ಆಕ್ರೋಶಿತ ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ ಪೊಲೀಸರಿಂದ ಆರೋಪಿಯ ಬಂಧನ

ಮೀರತ್ (ಉತ್ತರ ಪ್ರದೇಶ) – ಬಕ್ರೀದ್ ದಿನದಂದು ಗದಾ ಖಾನ್ ಎಂಬ ವ್ಯಕ್ತಿಯು ಇಲ್ಲಿನ ದುರ್ಗಾ ದೇವಸ್ಥಾನದಲ್ಲಿ ಮೇಕೆ ಮಾಂಸವನ್ನು ಬೇಯಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಎಚ್ಚೆತ್ತ ಹಿಂದೂಗಳು ಖಾನ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆಯಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಖಾನ್ ನನ್ನು ಬಂಧಿಸಿದ್ದಾರೆ.
ಘಟನಾಕ್ರಮ ಹೀಗಿದೆ!
1. ಈ ಘಟನೆಯು ನಗರದ ನೌಚಂಡಿ ಮೈದಾನದಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ನಡೆದಿದೆ.
2. ಗದಾ ಖಾನ್ ಮೂಲತಃ ರಾಜಸ್ಥಾನದ ನಿವಾಸಿ. ಆತ ದೇವಸ್ಥಾನದ ಆವರಣದಲ್ಲಿ ತೊಟ್ಟಿಲು ಹಾಕಿದ್ದನು. ಮೇ 28 ರಂದು ಆತ ಪವಿತ್ರ ದೇವಸ್ಥಾನದ ಒಳಗೆಯೇ ಮೇಕೆ ಮಾಂಸವನ್ನು ಬೇಯಿಸಲು ಪ್ರಾರಂಭಿಸಿದನು.
3. ಈ ಘಟನೆ ಸ್ಥಳೀಯ ಹಿಂದೂ ಸಂಘಟನೆಗಳಿಗೆ ತಿಳಿಯುತ್ತಲೇ ಅವರು ಇದನ್ನು ಖಂಡಿಸಿದರು. ‘ನರಸಿಂಹ ವಾಹಿನಿ’ ಮತ್ತು ‘ಕಾರ್ತಿಕ ಸೇನೆ’ ಸಂಘಟನೆಗಳ ಕಾರ್ಯಕರ್ತರು ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಿದರು. ಅವರು ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
4. ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡು ದೊಡ್ಡ ಪೊಲೀಸ್ ಪಡೆ ಘಟನಾ ಸ್ಥಳಕ್ಕೆ ಬಂದಿತು. ಪೊಲೀಸರು ದೇವಸ್ಥಾನದಿಂದ ಮಾಂಸವನ್ನು ವಶಪಡಿಸಿಕೊಂಡರು. ಪೊಲೀಸ್ ಅಧಿಕಾರಿಗಳು ಆಕ್ರೋಶಗೊಂಡ ಹಿಂದುತ್ವವಾದಿಗಳನ್ನು ಸಮಾಧಾನಪಡಿಸುತ್ತಾ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”