ಗೃಹ ಸಚಿವ ಅಮಿತ್ ಶಹಾ ಅವರಿಂದ ಅಧಿಕಾರಿಗಳಿಗೆ ಆದೇಶ

ನವದೆಹಲಿ – ಗಡಿ ಜಿಲ್ಲೆಗಳಲ್ಲಿ ಆಗುತ್ತಿರುವ ಜನಸಂಖ್ಯಾಶಾಸ್ತ್ರದ ಬದಲಾವಣೆಗಳ ಕುರಿತು ಅಧ್ಯಯನ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರು ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಜನಸಂಖ್ಯಾಶಾಸ್ತ್ರದ ಬದಲಾವಣೆಗಳ ಕುರಿತು ನಡೆದ ಪ್ರಮುಖ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಇದರೊಂದಿಗೆ, ಪರಿಸ್ಥಿತಿಯ ಪ್ರತ್ಯಕ್ಷ ಪರಿಶೀಲನೆಗಾಗಿ ಗಡಿ ಪ್ರದೇಶಗಳು, ಮೆಟ್ರೋ ನಗರಗಳು ಮತ್ತು ಕೈಗಾರಿಕಾ ನಗರಗಳಿಗೆ ಭೇಟಿ ನೀಡುವಂತೆಯೂ ಅವರು ಸೂಚಿಸಿದ್ದಾರೆ. ಇದಕ್ಕೂ ಮುನ್ನ, ಜೂನ್ 5 ರಂದು ಶಹಾ ಅವರು, “ಬಂಗಾಳ, ತ್ರಿಪುರಾ ಮತ್ತು ಬಿಹಾರ ರಾಜ್ಯಗಳಲ್ಲಿನ ಜನಸಂಖ್ಯಾಶಾಸ್ತ್ರದ ಬದಲಾವಣೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ದೇಶದ ಗಡಿ ಭದ್ರತೆಯಲ್ಲಿನ ಲೋಪದೋಷಗಳನ್ನು ನಿವಾರಿಸಲು ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.
‘ಸ್ಮಾರ್ಟ್ ಬಾರ್ಡರ್’ (ಸುಧಾರಿತ ಗಡಿ ಭದ್ರತೆ) ಯೋಜನೆ ಅಂತಿಮ ಹಂತದಲ್ಲಿ!
ಅಂತರರಾಷ್ಟ್ರೀಯ ಗಡಿಗಳ ಮೇಲಿನ ನಿಗಾ ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದು ಹೇಳಿದ ಶಹಾ, ಗಡಿ ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವಂತೆ ಒತ್ತು ನೀಡಿದರು. ತ್ರಿಪುರಾದ ಲಂಕಾಮುರಾ ಗಡಿ ಚೌಕಿ (Outpost) ಯಲ್ಲಿ ಗಡಿ ಭದ್ರತಾ ಪಡೆಯ (BSF) ಸೈನಿಕರೊಂದಿಗೆ ಸಂವಾದ ನಡೆಸುವಾಗ, ‘ಸ್ಮಾರ್ಟ್ ಬಾರ್ಡರ್’ (ಸುಧಾರಿತ ಗಡಿ ಭದ್ರತೆ) ಯೋಜನೆ ಅಂತಿಮ ಹಂತಕ್ಕೆ ತಲುಪಿದೆ ಎಂಬ ಮಾಹಿತಿಯನ್ನು ಅವರು ನೀಡಿದರು. ಈ ಯೋಜನೆಯನ್ನು ದೇಶದ 7 ರಿಂದ 8 ಸ್ಥಳಗಳಲ್ಲಿ ಪ್ರಾಯೋಗಿಕವಾಗಿ (Pilot project) ಜಾರಿಗೊಳಿಸಲಾಗುವುದು. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸ್ಥಳೀಯ ಆಡಳಿತ ಮತ್ತು ಗಡಿ ಭದ್ರತಾ ಪಡೆಗಳ ಸಮನ್ವಯದ ಸಹಭಾಗಿತ್ವ ಇರಲಿದೆ. ಗಡಿ ಭದ್ರತೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವುದರ ಜೊತೆಗೆ, ಜನಸಂಖ್ಯಾಶಾಸ್ತ್ರದ ಬದಲಾವಣೆಗಳ ಮೇಲೆಯೂ ತೀವ್ರ ನಿಗಾ ಇಡಲಾಗುವುದು ಎಂದು ಶಾ ಸ್ಪಷ್ಟಪಡಿಸಿದ್ದಾರೆ.
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ