ಸ್ವತಂತ್ರ ಗುಂಪಾಗಿ ಮಾನ್ಯತೆ ನೀಡುವಂತೆ ಲೋಕಸಭೆಯ ಅಧ್ಯಕ್ಷರಲ್ಲಿ ಬೇಡಿಕೆ !
ಆಡಳಿತಾರೂಢ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ’ದಲ್ಲಿ ಸೇರ್ಪಡೆಯಾಗಲು ಇಚ್ಛೆ !

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದಲ್ಲಿ ಬಿರುಕು ಉಂಟಾದ ನಂತರ ಈಗ ಸಂಸದೀಯ ಪಕ್ಷದಲ್ಲೂ ಬಿರುಕು ಮೂಡಿರುವುದು ಬೆಳಕಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್‌ನ 20 ಸಂಸದರು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಸಂಸತ್ತಿನಲ್ಲಿ ಸ್ವತಂತ್ರ ಗುಂಪಿಗೆ ಮಾನ್ಯತೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರೊಂದಿಗೆ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ ಭಾಗಿಯಾಗುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಸಹಿ ಮಾಡಿದವರಲ್ಲಿ ಅರೂಪ ಚಕ್ರವರ್ತಿ, ಪಾರ್ಥ ಭೌಮಿಕ್, ಶತಾಬ್ದಿ ರಾಯ್, ಜಗದೀಶ್ ಬಸುನಿಯಾ, ಕಾಕೋಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಕಾಲಿಪದ ಸೋರೆನ್, ಶರ್ಮಿಳಾ ಸರ್ಕಾರ್, ಜೂನ್ ಮಾಲಿಯಾ, ಬಾಪಿ ಹಲ್ದಾರ್, ಅಸಿತ್ ಮಲ್ ಮತ್ತು ಸುಬೇಂದು ಶೇಖರ್ ರಾಯ್ ಸೇರಿದ್ದಾರೆ ಎಂದು ತಿಳಿದುಬಂದಿದೆ. ಬಂಡಾಯ ಗುಂಪಿನ ನಾಯಕಿಯಾಗಿ ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ಮಾನ್ಯ ಮಾಡಬೇಕೆಂದು ವಿನಂತಿಸಲಾಗಿದೆ. 20 ಬಂಡಾಯ ಸಂಸದರಲ್ಲಿ ಭಾಜಪದ ಮಾಜಿ ನಾಯಕರು ಮತ್ತು ನಂತರ ತೃಣಮೂಲಕ್ಕೆ ಸೇರ್ಪಡೆಯಾಗಿದ್ದ ಶತ್ರುಘ್ನ ಸಿನ್ಹಾ ಮತ್ತು ಕೀರ್ತಿ ಆಜಾದ್ ಕೂಡ ಸೇರಿದ್ದಾರೆ ಎಂಬುದು ವಿಶೇಷ.
ಸ್ವತಂತ್ರ ಗುಂಪಿಗೆ ಮಾನ್ಯತೆ ಪಡೆಯಲು ಲೋಕಸಭೆಯ ಅಧ್ಯಕ್ಷರಿಗೆ ಪತ್ರ ಬರೆಯುವ ಮುನ್ನ ಬಂಡಾಯ ಸದಸ್ಯರು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದರು. ಆ ನಂತರ ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಶೇಖರ್ ರಾಯ್ ಅವರು ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ, ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು ಮತ್ತು ಪಕ್ಷ ತೊರೆಯುವುದಾಗಿ ಘೋಷಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!