ಸರಕಾರಿ ಯೋಜನೆಗಳಲ್ಲಿನ ನುಸುಳುಕೋರರನ್ನು ಪತ್ತೆಹಚ್ಚುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮಾಹಿತಿ ಕೋರಲಾಗಿದೆ !
ಶ್ರೀ. ಪ್ರೀತಮ ನಾಚಣಕರ್, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ ಮುಂಬಯಿ

ಮುಂಬಯಿ, 22 ಜೂನ್ (ವಾರ್ತೆ.) – 2024 ರಿಂದ ಇಂದಿನವರೆಗೆ, ಅಂದರೆ ಕಳೆದ ಎರಡೂವರೆ ವರ್ಷಗಳಲ್ಲಿ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಮರಳಿ ಕಳುಹಿಸಲಾಗಿದೆ. ಈ ಪ್ರಮುಖ ಮಾಹಿತಿಯನ್ನು ಮಹಾರಾಷ್ಟ್ರ ಗೃಹ ರಾಜ್ಯ ಸಚಿವ (ನಗರ) ಯೋಗೇಶ್ ಕದಮ್ ಅವರು ‘ಸನಾತನ ಪ್ರಭಾತ’ ಪ್ರತಿನಿಧಿಗೆ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ 2024 ರಲ್ಲಿ 202, 2025 ರಲ್ಲಿ 2 ಸಾವಿರದ 736, ಮತ್ತು ಮೇ 2026 ರವರೆಗೆ 603 ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ. ಕೆಲವು ನುಸುಳುಕೋರರ ವಿರುದ್ಧ ನ್ಯಾಯಾಲಯದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ರಾಜ್ಯ ಸಚಿವ ಯೋಗೇಶ್ ಕದಮ್ ತಿಳಿಸಿದ್ದಾರೆ.
ಸರಕಾರಿ ಯೋಜನೆಗಳಲ್ಲಿನ ನುಸುಳುಕೋರರನ್ನು ಪತ್ತೆಹಚ್ಚುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮಾಹಿತಿ ಕೋರಲಾಗಿದೆ !
ಉಗ್ರ ನಿಗ್ರಹ ದಳವು (ATS) ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಿದೆ. ಇದರ ಆಧಾರದ ಮೇಲೆ, ಬಾಂಗ್ಲಾದೇಶಿ ನುಸುಳುಕೋರರು ಸರಕಾರದ ವಿವಿಧ ಇಲಾಖೆಗಳ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆಯೇ?, ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳ ಸರಬರಾಜುದಾರರಿಗೂ ಈ ಪಟ್ಟಿಯನ್ನು ರವಾನಿಸಿದೆ. ಈ ಪಟ್ಟಿಯನ್ನು ಕಳುಹಿಸಿ 1 ವರ್ಷ ಕಳೆದರೂ ಇದುವರೆಗೆ ಯಾವುದೇ ಜಿಲ್ಲೆಯಿಂದ ಈ ಬಗ್ಗೆ ಸರಕಾರಕ್ಕೆ ಪರಿಶೀಲನಾ ವರದಿ ಬಂದಿಲ್ಲ. ಈ ಕುರಿತು ಕೇಳಲಾದ ಪ್ರಶ್ನೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ತರಿಸಿಕೊಳ್ಳಲು ಸೂಚನೆ ನೀಡಿರುವುದಾಗಿ ರಾಜ್ಯ ಸಚಿವ ಯೋಗೇಶ ಕದಮ್ ತಿಳಿಸಿದ್ದಾರೆ.
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University