
ನವ ದೆಹಲಿ – ಜಗತ್ತಿನಾದ್ಯಂತದ 100 ಉಷ್ಣ ನಗರಗಳ ಪಟ್ಟಿಯಲ್ಲಿ ಭಾರತದ ಒಟ್ಟು 97 ನಗರಗಳು ಸೇರ್ಪಡೆಯಾಗಿವೆ. ಇಂತಹ ಅಂಕಿ-ಅಂಶಗಳು ಬಂದಿರುವುದು ಇದು ಸತತ ಎರಡನೇ ತಿಂಗಳಾಗಿದೆ. ಇದಕ್ಕೂ ಮುನ್ನ ಏಪ್ರಿಲ್ ತಿಂಗಳಿನಲ್ಲೂ ಜಗತ್ತಿನಾದ್ಯಂತದ 100 ಉಷ್ಣ ನಗರಗಳ ಪಟ್ಟಿಯಲ್ಲಿ ಭಾರತದ 95 ನಗರಗಳು ಸೇರಿದ್ದವು. ಸದ್ಯ ಭಾರತದ ಪಂಜಾಬ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಸಿಗಾಳಿಯ ಅಲೆಯ ಪರಿಸ್ಥಿತಿ ಇದೆ. ಇದರಿಂದಾಗಿ ತಾಪಮಾನದ ಮಟ್ಟವು 47-48 ಡಿಗ್ರಿಗಳಿಗೆ ತಲುಪಿದೆ.
ಜಗತ್ತಿನ ಅತ್ಯಂತ ಉಷ್ಣ ನಗರಗಳು ಭಾರತದ ಉತ್ತರ ಪ್ರದೇಶ ರಾಜ್ಯದಲ್ಲಿವೆ. ಈ ರಾಜ್ಯದ ಒಟ್ಟು 34 ನಗರಗಳು ಜಗತ್ತಿನ ಅತ್ಯಂತ ಉಷ್ಣ ನಗರಗಳ ಪಟ್ಟಿಯಲ್ಲಿವೆ. ಇದರಲ್ಲಿ ಪ್ರಯಾಗರಾಜ, ವಾರಾಣಸಿ, ಹಾಥರಸ, ಆಗ್ರಾ, ಹಾಗೆಯೇ ಪಿಲಿಭಿತ ಸೇರಿದಂತೆ ಹಲವು ನಗರಗಳು ಸೇರಿವೆ. ಮಹಾರಾಷ್ಟ್ರದ ನಾಗಪುರ, ಚಂದ್ರಾಪುರ, ಅಕೋಲಾ, ಅಮರಾವತಿ, ವರ್ಧಾ ಮತ್ತು ಬ್ರಹ್ಮಪುರಿ ನಗರಗಳೂ ಸಹ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ಈ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ವಿದರ್ಭದ ಕೆಲವು ಜಿಲ್ಲೆಗಳಿಗೆ ಉಷ್ಣತೆಯ ‘ರೆಡ್ ಅಲರ್ಟ್’ (ಹೆಚ್ಚಿನ ಅಪಾಯ), ಇನ್ನು ಕೆಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ (ಮಧ್ಯಮ ಅಪಾಯ) ನೀಡಲಾಗಿದೆ.
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !