ಪ್ರಯಾಗರಾಜ್ ಉಚ್ಚ ನ್ಯಾಯಾಲಯದಲ್ಲಿ ಹಿಂದೂಗಳಿಂದ ಅರ್ಜಿ : ೧೦೯ ಪುರಾವೆಗಳಿರುವುದಾಗಿ ದಾವೆ

ಪ್ರಯಾಗರಾಜ್ (ಉತ್ತರ ಪ್ರದೇಶ) – ಇಲ್ಲಿನ ‘ತಾಜಮಹಲ್’ ಇದು ‘ತೇಜೋಮಹಾಲಯ’ವಾಗಿದೆ ಎಂಬುದನ್ನು ಸಿದ್ಧಪಡಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ‘ಭಗವಾನ್ ಶ್ರೀ ಅಗ್ರೇಶ್ವರ ಮಹಾದೇವ ನಾಗನಾಥೇಶ್ವರ ವಿರಾಜಮಾನ’ ಅವರ ಪರವಾಗಿ ವಕೀಲ ಪೂ. ಹರಿ ಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಸೇರಿದಂತೆ ೫ ಮಂದಿ ಸಲ್ಲಿಸಿದ್ದಾರೆ. ವಕೀಲ ಪೂ. ಹರಿ ಶಂಕರ್ ಜೈನ್ ಅವರು ವಾರಣಾಸಿಯ ಜ್ಞಾನವಾಪಿ ಪ್ರಕರಣದಲ್ಲೂ ಹಿಂದೂಗಳ ಪರವಾಗಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ.

೧. ಈ ಅರ್ಜಿಯಲ್ಲಿ ಅರ್ಜಿದಾರರು ‘ತಾಜಮಹಲ್’ ಇದು ಭಗವಾನ್ ಶಿವನಿಗೆ ಅರ್ಪಿತವಾದ ‘ತೇಜೋಮಹಾಲಯ’ವಾಗಿದೆ ಎಂದು ೧೦೯ ಹಿಂದೂ ಪುರಾವೆ/ಚಿಹ್ನೆಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಯ ಮೂಲಕ ಆಗ್ರಾದ ಜಿಲ್ಲಾ ನ್ಯಾಯಾಲಯದ ಹಳೆಯ ಆದೇಶವನ್ನು ಪ್ರಶ್ನಿಸಲಾಗಿದೆ. ಆ ಆದೇಶದಲ್ಲಿ ತಾಜಮಹಲ್‌ನಲ್ಲಿರುವ ಹಿಂದೂ ಚಿಹ್ನೆಗಳ ಪರಿಶೀಲನೆಗಾಗಿ ಸಮೀಕ್ಷೆ ನಡೆಸಲು ನಿರಾಕರಿಸಲಾಗಿತ್ತು.
೨. ಈ ಪ್ರಕರಣವು ೨೦೧೫ ರಲ್ಲಿ ಆರಂಭವಾಗಿತ್ತು. ಆ ಸಮಯದಲ್ಲಿ ಆಗ್ರಾದ ದಿವಾನಿ ನ್ಯಾಯಾಲಯದಲ್ಲಿ ಒಂದು ದಿವಾನಿ ಮೊಕದ್ದಮೆಯನ್ನು ಸಲ್ಲಿಸಲಾಗಿತ್ತು. ಅದರ ಮೂಲಕ ತಾಜಮಹಲ್ ಪರಿಸರವು ವಾಸ್ತವವಾಗಿ ತೇಜೋಮಹಾಲಯ, ಅಂದರೆ ತೇಜೋಲಿಂಗ ಮಹಾದೇವ ಮಂದಿರವಾಗಿದೆ, ಅಲ್ಲಿ ಭಗವಾನ್ ಮಹಾದೇವ ನಾಗನಾಥೇಶ್ವರ ವಿರಾಜಮಾನರಾಗಿದ್ದಾರೆ ಎಂದು ಹೇಳಲಾಗಿತ್ತು. ಜೊತೆಗೆ ಹಿಂದೂಗಳಿಗೆ ತಾಜಮಹಲ್‌ನಲ್ಲಿ ಪೂಜೆ ಮಾಡಲು ಅನುಮತಿ ನೀಡುವಂತೆ ಬೇಡಿಕೆಯನ್ನೂ ಇಡಲಾಗಿತ್ತು.
೩. ಇದರ ನಂತರ ಮತ್ತೆ ೨೦೧೯ ರಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಿ ತಾಜಮಹಲ್ ಪರಿಶೀಲನೆ ನಡೆಸಲು ಮತ್ತು ಅದರ ರಚನೆಯ ಛಾಯಾಚಿತ್ರಗಳನ್ನು ತೆಗೆಯಲು ಹಾಗೂ ವಿಡಿಯೋ ಮಾಡಲು ಒಬ್ಬ ‘ವಕೀಲ ಆಯುಕ್ತ’ರನ್ನು ನೇಮಿಸುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಅರ್ಜಿದಾರರು ತಾಜಮಹಲ್‌ನ ಗುರುತನ್ನು ಖಚಿತಪಡಿಸುವ ಕಂದಾಯ ದಾಖಲೆಗಳನ್ನು (ರೆವೆನ್ಯೂ ರೆಕಾರ್ಡ್ಸ್) ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿ ನ್ಯಾಯಾಲಯವು ಈ ಬೇಡಿಕೆಯನ್ನು ತಿರಸ್ಕರಿಸಿತ್ತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ