ಬಲಾತ್ಕಾರದ ಪ್ರಕರಣದಲ್ಲಿ ಸಿಲುಕಿಸುವ ಮತ್ತು ಜೀವಬೆದರಿಕೆ ಒಡ್ಡಿದ ಆರೋಪ

ಉಡುಪಿ – ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವ ಆಮಿಷ ತೋರಿಸಿ ೭೦ ಲಕ್ಷ ರೂಪಾಯಿಗಳ ವಂಚನೆ ಮಾಡಿದ ಹಾಗೂ ಹಣಕ್ಕಾಗಿ ಒತ್ತಡ ಹೇರಿ ಬಲಾತ್ಕಾರದ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ, ಹಾಗೆಯೇ ಜೀವಬೆದರಿಕೆ ಒಡ್ಡಿದ ಆರೋಪದಡಿ ಝೀನತ್ ಇಬ್ರಾಹಿಂ ಎಂಬ ಮುಸ್ಲಿಂ ಮಹಿಳೆಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಈಕೆ ಕಾಪೂ ತಾಲೂಕಿನ ಪಡುಬಿದ್ರೆ ಸಮೀಪದ ಕಾಂಚಿನಡ್ಕ ನಿವಾಸಿಯಾಗಿದ್ದಾಳೆ. ದೂರುದಾರರು ನೀಡಿದ ೭೦ ಲಕ್ಷ ರೂಪಾಯಿ ಹಣವನ್ನು ಈಕೆ ಭೂಮಿ ಖರೀದಿಸುವ ಬದಲು ವೈಯಕ್ತಿಕ ಕೆಲಸಗಳಿಗಾಗಿ ಬಳಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ದೂರುದಾರರು ಹೂಡಿಕೆಗಾಗಿ ನೀಡಿದ ಹಣವನ್ನು ಮರಳಿ ಕೇಳಿದಾಗ, ಝೀನತ್ ಇನ್ನು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಹಾಗೂ ಹಣ ನೀಡದಿದ್ದರೆ ಅವರ ಖಾಸಗಿ ವೀಡಿಯೊಗಳನ್ನು ಪ್ರಸಾರ ಮಾಡುವುದಾಗಿ ಮತ್ತು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯವು ಆಕೆಗೆ ೫ ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಇದೇ ರೀತಿ ವಂಚನೆಗೊಳಗಾದ ನಾಗರಿಕರು ದೂರು ನೀಡಲು ಮುಂದೆ ಬರುವಂತೆ ಪೊಲೀಸರು ಕರೆ ನೀಡಿದ್ದಾರೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ