ಬಕ್ರೀದ್ ಹಿನ್ನೆಲೆಯಲ್ಲಿ ಸಾರಿಗೆ ಸಚಿವರ ಎಚ್ಚರಿಕೆ !

ಮುಂಬಯಿ – ಬಕ್ರೀದ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಗೋಮಾತೆಯ ಅಕ್ರಮ ಸಾಗಾಟ, ಕಾನೂನುಬಾಹಿರ ಕಸಾಯಿಖಾನೆಗಳು ಮತ್ತು ಗೋವಂಶಗಳ ಮೇಲಾಗುವ ಅಮಾನವೀಯ ಅತ್ಯಾಚಾರಗಳ ವಿರುದ್ಧ ಮಹಾರಾಷ್ಟ್ರ ರಾಜ್ಯ ಸರಕಾರವು ಕಠಿಣ ನಿಲುವು ತೆಗೆದುಕೊಂಡಿದೆ. ‘ಗೋಮಾತೆಯ ಕಳ್ಳಸಾಗಣೆ ಮತ್ತು ಹತ್ಯೆಯನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಸಹಿಸಲಾಗುವುದಿಲ್ಲ’, ಎಂದು ಸಾರಿಗೆ ಸಚಿವ ಪ್ರತಾಪ ಸರನಾಯಿಕ ಅವರು ತೀಕ್ಷ್ಣವಾಗಿ ಎಚ್ಚರಿಕೆ ನೀಡಿದ್ದಾರೆ.
ಅವರು ಮುಂದೆ ಮಾತನಾಡುತ್ತಾ,
೧. ವಿಶಿಷ್ಟ ಹಬ್ಬಗಳ ಕಾಲದಲ್ಲಿ ಗೋಮಾತೆಯ ಕಳ್ಳಸಾಗಣೆ ಹೆಚ್ಚಾಗುತ್ತದೆ. ಗೋವಂಶಗಳನ್ನು ತುರುಕಿ, ಉಪವಾಸವಿಟ್ಟು, ಅಮಾನವೀಯ ಪದ್ಧತಿಯಿಂದ ವಾಹನಗಳಲ್ಲಿ ತುಂಬಲಾಗುತ್ತದೆ. ಇದು ಕೇವಲ ಕಾನೂನಿನ ಉಲ್ಲಂಘನೆಯಾಗಿರದೆ ಹಿಂದೂ ಸಮಾಜದ ಶ್ರದ್ಧೆಯ ಮೇಲಿನ ಪ್ರಹಾರವಾಗಿದೆ.
೨. ಮಹಾರಾಷ್ಟ್ರ ರಾಜ್ಯವು ದೇಶಿ ಹಸುವಿಗೆ ‘ಮಹಾರಾಷ್ಟ್ರ ರಾಜ್ಯಮಾತೆ’ಯ ಸಮ್ಮಾನ ನೀಡಿದೆ. ಪವಿತ್ರ ಗೋಮಾತೆಯ ಹತ್ಯೆ ಮಾಡಿ ಅದರ ಅಕ್ರಮ ಸಾಗಾಟ ಮಾಡುವವರಿಗೆ ಕಾನೂನಿನ ಕಠಿಣ ಪಾಠ ಕಲಿಸಲಾಗುವುದು. ಗೋರಕ್ಷಣೆಗಾಗಿ ಮಹಾರಾಷ್ಟ್ರ ರಾಜ್ಯ ಸರಕಾರವು ಕಟಿಬದ್ಧವಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ವಿಶೇಷ ತಪಾಸಣಾ ಅಭಿಯಾನ !
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಿರ್ದೇಶನದಂತೆ ಮೇ ೨೫ ರಿಂದ ೨೮ ರ ಅವಧಿಯಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮಾಡುವ ಸೂಚನೆ ನೀಡಲಾಗಿದೆ. ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಉಪಪ್ರಾದೇಶಿಕ ಅಧಿಕಾರಿಗಳು, ಗಡಿ ತಪಾಸಣಾ ನಾಕಾ, ಹಾಗೆಯೇ ಸಾರಿಗೆ ವ್ಯವಸ್ಥೆಗೆ ಸಾರಿಗೆ ಆಯುಕ್ತರ ಕಾರ್ಯಾಲಯವು ಪ್ರಸಾರ ಮಾಡಿದ ಸುತ್ತೋಲೆಗನುಸಾರ, ಮಹಾರಾಷ್ಟ್ರ ರಾಜ್ಯದ ಗಡಿಭಾಗ, ಮುಂಬಯಿಯೊಂದಿಗೆ ಪ್ರಮುಖ ನಗರಗಳು ಮತ್ತು ಸೂಕ್ಷ್ಮ ಮಾರ್ಗಗಳ ಮೇಲೆ ವಿಶೇಷ ನಾಕಾಬಂದಿ, ಹಾಗೆಯೇ ವಾಹನ ತಪಾಸಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಪ್ರಾಣಿಗಳ ಸಾಗಾಟ ಮಾಡುವ ಪ್ರತಿಯೊಂದು ವಾಹನವನ್ನು ತೀವ್ರವಾಗಿ ತಪಾಸಣೆ ಮಾಡಲಾಗುವುದು. ಅವಶ್ಯಕ ಅನುಮತಿ, ಪ್ರಮಾಣಪತ್ರಗಳು ಮತ್ತು ಪ್ರಾಣಿ ಕಲ್ಯಾಣ ನಿಯಮಗಳ ಪಾಲನೆಯಾಗಿದೆಯೇ ?, ಎಂಬುದನ್ನು ಪರಿಶೀಲಿಸಲಾಗುವುದು. ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಂಡು ವಾಹನಗಳನ್ನು ಜಪ್ತಿ ಮಾಡಲಾಗುವುದು.
ಈ ಅಭಿಯಾನದಲ್ಲಿ ಸಾರಿಗೆ ಇಲಾಖೆಯೊಂದಿಗೆ ಸ್ಥಳೀಯ ಪೊಲೀಸರು, ಸಂಚಾರ ಪೊಲೀಸರು, ಪಶುಸಂಗೋಪನಾ ಇಲಾಖೆ ಮತ್ತು ವಿವಿಧ ಗೋಸೇವಾ ಹಾಗೂ ಪ್ರಾಣಿ ಕಲ್ಯಾಣ ಸಂಸ್ಥೆಗಳ ಸಮನ್ವಯ ಸಾಧಿಸಲಾಗುವುದು. ಅಕ್ರಮ ಕಸಾಯಿಖಾನೆಗಳಿಗೆ ಪ್ರಾಣಿಗಳ ಪೂರೈಕೆಯನ್ನು ತಡೆಯಲು ವಿಶೇಷ ದಳಗಳನ್ನೂ ನಿಯೋಜಿಸಲಾಗಿದೆ. ವಿಶೇಷ ಅಭಿಯಾನದಡಿಯಲ್ಲಿ ಕಾರ್ಯಾಚರಣೆಯ ವಿಸ್ತೃತ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!