‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ಕೃಪೆ ಮತ್ತು ಅವರ ಮಾರ್ಗದರ್ಶನದಿಂದ ವರ್ಷ ೧೯೯೯ ರಲ್ಲಿ ’ಸನಾತನ ಸಂಸ್ಥೆ’ ಸ್ಥಾಪನೆಯಾಯಿತು. ಅದಕ್ಕಿಂತ ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ’ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಅಡಿಯಲ್ಲಿ ಬಹಿರಂಗ ಸಭೆಗಳನ್ನು ಆಯೋಜಿಸುತ್ತಿದ್ದರು ! ವರ್ಷ ೧೯೯೬ ರಿಂದ ೧೯೯೯ ರ ಕಾಲಾವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಸುಮಾರು ೨೫೦ ಕ್ಕೂ ಹೆಚ್ಚು ಬಹಿರಂಗ ಸಭೆಗಳನ್ನು ಆಯೋಜಿಸಿದರು. ಇದರ ಲಾಭವನ್ನು ಸಾವಿರಾರು ಜನರು ಪಡೆದುಕೊಂಡರು. ಇವರಲ್ಲಿ ಎಷ್ಟೋ ಜನರು ಅಂದಿನಿಂದಲೇ ಸಾಧನೆಯನ್ನು ಆರಂಭಿಸಿದರು. ಈ ಲೇಖನದ ಕೆಲವು ಭಾಗಗಳನ್ನು ಹಿಂದಿನ ಲೇಖನದಲ್ಲಿ ನೋಡಿದ್ದೇವೆ. ಇಂದು ಉಳಿದ ಭಾಗವನ್ನು ಇಲ್ಲಿ ನೀಡಲಾಗಿದೆ.

೫. ಸಭೆಯ ನಂತರ
೫ ಅ. ಉಪಸ್ಥಿತ ಜಿಜ್ಞಾಸುಗಳ ಅಧ್ಯಾತ್ಮ ಅಥವಾ ಸಾಧನೆಗೆ ಸಂಬಂಧಿಸಿದ ಸಂದೇಹಗಳ ನಿವಾರಣೆ ! : ಸಭೆಯ ನಂತರ ಅದೇ ಸ್ಥಳದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸತ್ಸಂಗವನ್ನು ತೆಗೆದುಕೊಂಡು ಜಿಜ್ಞಾಸುಗಳ ಅಧ್ಯಾತ್ಮ ಅಥವಾ ಸಾಧನೆಗೆ ಸಂಬಂಧಿಸಿದ ಸಂದೇಹಗಳ ನಿವಾರಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಅವರು ಸಾಧನೆ ಮಾಡಲು ಇಚ್ಛಿಸುವ ಜನರಿಗೆ ಸತ್ಸಂಗಕ್ಕೆ ಬರಲು ಪ್ರೋತ್ಸಾಹಿಸುತ್ತಿದ್ದರು. ಆ ಊರಲ್ಲಿ ನಡೆಯುವ ಸತ್ಸಂಗದ ವಿಳಾಸಗಳನ್ನು ಜಿಜ್ಞಾಸುಗಳಿಗೆ ನೀಡಿ ’ವಾರದ ಯಾವ ದಿನ, ಯಾವ ಸಮಯದಲ್ಲಿ ಮತ್ತು ಯಾವ ಸ್ಥಳದಲ್ಲಿ ಸತ್ಸಂಗ ನಡೆಯುತ್ತದೆ’ ಎಂಬ ಮಾಹಿತಿಯನ್ನು ನೀಡುತ್ತಿದ್ದರು. ಇದರ ಪರಿಣಾಮದಿಂದ ಅಲ್ಲಿ ಅನೇಕ ಜಿಜ್ಞಾಸುಗಳು ಸತ್ಸಂಗದೊಂದಿಗೆ ಜೋಡಿಸಲ್ಪಟ್ಟು ಸಾಧನೆಯನ್ನು ಆರಂಭಿಸುತ್ತಿದ್ದರು.
೫ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಭೆಯ ಆಯೋಜನೆಯಲ್ಲಿ ಸಾಧಕರಿಂದಾದ ತಪ್ಪುಗಳನ್ನು ಹೇಳುವುದು : ನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಭೆಯ ಆಯೋಜನೆಯಲ್ಲಿ ಸಾಧಕರಿಂದಾದ ತಪ್ಪುಗಳನ್ನು ಎಲ್ಲರೆದುರು ಹೇಳುತ್ತಿದ್ದರು. ಇಂತಹ ತಪ್ಪುಗಳು ಇತರರಿಂದ ಆಗಿ ಅವರ ಸಾಧನೆಯಲ್ಲಿ ಹಾನಿಯಾಗಬಾರದು ಎಂಬ ತಳಮಳ ಅವರಲ್ಲಿ ಇತ್ತ್ತು. ’ಪ್ರತಿಯೊಂದು ಸೇವೆಯು ಈಶ್ವರನ ಸೇವೆಯಾಗಿದೆ ಮತ್ತು ಸೇವೆಯಲ್ಲಿನ ತಪ್ಪುಗಳಿಂದ ನಾವು ಈಶ್ವರನಿಂದ ದೂರ ಹೋಗುತ್ತೇವೆ’, ಎಂಬ ವಿಷಯವನ್ನು ಅವರು ಸಾಧಕರ ಮನಸ್ಸಿನ ಮೇಲೆ ಬಿಂಬಿಸುತ್ತಿದ್ದರು. ಇದರಿಂದ ’ಸಾಧಕರ ಸಾಧನೆಯಾಗಬೇಕು’ ಎಂಬ ಅವರ ಹಂಬಲ ಎಷ್ಟಿತ್ತು ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಮಹಾನ್ ಗುರುಗಳು ನಮಗೆ ಲಭಿಸಿರುವುದು ನಮ್ಮ ಪರಮ ಸೌಭಾಗ್ಯವಾಗಿದೆ.
೫ ಇ. ಸಾಮಗ್ರಿಗಳನ್ನು ಒಟ್ಟುಗೂಡಿಸಿ ಧರ್ಮರಥದಲ್ಲಿ ಇಡುವುದು ಮತ್ತು ಧರ್ಮರಥ ಹೊರಡುವುದು : ಸಭೆಗಾಗಿ ನಿರ್ಮಿಸಲಾದ ವೇದಿಕೆಯ ಜೋಡಣೆಯ ಸಾಮಗ್ರಿ ಮತ್ತು ಇತರ ಸಾಹಿತ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಕೆಲವು ಸಾಧಕರು ಊರಲ್ಲಿ ಸಭೆಯ ಪ್ರಚಾರಕ್ಕಾಗಿ ಹಾಕಿದ್ದ ಬಟ್ಟೆಯ ಬ್ಯಾನರ್‌ಗಳನ್ನು ಅದೇ ರಾತ್ರಿ ತೆಗೆದುಕೊಂಡು ಬರುತ್ತಿದ್ದರು. ಈ ಎಲ್ಲಾ ಸಾಮಾನುಗಳನ್ನು ಧರ್ಮರಥದಲ್ಲಿ ಇರಿಸಿದ ನಂತರ ಮುಂದಿನ ಊರಿನ ಸಭೆಗಾಗಿ ಧರ್ಮರಥವು ಹೊರಡುತ್ತಿತ್ತು.

೬. ಬಹಿರಂಗ ಸಭೆಗಳ ಆಯೋಜನೆಯಿಂದ ಕಂಡುಬಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಲೌಕಿಕ ವೈಶಿಷ್ಟ್ಯಗಳು !
೬ ಅ. ಚಿಕ್ಕ ಚಿಕ್ಕ ಊರುಗಳಿಂದ ದೊಡ್ಡ ನಗರಗಳ ವರೆಗೆ ಎಲ್ಲಾ ಕಡೆ ಚಿಕ್ಕ-ದೊಡ್ಡ ಸಭೆಗಳ ಆಯೋಜನೆ ಮಾಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೫-೨೦ ವರ್ಷಗಳ ಹಿಂದೆ ಒಂದೆರಡು ವರ್ಷಗಳ ಅವಧಿಯಲ್ಲಿ ಚಿಕ್ಕ ಚಿಕ್ಕ ಊರುಗಳಿಂದ ಹಿಡಿದು ದೊಡ್ಡ ದೊಡ್ಡ ನಗರಗಳವರೆಗೆ ಚಿಕ್ಕ-ದೊಡ್ಡ ಸಭೆಗಳನ್ನು ಆಯೋಜಿಸಿದರು. ಆಗ ಅವರು ಒಬ್ಬ ಸಾಧಕನಿಗೆ, ”ಸಭೆಯ ಈ ವಿಷಯವು ಬಹುಶಃ ಇಂದು ಜನರಿಗೆ ಅರ್ಥವಾಗಲಿಕ್ಕಿಲ್ಲ; ಆದರೆ ೨೦ ವರ್ಷಗಳ ನಂತರ ಇದರ ಅವಶ್ಯಕತೆ ಎಲ್ಲರಿಗೂ ಮನವರಿಕೆಯಾಗಲಿದೆ !” ಎಂದು ಹೇಳಿದ್ದರು. ಅವರ ಈ ಮಾತು ಇಂದು ಶೇ. ೧೦೦ ರಷ್ಟು ನಿಜವೆಂದು ಸಾಬೀತಾಗಿದೆ. ಇಂದು ಸಮಾಜದಲ್ಲಿ ಅಧ್ಯಾತ್ಮದ ಬಗ್ಗೆ ಜಾಗೃತಿ ಮೂಡಿದೆ.
೬ ಆ. ಸಭೆಯ ಆರಂಭ ಮತ್ತು ಕೊನೆಯನ್ನು ಅವರು ಸರಿಯಾದ ಸಮಯದಲ್ಲಿಯೇ ಮಾಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವವರ ಎಲ್ಲಾ ಸಭೆಗಳು ನಿಗದಿತ ಸಮಯಕ್ಕೇ ಆರಂಭವಾಗುತ್ತಿದ್ದವು ಮತ್ತು ನಿಗದಿತ ಸಮಯಕ್ಕೇ ಮುಕ್ತಾಯವಾಗುತ್ತಿದ್ದವು. ’ಸಭೆಯಲ್ಲಿ ಎಷ್ಟು ಜನರು ಉಪಸ್ಥಿತರಿದ್ದಾರೆ ? ಆರಂಭದಲ್ಲಿ ಕಡಿಮೆ ಜನರಿದ್ದರೆ ಸಭೆಯನ್ನು ತಡವಾಗಿ ಆರಂಭಿಸೋಣವೇ ?’, ಇಂತಹ ಯಾವುದೇ ವಿಚಾರವನ್ನು ಮಾಡದೆ ಗುರುದೇವರು ಸಭೆಯನ್ನು ನಿಗದಿತ ಸಮಯಕ್ಕೇ ಆರಂಭಿಸುತ್ತಿದ್ದರು ಮತ್ತು ನಿಗದಿತ ಸಮಯಕ್ಕೇ ಮುಗಿಸುತ್ತಿದ್ದರು. ಈ ಬಗ್ಗೆ ಗುರುದೇವರು ಹೇಳುತ್ತಾರೆ, ”ಈಶ್ವರನು ತನ್ನ ಪ್ರತಿಯೊಂದು ಕಾರ್ಯವನ್ನು ಸಮಯದಲ್ಲಿಯೇ ಮಾಡುತ್ತಾನೆ. ನಮಗೆ ಇದರ ಅನುಭೂತಿ ಬೇಕಿದ್ದರೆ, ನಾವೂ ಕೂಡ ಸಮಯಪಾಲನೆ ಮಾಡಬೇಕು.”
೬ ಇ. ಸಮಷ್ಟಿ ಕಲ್ಯಾಣಕ್ಕಾಗಿ ಸಭೆಗಳ ಧ್ವನಿಚಿತ್ರೀಕರಣ ಮಾಡಲು ಹೇಳುವುದು : ಎಲ್ಲಾ ಸ್ಥಳಗಳಲ್ಲಿ ಸಭೆ ನಡೆಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ’ಜಿಜ್ಞಾಸುಗಳು ಸಾಧನೆಯ ಮಾರ್ಗದರ್ಶನದಿಂದ ವಂಚಿತರಾಗಬಾರದು. ಅವರು ಧ್ವನಿಚಿತ್ರ-ತಟ್ಟೆಯನ್ನು (ವಿಡಿಯೋ ಸಿಡಿ) ನೋಡಿ ಸಭೆಯ ಆನಂದ ಪಡೆಯಲಿ ಮತ್ತು ಸಾಧನೆಯನ್ನು ಕಲಿಯಲಿ’, ಎಂಬ ಸಮಷ್ಟಿ ಕಲ್ಯಾಣದ ವಿಚಾರದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಎಲ್ಲಾ ಸಭೆಗಳ ಧ್ವನಿಚಿತ್ರೀಕರಣ ಮಾಡಲು ಹೇಳುತ್ತಿದ್ದರು.
೬ ಇ ೧. ಧ್ವನಿಚಿತ್ರೀಕರಣ ಉತ್ತಮವಾಗಿ ಮೂಡಿಬರಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡುತ್ತಿದ್ದ ಪ್ರಯತ್ನ : ಎಲ್ಲಾ ಸಭೆಗಳಲ್ಲಿನ ಸಮಾನ ಅಂಶಗಳನ್ನು ಒಟ್ಟುಗೂಡಿಸಲು ಸಾಧ್ಯವಾಗಲಿ ಎಂಬ ದೃಷ್ಟಿಯಿಂದ ಗುರುದೇವರು ಎಲ್ಲಾ ಸಭೆಗಳಲ್ಲಿ ಒಂದೇ ಜುಬ್ಬಾ ಧರಿಸುತ್ತಿದ್ದರು. ಅಷ್ಟೇ ಅಲ್ಲದೆ, ಚಿತ್ರೀಕರಣದ ಸಮಯದಲ್ಲಿ ತಮ್ಮಿಂದ ಯಾವುದೇ ತಪ್ಪು ಆಗಬಾರದು ಎಂಬ ದೃಷ್ಟಿಯಿಂದ ಅವರು ಜಾಗರೂಕರಾಗಿ ಪ್ರಯತ್ನಿಸುತ್ತಿದ್ದರು. ಉದಾಹರಣೆಗೆ, ಪ್ರವಚನ ನೀಡುವಾಗ ಕೈಗಳ ಚಲನೆಯಾದರೂ ಅಥವಾ ಕೂದಲು ಚದರಿದರೂ, ಅದನ್ನು ಚಿತ್ರೀಕರಣ ಮಾಡುವ ಸಾಧಕರಿಗೆ ಎಚ್ಚರಿಸಲು ಮೊದಲೇ ಹೇಳಿಟ್ಟಿರುತ್ತಿದ್ದರು. ಕಾಲಾಂತರದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಪ್ರವಚನದ ಧ್ವನಿ ಸುರುಳಿಗಳನ್ನು (’ಆಡಿಯೋ ಕ್ಯಾಸೆಟ್’) ತಯಾರಿಸಿ ಸಮಾಜದಲ್ಲಿ ವಿತರಿಸಲಾಯಿತು. ಇದರಿಂದ ಸಾಧನೆಯ ವಿಷಯವು ಕಡಿಮೆ ಸಮಯದಲ್ಲಿ ಲಕ್ಷಾಂತರ ಜನರಿಗೆ ತಲುಪಿತು.
೬ ಈ. ಸಭೆಯ ಮೊದಲು ಮತ್ತು ನಂತರ ಮೈದಾನವನ್ನು ಸ್ವಚ್ಛಗೊಳಿಸಲು ಸಾಧಕರಿಗೆ ಹೇಳುವುದು : ಇಂದು ನಾವು ನೋಡುತ್ತೇವೆ, ವಿವಿಧ ಮೈದಾನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮ ಮುಗಿದ ಮರುದಿನ ’ಸಂಪೂರ್ಣ ಮೈದಾನವು ಅಗೆದಿರುವುದು ಅಥವಾ ಅಸ್ವಚ್ಛವಾಗಿರುವುದು’ ಕಂಡುಬರುತ್ತದೆ. ಅದನ್ನು ಪುನಃ ಸರಿಯಾದ ಸ್ಥಿತಿಗೆ ತರಲು ನಗರಸಭೆ ಅಥವಾ ವೈಯಕ್ತಿಕ ಸ್ತರದಲ್ಲಿ ಸ್ವಚ್ಛತಾ ಕಾರ್ಮಿಕರನ್ನು ಕರೆಯಬೇಕಾಗುತ್ತದೆ. ಈ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಶೇಷ ಬೋಧನೆ ನಮ್ಮ ಗಮನಕ್ಕೆ ಬರುತ್ತದೆ. ಅವರು ಸಾಧಕರಿಗೆ ಸಭೆಯ ಮೊದಲೇ ಇಡೀ ಮೈದಾನವನ್ನು ಸ್ವಚ್ಛಗೊಳಿಸಲು ಹೇಳುತ್ತಿದ್ದರು ಮತ್ತು ಸಭೆಯ ನಂತರ ಅದನ್ನು ಸ್ವಚ್ಛಗೊಳಿಸಿಯೇ ಮುಂದಿನ ಊರಿಗೆ ಹೋಗಲು ಹೇಳುತ್ತಿದ್ದರು. ’ಸಭೆಯ ಮೊದಲು ಮೈದಾನವು ಎಷ್ಟೇ ಕೆಟ್ಟ ಸ್ಥಿತಿಯಲ್ಲಿದ್ದರೂ, ಅದನ್ನು ಸ್ವಚ್ಛಗೊಳಿಸಿ ಕೊಡುವುದು ನಮ್ಮ ಕರ್ತವ್ಯವಾಗಿದೆ’, ಎಂಬ ವ್ಯಾಪಕ ಬೋಧನೆಯನ್ನು ಅವರು ಸಾಧಕರಿಗೆ ಈ ಸೇವೆಯ ಮಾಧ್ಯಮದಿಂದ ನೀಡಿದರು.
ಗುರುಗಳ ಕೃಪೆಯಿಂದಲೇ ನಮಗೆ, ಸೇವೆಯನ್ನು ಮಾಡುವ ಅವಕಾಶ ಸಿಕ್ಕಿತು. ಅದಕ್ಕಾಗಿ ಕೃತಜ್ಞನಾಗಿದ್ದೇನೆ !’
-ಶ್ರೀ. ಯೋಗೇಶ ಜಲತಾರೆ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !