೩೦ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಕುರಿ ಬಲಿಯ ಸಂಪ್ರದಾಯ ಸ್ಥಗಿತ!
ಪಾಲಿಕೆ ಜಾಗ ನೀಡುವ ಕಡೆ ಬಲಿ ನೀಡಲು ಮುಸ್ಲಿಮರ ಸಮ್ಮತಿ!

ಮುಂಬಯಿ – ಘಾಟ್‌ಕೋಪರ್‌ನ ಸಾಗರ ಪಾರ್ಕ್ ಕಟ್ಟಡದಲ್ಲಿ ಕುರಿ ಬಲಿ ನೀಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇಲ್ಲಿ ಕಳೆದ ೩೦ ವರ್ಷಗಳಿಂದ ಕುರಿಗಳ ಬಲಿ ನೀಡಲಾಗುತ್ತಿತ್ತು; ಆದರೆ ಮೇ ೨೬ ರ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮಹಾನಗರ ಪಾಲಿಕೆಯು ಕುರಿಗಳ ಬಲಿ ನೀಡುವ ಅನುಮತಿಯನ್ನು ರದ್ದುಗೊಳಿಸಿತು. ಇದರ ನಂತರ ಅಲ್ಲಿನ ಮುಸ್ಲಿಮರು, ‘‘ನಾವು ಕಟ್ಟಡದ ಆವರಣದಲ್ಲಿ ಕುರಿಗಳ ಬಲಿ ನೀಡುವುದಿಲ್ಲ; ಆದರೆ ಮಹಾನಗರ ಪಾಲಿಕೆಯು ನಮಗೆ ಪರ್ಯಾಯ ಜಾಗವನ್ನು ಒದಗಿಸಿಕೊಡಬೇಕು. ನಮಗೆ ಕಟ್ಟಡದ ಹೆಸರನ್ನು ಕೆಡಿಸಲು ಇಷ್ಟವಿಲ್ಲ’ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಇಲ್ಲಿ ದೊಡ್ಡ ಮಟ್ಟದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ರಾಜ್ಯ ಮೀಸಲು ಪೊಲೀಸ್ ಪಡೆಯ ತುಕಡಿಯನ್ನೂ ಸಹ ನಿಯೋಜಿಸಲಾಗಿತ್ತು.
ಬಲಿಗಾಗಿ ಮುಂಬಯಿ ಮಹಾನಗರ ಪಾಲಿಕೆಯು ಅವರಿಗೆ ಸೂಕ್ತ ಸ್ಥಳದಲ್ಲಿ ಜಾಗ ನೀಡಲಿದೆ! – ಕಿರೀಟ್ ಸೋಮಯ್ಯ

ಈ ಸಂದರ್ಭದಲ್ಲಿ ಭಾಜಪದ ನಾಯಕ ಕಿರೀಟ್ ಸೋಮಯ್ಯ ಮಾತನಾಡಿ, ‘ಸಾಗರ ಪಾರ್ಕ್ ಕಟ್ಟಡದಲ್ಲಿ ಇರಿಸಲಾಗಿದ್ದ ೩೧ ಕುರಿಗಳಲ್ಲಿ ೨೩ ಕುರಿಗಳನ್ನು ಮುಂಬಯಿ ಮಹಾನಗರ ಪಾಲಿಕೆಯು ತನ್ನ ವಶಕ್ಕೆ ತೆಗೆದುಕೊಂಡಿದೆ. ಇನ್ಮುಂದೆ ಇಲ್ಲಿ ಒಂದೂ ಕುರಿಯನ್ನು ಬಲಿ ನೀಡಲು ಬಿಡುವುದಿಲ್ಲ. ಬಲಿಗಾಗಿ ಮುಂಬಯಿ ಮಹಾನಗರ ಪಾಲಿಕೆಯು ಅವರಿಗೆ ಸೂಕ್ತ ಸ್ಥಳದಲ್ಲಿ ಜಾಗವನ್ನು ನೀಡಲಿದೆ. ಸುರಕ್ಷತೆಯನ್ನು ಕಾಪಾಡುವುದು ಪೊಲೀಸರ ಕೆಲಸವಾಗಿದೆ. ಪ್ರತಿಯೊಂದು ಸ್ಥಳಕ್ಕೂ ನಾವು ಹೋಗಲೇಬೇಕಾಗುತ್ತದೆ’ ಎಂದರು.
ವಸತಿ ಸೊಸೈಟಿಗಳಲ್ಲಿ ಕಸಾಯಿಖಾನೆಗಳನ್ನು ನಿರ್ಮಿಸುವುದು ಸರಿಯಲ್ಲ! – ಶಿವಸೇನೆಯ ಶಾಸಕ ಸಂಜಯ ಶಿರ್ಸಾಟ್
ಶಿವಸೇನೆಯ ಶಾಸಕ ಸಂಜಯ ಶಿರ್ಸಾಟ್ ಮಾತನಾಡಿ, ‘ವಸತಿ ಸೊಸೈಟಿಗಳಲ್ಲಿ ಕಸಾಯಿಖಾನೆಗಳನ್ನು ನಿರ್ಮಿಸುವುದು ಸರಿಯಲ್ಲ. ಧಾರ್ಮಿಕ ಹಬ್ಬಗಳನ್ನು ಆಚರಿಸಲು ಯಾರದ್ದೂ ವಿರೋಧವಿಲ್ಲ; ಆದರೆ ಜನರು ವಾಸಿಸುವ ಇಂತಹ ವಸತಿ ಪ್ರದೇಶಗಳಲ್ಲಿ ಈ ರೀತಿ ಪ್ರಾಣಿಗಳನ್ನು ಬಲಿ ಕೊಡುವುದು ಸರಿಯಲ್ಲ’’ಎಂದು ಹೇಳಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!