
ಮುಂದ್ರಾ (ಗುಜರಾತ್) – ಮುಂದ್ರಾ ಬಂದರಿನಲ್ಲಿ ಮಾದಕ ವಸ್ತುಗಳು ಪತ್ತೆಯಾಗುವ ಸರಣಿ ಮುಂದುವರಿದಿದ್ದು, ಮೇ 28 ರಂದು ಇಲ್ಲಿ 1 ಸಾವಿರದ 200 ಕೋಟಿ ರೂಪಾಯಿ ಬೆಲೆಬಾಳುವ 118 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಈ ಪ್ರಕರಣದಲ್ಲಿ 3 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಸೈಪ್ರಸ್‌ನ ಸರಕು ಸಾಗಣೆ ಹಡಗಿನಲ್ಲಿ ನಡೆಸಿದ ಶೋಧದ ವೇಳೆ ಈ ಕೊಕೇನ್ ಪತ್ತೆಯಾಗಿದೆ. ಈ ಹಡಗು ಬ್ರೆಜಿಲ್, ದಕ್ಷಿಣ ಅಮೇರಿಕಾ, ಮೆಕ್ಸಿಕೋ ಮತ್ತು ಪಾಕಿಸ್ತಾನದ ಕರಾಚಿ ಬಂದರಿನ ಮೂಲಕ ಗುಜರಾತ್ ಕರಾವಳಿಗೆ ಬಂದಿತ್ತು. ಕಾರ್ಯಾಚರಣೆಯ ನಂತರ ಈ ಹಡಗನ್ನು ಕಚ್ ಬಂದರಿಗೆ ತರಲಾಗಿದೆ.
ವಶಪಡಿಸಿಕೊಂಡ ಕೊಕೇನ್ ಅನ್ನು ದೆಹಲಿಯ ದ್ವಾರಕಾದಲ್ಲಿ ವಾಸಿಸುವ 2 ಜನರಿಗೆ ತಲುಪಿಸಬೇಕಿತ್ತು ಎಂದು ಪೊಲೀಸರಿಂದ ಬಂಧಿತನಾದ ಆರೋಪಿ ಮಾಹಿತಿ ನೀಡಿದ್ದಾನೆ. ಈ ಹಿಂದೆಯೂ ಮುಂದ್ರಾ ಬಂದರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಹಲವು ಬಾರಿ ಹಿಡಿಯಲಾಗಿದೆ. ಮುಂದ್ರಾ ಬಂದರು ಖಾಸಗಿ ಬಂದರಾಗಿದ್ದು, ಅದಾನಿ ಸಮೂಹದ ಒಡೆತನದಲ್ಲಿದೆ.
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ
ಚಿಕ್ಕಬಳ್ಳಾಪುರದಿಂದ ಇಬ್ಬರು ಪಾಕಿಸ್ತಾನಿ ನುಸುಳುಕೋರರ ಬಂಧನ
ಹಿಂದೂ ಮಹಿಳಾ ವೈದ್ಯರನ್ನು ಬೆನ್ನಟ್ಟಿ ಪೀಡಿಸುತ್ತಿದ್ದ ಆಜಂ ವಿರುದ್ಧ ಮೊಕದ್ದಮೆ ದಾಖಲು : Uttarakhand Lady Doctor Harassed