‘ವಾಟ್ಸ್‌ ಆ್ಯಪ್‌’ನ ಹೊಸ ‘ಯೂಸರನೇಮ್‌’ ಸೌಲಭ್ಯವನ್ನು ಪ್ರಾರಂಭಿಸದಂತೆ ನಿಷೇಧ

  • ಕೇಂದ್ರ ಸರಕಾರದಿಂದ ‘ಮೆಟಾ’ ಸಂಸ್ಥೆಗೆ ನೋಟಿಸ್‌

  • ೩ ದಿನಗಳಲ್ಲಿ ಉತ್ತರಿಸಲು ಸೂಚನೆ

(‘ಯೂಸರ್‌ ನೇಮ್‌’ ಎಂದರೆ ಬಳಕೆದಾರರ ಹೆಸರು)

ನವ ದೆಹಲಿ – ಭಾರತದಲ್ಲಿ ವಾಟ್ಸ್‌ ಆ್ಯಪ್‌ ನ ಹೊಸ ‘ಯೂಸರ್‌ ನೇಮ್‌’ ಸೌಲಭ್ಯವನ್ನು ಸದ್ಯಕ್ಕೆ ಜಾರಿಗೆ ತರದಂತೆ ಕೇಂದ್ರ ಸರಕಾರವು ವಾಟ್ಸ್‌ ಆ್ಯಪ್‌ ನ ಮಾತೃ ಸಂಸ್ಥೆಯಾದ ‘ಮೆಟಾ’ಗೆ ನೋಟಿಸ್‌ ಕಳುಹಿಸಿ ನಿರ್ದೇಶನ ನೀಡಿದೆ. ಈ ಸೌಲಭ್ಯದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲು ಮತ್ತು ಸಂಸ್ಥೆಯ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ?, ಎಂಬುದಕ್ಕೆ ಸ್ಪಷ್ಟೀಕರಣ ನೀಡಲು ಸರಕಾರವು ಸಂಸ್ಥೆಗೆ ೩ ದಿನಗಳ ಕಾಲಾವಕಾಶ ನೀಡಿದೆ. ​ಜನರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಬಹಿರಂಗಪಡಿಸದೆಯೇ ಕೇವಲ ‘ಯೂಸರ್‌ ನೇಮ್‌’ ಮೂಲಕ ಪರಸ್ಪರ ಸಂವಹನ ನಡೆಸಬಹುದಾದ ಹೊಸ ಸೌಲಭ್ಯವನ್ನು ಭಾರತ ಸೇರಿದಂತೆ ವಿಶ್ವಾದ್ಯಂತ ಪರಿಚಯಿಸುತ್ತಿರುವುದಾಗಿ ವಾಟ್ಸ್‌ ಆ್ಯಪ್‌ ಘೋಷಿಸಿತ್ತು. ಇದರಿಂದಾಗಿ ಯಾವುದೇ ಹೊಸ ವ್ಯಕ್ತಿಗೆ ಸಂಬಂಧಪಟ್ಟವರ ಮೊಬೈಲ್‌ ಸಂಖ್ಯೆಯು ಕಾಣಿಸುವುದಿಲ್ಲ.

ಸರಕಾರಕ್ಕೆ ಸೈಬರ್ ಅಪರಾಧಗಳು ಹೆಚ್ಚಾಗುವ ಭೀತಿ

ಸರಕಾರಿ ಅಧಿಕಾರಿಗಳು ಹೇಳುವುದೇನೆಂದರೆ, ಮೊಬೈಲ್‌ ಸಂಖ್ಯೆಯನ್ನು ಮರೆಮಾಡುವುದರಿಂದ ಸೈಬರ್ ವಂಚನೆ, ನಕಲಿ ಗುರುತನ್ನು ಸೃಷ್ಟಿಸಿ ಜನರನ್ನು ವಂಚಿಸುವುದು ಮುಂತಾದ ಆನ್‌ ಲೈನ್‌ ಅಪರಾಧಗಳು ಹೆಚ್ಚಾಗಬಹುದು. ಯಾವುದೇ ವ್ಯಕ್ತಿಯು ಯಾವುದೇ ಸರಕಾರಿ ಇಲಾಖೆ, ಬ್ಯಾಂಕ್ ಅಥವಾ ಪ್ರಸಿದ್ಧ ವ್ಯಕ್ತಿಯ ಹೆಸರಿನಂತಹ ಯೂಸರ್‌ ನೇಮ್‌ ಅನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಬಹುದು.