ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ !

ಚಿತ್ತಗಾಂಗ್ (ಬಾಂಗ್ಲಾದೇಶ) – ಚಿತ್ತಗಾಂಗ್ ಜಿಲ್ಲೆಯ ಪಟಿಯಾ ಉಪಜಿಲ್ಲೆಯಲ್ಲಿ ಜೂನ್ 9 ರ ರಾತ್ರಿ ಪಂಕಜ್ ಶೀಲ್ (ವಯಸ್ಸು 35 ವರ್ಷ) ಎಂಬ ಹಿಂದೂ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಇದರಲ್ಲಿ ಗಾಯಗೊಂಡಿರುವ ಮತ್ತೊಬ್ಬ ಹಿಂದೂವಿಗೆ ‘ಚಿತ್ತಗಾಂಗ್ ವೈದ್ಯಕೀಯ ಕಾಲೇಜಿ’ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿಯನ್ನು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಪದಾಧಿಕಾರಿಗಳು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಕೊಲೆ, ಅತ್ಯಾಚಾರ, ಅಪಹರಣ, ಬಲವಂತದ ಮತಾಂತರ, ದೇವಸ್ಥಾನಗಳ ಅಪವಿತ್ರಗೊಳಿಸುವಿಕೆ, ಭೂಮಿ ಒತ್ತುವರಿ ಮುಂತಾದ ಮಾನವ ಹಕ್ಕುಗಳ ಉಲ್ಲಂಘನೆಯ ಅನೇಕ ಘಟನೆಗಳು ಇಂದಿಗೂ ನಡೆಯುತ್ತಿವೆ ಎಂದು ಸಂಘಟನೆ ತಿಳಿಸಿದೆ.

ಈ ಬಗ್ಗೆ ಚಿತ್ತಗಾಂಗ್ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ, ಜೂನ್ 10 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ವಶಕ್ಕೆ ಪಡೆಯಲಾದ ಶಂಕಿತ ವ್ಯಕ್ತಿ ಮನೋರೋಗಿಯಾಗಿದ್ದಾನೆ ಎಂದು ಹೇಳಿದ್ದಾರೆ. ಇದುವರೆಗೆ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ. (ಭಾರತವಿರಲಿ ಅಥವಾ ಪಾಕಿಸ್ತಾನ-ಬಾಂಗ್ಲಾದೇಶವಿರಲಿ, ಹಿಂದೂಗಳ ಮೇಲೆ ದಾಳಿ ಮಾಡುವ ಅಥವಾ ಅವರನ್ನು ಕೊಲೆ ಮಾಡುವ ಮತಾಂಧ ಮುಸ್ಲಿಮರು ಮನೋರೋಗಿಗಳೇ ಆಗಿರುತ್ತಾರೆ. ಇದರ ಅರ್ಥ ಈಗ ಈ ಮುಸ್ಲಿಮರ ‘ಬ್ರೈನ್‌ವಾಶ್’ ಮಾಡುವುದರಿಂದ ಅವರಿಗೆ ವಿಕೃತ ಮಾನಸಿಕ ಕಾಯಿಲೆ ಬರುತ್ತದೆ ಮತ್ತು ಅದರಿಂದ ಅವರು ಹಿಂದೂಗಳನ್ನು ಕೊಲೆ ಮಾಡುತ್ತಾರೆ ಎಂದು ಕೊಳ್ಳಬೇಕೆ? – ಸಂಪಾದಕರು)