
ಜಕಾರ್ತಾ (ಇಂಡೋನೇಷ್ಯಾ) – ದೇಶದಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರು ಅಮೆರಿಕದ ಗುಪ್ತಚರ ಸಂಸ್ಥೆ ‘ಸಿಐಎ’ (CIA) ಏಜೆಂಟ್ ಸೋಗಿನಲ್ಲಿ ಸರಕಾರಕ್ಕೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ‘ಇಂಡೋನೇಷ್ಯಾದ ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಬಂಧ ಬೆಳೆಸುವ ಮೂಲಕ ಆತ ಶತಕೋಟಿ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದಗಳನ್ನು ಪಡೆದುಕೊಂಡಿದ್ದ’ ಎಂದು ಹೇಳಲಾಗುತ್ತಿದೆ. ಗೌರವ್ ಶ್ರೀವಾಸ್ತವ ಎಂಬಾತನೇ ಈ ಆರೋಪ ಎದುರಿಸುತ್ತಿರುವ ಉದ್ಯಮಿಯಾಗಿದ್ದಾನೆ. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂತೋ ಅವರು ದೇಶದ ರಕ್ಷಣಾ ಮಂತ್ರಿಯಾಗಿದ್ದ ಅವಧಿಯಲ್ಲಿ ಗೌರವ್ ಶ್ರೀವಾಸ್ತವ ಅವನೊಂದಿಗೆ ಸ್ನೇಹ ಬೆಳೆಸಿದ್ದರು. ಅವರಿಬ್ಬರ ನಡುವಿನ ಸಂಬಂಧ ಎಷ್ಟು ಗಟ್ಟಿಯಾಗಿತ್ತೆಂದರೆ, ಪ್ರಬೋವೊ ಅವರು ಗೌರವ್ ಶ್ರೀವಾಸ್ತವಗೆ ‘ಮಿಸ್ಟರ್ ಜಿ’ ಎಂದು ಅಡ್ಡಹೆಸರಿಟ್ಟಿದ್ದರು. ಆರಂಭಿಕ ಒಪ್ಪಂದಗಳಲ್ಲಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಸಾರಿಗೆ ವಿಮಾನಗಳು ಮತ್ತು ಮಿಲಿಟರಿ ಕಮಾಂಡ್ ಸಿಸ್ಟಮ್‌ಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿತ್ತು.
ಪ್ರಬೋವೊ ಸುಬಿಯಾಂತೋ ಅವರ ಮನೆಗೆ ತಾನು ಪದೇ ಪದೇ ಭೇಟಿ ನೀಡುತ್ತಿದ್ದಾಗಿ ಮತ್ತು ಅಲ್ಲಿಯೇ ತಂಗುತ್ತಿದ್ದಾಗಿ ಶ್ರೀವಾಸ್ತವ ಹೇಳಿದ್ದನು. ಅಷ್ಟೇ ಅಲ್ಲದೆ, ಪ್ರಬೋವೊ ಅವರನ್ನು ಅಮೆರಿಕದ ಕಪ್ಪು ಪಟ್ಟಿಯಿಂದ (Blacklist) ಹೊರತರಲು ತಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದೂ ಆತ ಹೇಳಿಕೊಳ್ಳುದ್ದನು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ