ಅರಬ್ ದೇಶಗಳಲ್ಲಿರುವ ಕಠಿಣ ಶಿಕ್ಷೆಗಳ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ಹೇಳಿಕೆ

ಬೆಂಗಳೂರು – ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ 23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು, “ನಾವು ಅಪರಾಧಿಗಳೊಂದಿಗೆ ಕಠಿಣವಾಗಿ ನಡೆದುಕೊಳ್ಳದ ಕಾರಣ ಭಾರತದಲ್ಲಿ ಕಾನೂನಿನ ಹರಿತ ಕಡಿಮೆಯಾಗಿದೆ. ಇದೇ ಕಾರಣದಿಂದಾಗಿ ಅಪರಾಧ ಮಾಡುವುದು ತುಂಬಾ ಸುಲಭವಾಗಿದೆ. ಒಂದು ವೇಳೆ ನೀವು ಯಾರದ್ದಾದರೂ ಕೈ ಅಥವಾ ಕಾಲುಗಳನ್ನು ಮುರಿದರೆ, ಬಹುಶಃ ಜನರು ಕಾನೂನನ್ನು ಗೌರವಿಸಲು ಕಲಿಯುತ್ತಾರೆ; ಏಕೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ಪ್ರತಿಯೊಬ್ಬರೂ ಇದರ ದುರುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದೆ.
"The deterrent power of the law has weakened in India. If you chop leg or hand, perhaps only then people will realise to comply with law."
Justice R. Nataraj of Karnataka High Court observed that people in Arab countries obey the law because they know the consequences, whereas… pic.twitter.com/ZKCIQvG8px
— Sanatan Prabhat (@SanatanPrabhat) June 2, 2026
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಆರ್. ನಟರಾಜರವರು ಅರಬ್ ದೇಶಗಳ ಕಠಿಣ ಶಿಕ್ಷೆಗಳನ್ನು ಉಲ್ಲೇಖಿಸಿ, “ಅಲ್ಲಿ ಜನರು ಕಾನೂನನ್ನು ಪಾಲಿಸುತ್ತಾರೆ; ಏಕೆಂದರೆ ತಮಗೆ ಯಾವ ಶಿಕ್ಷೆ ಸಿಗಬಹುದು ಎಂಬುದು ಅವರಿಗೆ ತಿಳಿದಿರುತ್ತದೆ. ಆದರೆ ಈಗ ಭಾರತದಲ್ಲಿ ಜನರಿಗೆ ಕಾನೂನಿನ ಭಯವೇ ಉಳಿದಿಲ್ಲ. ಇಂದು ಅಪರಾಧಗಳನ್ನು ಸಾಮಾನ್ಯ ಸಂಗತಿಯೆಂಬಂತೆ ಮಾಡಲಾಗುತ್ತಿದೆ” ಎಂದರು.
ಉಪ್ಪು ತಿಂದರೆ ನೀರು ಕುಡಿಯಲೇಬೇಕು!
(‘ಉಪ್ಪು ತಿಂದರೆ ನೀರು ಕುಡಿಯಲೇಬೇಕು’ ಎಂದರೆ ತಪ್ಪು ಕೆಲಸ ಮಾಡಿದರೆ, ಅದರ ಫಲವನ್ನು ಅನುಭವಿಸಲೇಬೇಕು)
ಆರೋಪಿ ವಿದ್ಯಾರ್ಥಿಯು ಏಪ್ರಿಲ್ 2026ರ ಆರಂಭದಿಂದಲೂ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅವನ ಜಾಮೀನಿನ ಕುರಿತು ನ್ಯಾಯಾಲಯವು ಮುಂದುವರಿದು, “ನೀವು ಉಪ್ಪು ತಿಂದಿದ್ದರೆ, ನೀರನ್ನು ಕುಡಿಯಲೇಬೇಕು. ಅವನು ಇನ್ನೂ 4-5 ದಿನಗಳು ಜೈಲಿನಲ್ಲೇ ಇರಲಿ. ಅವನಿಗೆ ಜೈಲಿನ ಅಭ್ಯಾಸವಾಗಲಿ. ಯಾರಿಗೆ ಗೊತ್ತು, ಒಂದು ವೇಳೆ ಶಿಕ್ಷೆಯಾದರೆ ಪುನಃ ಜೈಲಿಗೆ ಹೋಗಬೇಕಾಗಿ ಬರಬಹುದು” ಎಂದು ಹೇಳಿತು.
ಯುವತಿಯಿಂದ ಲೈಂಗಿಕ ದೌರ್ಜನ್ಯದ ಆರೋಪ
ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ‘ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ವಿದ್ಯಾರ್ಥಿಗಳಾಗಿದ್ದರು ಮತ್ತು ಅವರು ಮೊದಲಿನಿಂದಲೂ ಪರಸ್ಪರ ಪರಿಚಿತರಾಗಿದ್ದರು. ಇಬ್ಬರ ನಡುವೆ ಮೊದಲು ಸಂಬಂಧವಿತ್ತು; ಆದರೆ ನಂತರ ಯುವತಿಯು ಆರೋಪಿಯಿಂದ ದೂರವಿರಲು ಪ್ರಾರಂಭಿಸಿದಳು. ದೂರಿನ ಪ್ರಕಾರ, ಸೆಪ್ಟೆಂಬರ್ 2023 ರಲ್ಲಿ ಆರೋಪಿಯು ಮಾತನಾಡುವ ನೆಪದಲ್ಲಿ ಯುವತಿಯನ್ನು ಅಪಾರ್ಟ್‌ಮೆಂಟ್‌ವೊಂದಕ್ಕೆ ಕರೆಸಿದ್ದನು. ಅಲ್ಲಿ ಅವನು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಸಂತ್ರಸ್ತೆ ತದನಂತರ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಂಪರ್ಕಿಸಿದಳು. ಆ ಬಳಿಕ ಪೊಲೀಸರಲ್ಲಿ ಔಪಚಾರಿಕ ದೂರು ದಾಖಲಿಸಲಾಯಿತು. ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 8 ಕ್ಕೆ ನಿಗದಿಪಡಿಸಿದೆ.
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್