ಚಿತ್ರಕೂಟ (ಮಧ್ಯಪ್ರದೇಶ) ಇಲ್ಲಿ ನಡೆದ ಘಟನೆ
ಲೈನ್ಮನ್ ಮತ್ತು ಆಪರೇಟರ್ ಮೇಲೆ ಹಲ್ಲೆ
ಜನರಿಂದ ಪ್ರತಿಭಟನೆ

ಸತ್ನಾ (ಮಧ್ಯಪ್ರದೇಶ) – ಸತ್ನಾ ಜಿಲ್ಲೆಯ ಚಿತ್ರಕೂಟದಲ್ಲಿ ನ್ಯಾಯಾಧೀಶ ರಾಮ ಅವತಾರ ಪಟೇಲ ಅವರು ತಮ್ಮ ಮನೆಗೆ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಮರಳಿ ಪಡೆಯುವ ಧಾವಂತದಲ್ಲಿ ಇಡೀ ನಗರದ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಯಾಧೀಶರ ರಕ್ಷಣೆಯಲ್ಲಿದ್ದ ಪೊಲೀಸರು ಲೈನ್ ಮನ್ ಮತ್ತು ಆಪರೇಟರ್ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ.
Chitrakoot (Madhya Pradesh):
Judge orders power supply to the entire locality to be disconnected because electricity was not restored to his home.Lineman and operator assaulted. Public protests follow the incident.
Such incidents raise serious questions about how a judge… pic.twitter.com/JXp6QRzpCO
— Sanatan Prabhat (@SanatanPrabhat) June 1, 2026
1. ಮೇ 28 ರ ತಡರಾತ್ರಿ ಸುಮಾರು ಒಂದು ಗಂಟೆಯ ವೇಳೆಗೆ ಬೀಸಿದ ಬಿರುಗಾಳಿಯಿಂದಾಗಿ ಇಡೀ ಚಿತ್ರಕೂಟದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ವಿದ್ಯುತ್ ಇಲಾಖೆಯು ದೋಷವನ್ನು ಸರಿಪಡಿಸಿ ಮರುದಿನ ಸಂಜೆ ವಿದ್ಯುತ್ ಪೂರೈಕೆಯನ್ನು ಯಥಾಸ್ಥಿತಿಗೆ ತಂದಿತ್ತು; ಆದರೆ ನ್ಯಾಯಾಧೀಶ ರಾಮ ಅವತಾರ ಪಟೇಲ ಸೇರಿದಂತೆ ಮೂವರ ಮನೆಗೆ ವಿದ್ಯುತ್ ಬಂದಿರಲಿಲ್ಲ. ಈ ಕೋಪದಲ್ಲಿ ನ್ಯಾಯಾಧೀಶರು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕರೆದುಕೊಂಡು ರಜೌಲಾದಲ್ಲಿರುವ 33/11 ಕೆವಿ ಸಬ್-ಸ್ಟೇಷನ್‌ಗೆ ತಲುಪಿದರು. ಅಲ್ಲಿ ಅವರು ಆಪರೇಟರ್ ಪಂಕಜ ಸೇನ ಅವರಿಗೆ, ‘ಇಡೀ ನಗರದ ವಿದ್ಯುತ್ ಕಡಿತಗೊಳಿಸಿದರೂ ಪರವಾಗಿಲ್ಲ; ಆದರೆ ನನ್ನ ಮನೆಗೆ ವಿದ್ಯುತ್ ಬರಬೇಕು’ ಎಂದು ಬೆದರಿಕೆ ಹಾಕಿದರು. ಅವರ ಮಾತಿನ ಮೇರೆಗೆ ಇಡೀ ರಜೌಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು ಮತ್ತು ಜನರು ಮತ್ತೊಮ್ಮೆ ವಿದ್ಯುತ್ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿತು.
2. ಎರಡನೇ ಬಾರಿಗೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನರ ಗುಂಪು ಪವರ್ ಹೌಸ್ ಗೆ ತಲುಪಿ ಪ್ರತಿಭಟನೆ ಆರಂಭಿಸಿತು. ಜನಸಂದಣಿಯನ್ನು ಕಂಡು ನ್ಯಾಯಾಧೀಶರು ಅಲ್ಲಿಂದ ಹೊರಟುಹೋದರು. ನಗರದ ವಿದ್ಯುತ್ ಕಡಿತಗೊಳಿಸಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಜನರು ಒತ್ತಾಯಿಸಿದರು.
3. ಆಪರೇಟರ ಪಂಕಜ ಸೇನ ಅವರು, ತಮ್ಮ ಮೊಬೈಲ್ ಫೋನ್ ಅನ್ನು ಕೂಡ ಕಸಿದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಈ ವೇಳೆ ನ್ಯಾಯಾಧೀಶರೊಂದಿಗೆ ಬಂದಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಲೈನ್ ಮನ್ ಸಂಜಯ ಸೇನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಆಪರೇಟರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ