸ್ತಕದಲ್ಲಿದ್ದ ‘ವಿಭಜನೆಯ ಸಮಯದಲ್ಲಿ ಉಪಖಂಡದಲ್ಲಿದ್ದ ಆ ಸಮಯದ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕರು ಅಸಹಾಯಕ/ವಿವಶರಾಗಿದ್ದರು’, ಎಂಬ ವಾಕ್ಯವನ್ನು ತೆಗೆದುಹಾಕಲಾಗಿದೆ. ಹಿಂಪಡೆಯಲಾದ ಪುಸ್ತಕದಲ್ಲಿ ಈ ಹಿಂದೆ, ‘ಹಿಂದೂ ಮತ್ತು ಮುಸ್ಲಿಂ ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ಲಾಭವನ್ನು ಪಡೆದುಕೊಂಡು ಬ್ರಿಟಿಷರು ಭಾರತದ ವಿಭಜನೆಯ ನಿರ್ಧಾರವನ್ನು ಕೈಗೊಂಡರು ಮತ್ತು ಮಹಾತ್ಮಾ ಗಾಂಧಿ ಹಾಗೂ ಬಹಳಷ್ಟು ಕಾಂಗ್ರೆಸ್ ನಾಯಕರು ಇದನ್ನು ವಿರೋಧಿಸಿದ್ದರೂ, ಅಂತಿಮವಾಗಿ ಅವರು ಇದೊಂದೇ ಮಾರ್ಗವೆಂದು ಭಾವಿಸಿ ಅದನ್ನು ಒಪ್ಪಿಕೊಂಡರು.’, ಎಂದು ಬರೆಯಲಾಗಿದೆ.
೨. ನೇತಾಜಿಯವರ ಸಂದರ್ಭದಿಂದ ಹಿಟ್ಲರ್ ಮತ್ತು ನಾಜಿ ಸಿದ್ಧಾಂತ ಮಾಯಾ
ಆಜಾದ್ ಹಿಂದ್ ಫೌಜ್ ಸೇನೆ ಸ್ಥಾಪನೆಗೆ ಸಂಬಂಧಿಸಿದಂತೆ ನೇತಾಜಿ ಸುಭಾಷಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಸಂದರ್ಭಗಳ ಪದಗಳನ್ನೂ ಬದಲಾಯಿಸಲಾಗಿದೆ. ಹೊಸ ಪುಸ್ತಕದಲ್ಲಿ ಕೇವಲ ಇಷ್ಟೇ ಹೇಳಲಾಗಿದೆ ಏನೆಂದರೆ, ನೇತಾಜಿಯವರು ಸೈನ್ಯವನ್ನು ಕಟ್ಟಲು ಬ್ರಿಟಿಷ್ ವಿರೋಧಿ ಶಕ್ತಿಗಳ ಬೆಂಬಲವನ್ನು ಕೋರಿದ್ದರು. ಹಳೆಯ ಪುಸ್ತಕದಲ್ಲಿ ಸ್ಪಷ್ಟವಾಗಿ ‘ನೇತಾಜಿಯವರು‘ಹಿಟ್ಲರ್’ ಬಳಿ ಸಹಾಯವನ್ನು ಕೋರಿದ್ದರು’ ಮತ್ತು ಹಿಟ್ಲರ್ ನನ್ನು ಒಬ್ಬ ‘ಸರ್ವಾಧಿಕಾರಿ’ ಎಂದು ವ್ಯಾಖ್ಯಾನಿಸಲಾಗಿತ್ತು. ಯಾರ ‘ಜನಾಂಗೀಯ ನಾಜಿ ಸಿದ್ಧಾಂತ ಮತ್ತು ವಿಸ್ತರಣಾವಾದಿ ಉದ್ದೇಶಗಳಿಂದಾಗಿ’ ಎರಡನೇ ಮಹಾಯುದ್ಧ ಪ್ರಾರಂಭವಾಗಿತ್ತು. ಈಗ ಹೊಸ ಆವೃತ್ತಿಯಿಂದ ಹಿಟ್ಲರ್ ಮತ್ತು ನಾಜಿ ಸಿದ್ಧಾಂತದ ಈ ಎಲ್ಲಾ ಸಂದರ್ಭಗಳನ್ನು ತೆಗೆದುಹಾಕಲಾಗಿದೆ.
೩. ಸ್ವಾತಂತ್ರ್ಯವೀರ ಸಾವರಕರ ಮತ್ತು ‘ಸ್ವರಾಜ್ಯ’ದ ಸೇರ್ಪಡೆ
ಪರಿಷ್ಕೃತ ಪಠ್ಯಕ್ರಮದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ವ್ಯಾಪ್ತಿಯನ್ನು ವಿಸ್ತರಿಸುವಾಗ ಸ್ವಾತಂತ್ರ್ಯವೀರ ವಿ.ದಾ. ಸಾವರಕರ್ ಅವರ ಕೊಡುಗೆಯನ್ನೂ ಸೇರಿಸಲಾಗಿದೆ. ಪುಸ್ತಕದಲ್ಲಿ ಈಗ ಇಂತಹ ಉಲ್ಲೇಖವಿದೆ ಏನೆಂದರೆ, ೧೯೨೫ ರಲ್ಲಿ ವಿ.ದಾ. ಸಾವರಕರ ಅವರಿಂದಲೂ ಇದೇ ರೀತಿಯ ‘ಸ್ವರಾಜ್ಯ’ದ ಬೇಡಿಕೆಯನ್ನು ಇಡಲಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ನಡೆದ ಕ್ರಮ
೮ ನೇ ತರಗತಿಯ ಈ ಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಮೊಕದ್ದಮೆಗಳು ಬಾಕಿ ಉಳಿದಿರುವ ಕುರಿತು ಕೆಲವು ಟಿಪ್ಪಣಿಗಳನ್ನು ಮಾಡಲಾಗಿತ್ತು, ಆಗ ಇದೇ ವರ್ಷ ಫೆಬ್ರವರಿಯಲ್ಲಿ ಹಿಟ್ಲರ್ ಕುರಿತಾದ ಸಂದರ್ಭವನ್ನು ಕೈಬಿಡುವ ವಿವಾದ ಪ್ರಾರಂಭವಾಗಿತ್ತು. ತದನಂತರ ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತು. ಈ ಬಗ್ಗೆ ನ್ಯಾಯಾಲಯವು ಕಠಿಣ ನಿಲುವನ್ನು ತಳೆದು ಪುಸ್ತಕದ ಮುದ್ರಣ ಮತ್ತು ಡಿಜಿಟಲ್ ವಿತರಣೆಯ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಇದರ ನಂತರ ಎನ್.ಸಿ.ಇ.ಆರ್.ಟಿ.ಯು ಕ್ಷಮೆಯಾಚಿಸಿ ಮಾರುಕಟ್ಟೆಯಿಂದ ಮತ್ತು ಡಿಜಿಟಲ್ ವೇದಿಕೆಗಳಿಂದ ಪುಸ್ತಕಗಳನ್ನು ಹಿಂಪಡೆದಿತ್ತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ