
ರಿಯಾದ (ಸೌದಿ ಅರೇಬಿಯಾ) – ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ದೇಶಗಳಲ್ಲಿ ಒಂದಾದ ಸೌದಿ ಅರೇಬಿಯಾ ಏಷ್ಯಾದ ಗ್ರಾಹಕರಿಗಾಗಿ ‘ಅರಬ್ ಲೈಟ್’ (ಹಗುರವಾದ ಮತ್ತು ಕಡಿಮೆ ಸಲ್ಫರ್ ಹೊಂದಿರುವ) ಕಚ್ಚಾ ತೈಲದ ಬೆಲೆಯಲ್ಲಿ ಕಡಿತಗೊಳಿಸಿದೆ. ಆಗಸ್ಟ್ ತಿಂಗಳಿನಿಂದ ಪೂರೈಕೆಯಾಗಲಿರುವ ಕಚ್ಚಾ ತೈಲದ ಪ್ರತಿ ಬ್ಯಾರೆಲ್ ಬೆಲೆಯಲ್ಲಿ ೧೧ ಡಾಲರ್ ಗಳಷ್ಟು ಭಾರಿ ಕಡಿತವನ್ನು ಮಾಡಲಾಗುವುದು. ಜುಲೈ ತಿಂಗಳಿನಲ್ಲಿ ಈ ಬೆಲೆಯು ಪ್ರತಿ ಬ್ಯಾರೆಲ್‌ಗೆ ೭೪ ಡಾಲರ್ ಆಗಿದೆ. ಕಳೆದ ೨೬ ವರ್ಷಗಳಲ್ಲಿ ಏಷ್ಯಾಕ್ಕಾಗಿ ಮಾಡಲಾದ ಅತಿ ದೊಡ್ಡ ಮಾಸಿಕ ಕಡಿತ ಇದಾಗಿದೆ ಎಂದು ಪರಿಗಣಿಸಲಾಗಿದೆ.
ಭಾರತದಲ್ಲಿ ಪೆಟ್ರೋಲ್-ಡೀಸೆಲ್ ತಕ್ಷಣವೇ ಅಗ್ಗವಾಗಲಿದೆಯೇ ?
ಕಚ್ಚಾ ತೈಲ ಅಗ್ಗವಾದ ತಕ್ಷಣವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಕ್ಷಣವೇ ಇಳಿಕೆಯಾಗುತ್ತವೆ ಎಂದಲ್ಲ ಎಂದು ತಜ್ಞರು ಹೇಳುತ್ತಾರೆ. ಭಾರತದಲ್ಲಿನ ಚಿಲ್ಲರೆ ಇಂಧನದ ಬೆಲೆಗಳು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ, ಸರಕು ಸಾಗಣೆ ವೆಚ್ಚ, ಡಾಲರ್ ಎದುರು ರೂಪಾಯಿಯ ಮೌಲ್ಯ, ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ತೆರಿಗೆಗಳು ಹಾಗೂ ಸರಕಾರಿ ತೈಲ ಸಂಸ್ಥೆಗಳು ನಿಗದಿಪಡಿಸುವ ಬೆಲೆಗಳಂತಹ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ. ಆದ್ದರಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ದೀರ್ಘಕಾಲದವರೆಗೆ ಅಗ್ಗವಾಗಿ ಉಳಿದು, ತೈಲ ಸಂಸ್ಥೆಗಳು ಅದರ ಲಾಭವನ್ನು ಗ್ರಾಹಕರಿಗೆ ತಲುಪಿಸಿದರೆ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ವಿನಾಯಿತಿ ಸಿಗುವ ಸಾಧ್ಯತೆಯಿರುತ್ತದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’