ಲಿಂಗಾಯತ ಸಮಾಜದ ಬೆಂಗಳೂರು ಧರ್ಮಪೀಠದ ಮಠಾಧಿಪತಿ ಜನಬಸವನಂದ ಸ್ವಾಮಿಯವರ ಹೇಳಿಕೆ!
ಲಿಂಗಾಯತ ಬಾಂಧವರು ಜನಗಣತಿಯಲ್ಲಿ ಕೇವಲ 'ಲಿಂಗಾಯತ' ಎಂದು ದಾಖಲಿಸಲು ಕರೆ ನೀಡಿದರು !
ನಾಶಿಕದ ಶ್ರೀ ಕಾಳಾರಾಮ ದೇವಸ್ಥಾನದ ಪೂಜಾರಿ ಮಹಂತ ಸುಧೀರದಾಸರ ತೀವ್ರ ಆಕ್ಷೇಪ !

ಸೋಲಾಪುರ – ಹಿಂದೂ ಧರ್ಮವಲ್ಲ ಮತ್ತು ಭಾರತದಲ್ಲಿ ಅದಕ್ಕೆ ಅಧಿಕೃತ ಮಾನ್ಯತೆಯಿಲ್ಲ, ಆದ್ದರಿಂದ ನಡೆಯುತ್ತಿರುವ ಜನಗಣತಿಯಲ್ಲಿ ‘ಧರ್ಮ’ದ ಕಾಲಂನಲ್ಲಿ ಲಿಂಗಾಯತ ಬಾಂಧವರು ಕೇವಲ ‘ಲಿಂಗಾಯತ’ ಎಂದೇ ನಮೂದಿಸಬೇಕು, ಎಂದು ರಾಜ್ಯದ ಬೆಂಗಳೂರು ಧರ್ಮಪೀಠದ ಮಠಾಧಿಪತಿ ಜನಬಸವನಂದ ಸ್ವಾಮಿಯವರು ಹೇಳಿದರು. ಈ ಹೇಳಿಕೆಯ ಮೇಲೆ ನಾಶಿಕದ ಶ್ರೀ ಕಾಳಾರಾಮ ದೇವಸ್ಥಾನದ ಪೂಜಾರಿ ಮಹಂತ ಸುಧೀರದಾಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರು, ”ಹಿಂದೂ ಕೇವಲ ಧರ್ಮವಾಗಿರದೆ ಅದು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಗುರುತಾಗಿದೆ. ಸನಾತನ ವೈದಿಕ ಸಂಸ್ಕೃತಿಯೊಂದಿಗೆ ಬೌದ್ಧ, ಜೈನ ಮತ್ತು ಸಿಖ್ ಇವರೆಲ್ಲರೂ ಇದೇ ವ್ಯಾಪಕ ವ್ಯಾಖ್ಯೆಯಲ್ಲಿ ಬರುತ್ತಾರೆ. ಯಾರ ಪಿತೃಭೂಮಿ ಮತ್ತು ಪುಣ್ಯಭೂಮಿ ಭಾರತವಾಗಿದೆಯೋ, ಅವರೆಲ್ಲರೂ ಹಿಂದೂಗಳಾಗಿದ್ದಾರೆ” ಎಂದು ಹೇಳಿದರು.
ಜನಬಸವನಂದ ಸ್ವಾಮಿಯವರು ಮಂಡಿಸಿದ ಸೂತ್ರಗಳು
೧. ಭಾರತದಲ್ಲಿ ಸದ್ಯ ಅಧಿಕೃತವಾಗಿ ಜೈನ, ಬೌದ್ಧ ಮತ್ತು ಸಿಖ್ ಎಂಬ ೩ ಭಾರತೀಯ ಸಮಾಜಗಳಿಗೆ ಸ್ವತಂತ್ರ ಧಾರ್ಮಿಕ ಮಾನ್ಯತೆಯಿದೆ.
೨. ಬ್ರಿಟಿಷ್ ಆಳ್ವಿಕೆಯಲ್ಲಿ ‘ಲಿಂಗಾಯತ ಸಮಾಜ’ಕ್ಕೆ ಸ್ವತಂತ್ರ ಧಾರ್ಮಿಕ ಮಾನ್ಯತೆಯಿತ್ತು. ಸ್ವಾತಂತ್ರ್ಯ ಸಿಕ್ಕಿದ ನಂತರ ಈ ಮಾನ್ಯತೆ ರದ್ದಾಯಿತು.
೩. ‘ಲಿಂಗಾಯತ ಧರ್ಮ’ಕ್ಕೆ ಸಾರ್ವಜನಿಕ ಮತ್ತು ಕಾನೂನಾತ್ಮಕ ಮಾನ್ಯತೆ ದೊರಕಿಸಿಕೊಡಲು ಮುಂಬರುವ ಜನಗಣತಿಯನ್ನು ಉಪಯೋಗಿಸುವುದು ಅವಶ್ಯಕವಾಗಿದೆ.
೪. ಇದಕ್ಕಾಗಿ ೨ ಜೂನ್ ೨೦೨೬ ರಿಂದ ಸೋಲಾಪುರದ ಮಂಗಳವೇಢಾದಿಂದ ನೇರವಾಗಿ ಮುಂಬಯಿವರೆಗೆ ‘ಭವ್ಯ ಲಿಂಗಾಯತ ಧರ್ಮ ಜಾಗೃತಿ ಯಾತ್ರೆ’ಯನ್ನು ತೆಗೆಯುವರು.
ಭಾರತದ ಧಾರ್ಮಿಕ ಐಕ್ಯತೆ ಅಪಾಯಕ್ಕೆ ಸಿಲುಕುವುದು ! – ಮಹಂತ ಸುಧೀರದಾಸರು
ಲಿಂಗಾಯತ ಸಮಾಜವು ಹಿಂದೂ ಧರ್ಮ ಮತ್ತು ಸನಾತನಿ ವಿಚಾರದ ಮೂಲಕವೇ ಪೂಜೆ ಮಾಡುತ್ತದೆ. ಈ ರೀತಿ ಪ್ರತಿಯೊಂದು ಸಂಪ್ರದಾಯವು ಸ್ವತಂತ್ರ ಧರ್ಮದ ಬೇಡಿಕೆ ಇಟ್ಟರೆ ಭಾರತದ ಧಾರ್ಮಿಕ ಐಕ್ಯತೆ ಅಪಾಯಕ್ಕೆ ಸಿಲುಕುವುದು. ಸಮಾಜದಲ್ಲಿ ಒಡಕು ನಿರ್ಮಾಣವಾಗುವುದು. ಜನಬಸವನಂದ ಸ್ವಾಮಿಯವರು ‘ಹಿಂದೂ ಧರ್ಮದ ವ್ಯಾಖ್ಯೆಯನ್ನು ಸರಿಯಾಗಿ ತಿಳಿದುಕೊಂಡು ತಮ್ಮ ಹೇಳಿಕೆಯನ್ನು ಹಿಂದೆ ಪಡೆಯಬೇಕು’, ಎಂದು ಮಹಂತ ಸುಧೀರದಾಸರು ಕರೆ ನೀಡಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!