ಪೊಲೀಸರಿಂದ ಲಾಠಿಪ್ರಹಾರ

ಕಪೂರಥಳಾ (ಪಂಜಾಬ) – ಇಲ್ಲಿನ ಜೈಲಿನಲ್ಲಿ ೨೩ ಮೇಯ ರಾತ್ರಿ ಕೈದಿಗಳು ಬ್ಯಾರಕ್ ಅನ್ನು (ಜೈಲಿನಲ್ಲಿನ ಕೊಠಡಿಗಳನ್ನು) ಧ್ವಂಸಗೊಳಿಸಿದರು. ಈ ಸಮಯದಲ್ಲಿ ಅವರು ಜೈಲಿನ ಮೂಲಭೂತ ಸೌಕರ್ಯಗಳಿಗೂ ಹಾನಿ ಮಾಡಿದರು. ಹಾಗೆಯೇ ಜೈಲಿನ ಕೆಲವು ಭಾಗಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದರು. ಓರ್ವ ಕೈದಿಗೆ ಸಂಬಂಧಿಸಿದ ವಿವಾದದಿಂದ ಈ ಘಟನೆ ನಡೆದ ನಂತರ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳ (ಅಂಡರ್ ಟ್ರಾಯಲ್ಸ್) ನಡುವೆ ಹಿಂಸಕ ಹೊಡೆದಾಟವಾಯಿತು. ಕಾರಾಗೃಹ ಆಡಳಿತವು ಜಗಳ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದಾಗ, ಕೈದಿಗಳು ಅಧಿಕಾರಿಗಳೊಂದಿಗೆ ಜಟಾಪಟಿ ಮಾಡುವ ಪ್ರಯತ್ನ ಮಾಡಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಜೈಲಿನ ಪೊಲೀಸ್ ಸಿಬ್ಬಂದಿಯ ಮೇಲೂ ಆಕ್ರಮಣ ಮಾಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪರಿಸ್ಥಿತಿ ಇನ್ನಷ್ಟು ಹದಗೆಡಬಾರದು; ಆದ್ದರಿಂದ ಜೈಲಿನ ಒಳಗೆ ಮತ್ತು ಹೊರಗೆ ದೊಡ್ಡ ಪ್ರಮಾಣದಲ್ಲಿ ಭದ್ರತಾಪಡೆಯನ್ನು ನಿಯೋಜಿಸಿದ್ದಾರೆ. ‘ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು ಮತ್ತು ಲಾಠಿಪ್ರಹಾರ ಮಾಡಿದರು’, ಎಂದು ಓರ್ವ ಅಧಿಕಾರಿಯು ಮಾಹಿತಿ ನೀಡಿದರು. ಈ ಹಿಂಸಾಚಾರದಲ್ಲಿನ ಪ್ರಾಣಹಾನಿಯ ಕುರಿತು ಅಧಿಕಾರಿಗಳು ಇದುವರೆಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ; ಆದರೆ ಈ ಘಟನೆಯ ನಂತರ ಹೊರಗೆ ಕನಿಷ್ಠ ೫ – ೬ ಎಂಬುಲನ್ಸ್ ನಿಲ್ಲಿಸಿರುವುದು ಕಂಡುಬಂದಿದೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!