
ಹಾವೇರಿ – ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮುಸಲ್ಮಾನ್ ಯುವಕರು ಹಿಂದೂ ವ್ಯಾಪಾರಿಯೊಬ್ಬರಿಗೆ ಅಮಾನುಷವಾಗಿ ಥಳಿಸಿದ್ದಾರೆ. ಅವರ ಎದೆಗೆ ಕಲ್ಲಿನಿಂದ ಜಜ್ಜಿ ಹಾಗೂ ಗುಪ್ತಾಂಗದ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮೃತ ವ್ಯಾಪಾರಿಯ ಹೆಸರು ಶಿವಾಜಿರಾವ ಬಾಯರೋಜಿ (ವಯಸ್ಸು ೬೦ ವರ್ಷ) ಆಗಿದೆ. ರಸ್ತೆ ಬದಿಯಲ್ಲಿಶಿವಾಜಿರಾವ್ ಅವರ ಒಂದು ಸಣ್ಣ ಅಂಗಡಿ ಇತ್ತು. ಜುಲೈ ೧ ರ ರಾತ್ರಿ ಅವರ ಮಗ ಭರತ್ ಅಂಗಡಿ ನೋಡಿಕೊಳ್ಳುತ್ತಿದ್ದನು. ಈ ಸಮಯದಲ್ಲಿ ವಸೀಮ್ ಮುಲ್ಲಾ ಎಂಬಾತ ಅಂಗಡಿಯಿಂದ ೫ ಮೊಟ್ಟೆಗಳನ್ನು ಖರೀದಿಸಿ ೧೦೦ ರೂಪಾಯಿ ನೀಡಿದ್ದನು. ಆದರೂ ‘ನಾನು ೫೦೦ ರೂಪಾಯಿ ನೋಟು ನೀಡಿದ್ದೇನೆ. ಚಿಲ್ಲರೆ ಹಣವನ್ನು ವಾಪಸ್ ಕೊಡು’, ಎಂದು ಹೇಳಿ ಜಗಳವಾಡಿದ್ದಾನೆ. ಈ ಜಗಳವನ್ನು ಬಿಡಿಸಲು ಬಂದ ಶಿವಾಜಿರಾವ್ ಅವರ ಎದೆಯ ಮೇಲೆ ಆರೋಪಿಗಳು ಕಲ್ಲನ್ನು ಎಸೆದಿದ್ದಾರೆ. ೪ ಜನ ಮುಸಲ್ಮಾನ್ ಯುವಕರು ಒಟ್ಟಾಗಿ ಈ ದಾಳಿ ನಡೆಸಿದ್ದಾರೆ.
ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ವಸೀಮ್ ಮುಲ್ಲಾ, ಸರ್ಫರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಮತ್ತು ಶಿರಾಜ್ ಮುಲ್ಲಾ ಎಂಬುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ‘ಆರೋಪಿಗಳು ನನ್ನ ತಂದೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ’, ಎಂದು ಅವರ ಮಗ ದೂರು ನೀಡಿದ್ದಾನೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case