ನ್ಯಾಯಾಲಯದ ಮೆಟ್ಟಿಲೇರುವುದಾಗಿ ಶಾಸಕ ಹುಮಾಯೂನ್ ಕಬೀರ್ ಎಚ್ಚರಿಕೆ

ಕೊಲಕಾತಾ (ಬಂಗಾಳ) – ಬಂಗಾಳದ ಭಾಜಪ ಸರಕಾರವು ರಾಜ್ಯದ ಎಲ್ಲಾ ಮದರಸಾಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯಗೊಳಿಸಿರುವ ನಿರ್ಧಾರಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ‘ಆಮ್ ಆದ್ಮಿ ಉನ್ನಯನ್ ಪಾರ್ಟಿ’ಯ ಅಧ್ಯಕ್ಷರೂ ಆಗಿರುವ ಶಾಸಕ ಹುಮಾಯೂನ್ ಕಬೀರ್ ಈ ಬಗ್ಗೆ ಮಾತನಾಡಿ, ಮದರಸಾಗಳಲ್ಲಿರುವವರು ಈ ನಿರ್ಧಾರವನ್ನು ಎಂದಿಗೂ ಒಪ್ಪುವುದಿಲ್ಲ. ಮದರಸಾಗಳನ್ನು ನಡೆಸಲು ಸರಕಾರ ಯಾವುದೇ ಆರ್ಥಿಕ ಸಹಾಯ ನೀಡುತ್ತಿಲ್ಲ. ಮುಸ್ಲಿಮರು ತಮ್ಮದೇ ದೇಣಿಗೆಯ ಮೂಲಕ ಮದರಸಾಗಳನ್ನು ನಡೆಸುತ್ತಿದ್ದಾರೆ. ಬಡ ಮಕ್ಕಳಿಗೆ ಕುರಾನ್ ಶಿಕ್ಷಣವನ್ನು ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರದ ನೀತಿಯನ್ನು ಹೀಗೆ ಹೇರಲು ಸಾಧ್ಯವಿಲ್ಲ. ಹಿಂದೂ ಇರಲಿ ಅಥವಾ ಮುಸ್ಲಿಂ ಇರಲಿ, ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪಾಲಿಸುವ ಹಕ್ಕಿದೆ. ಅಗತ್ಯ ಬಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.
1. ಮೌಲಾನಾಗಳ ಪ್ರಕಾರ, ಇದು ಅವರ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ನಾವು ಈ ಆದೇಶದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
2. ಕೊಲಕಾತಾ ಖಿಲಾಫತ್ ಸಮಿತಿಯ ಮುಖ್ಯಸ್ಥ ಮಹಮ್ಮದ್ ಅಶ್ರಫ್ ಅಲಿ ಕಾಸಮಿ ಅವರೂ ಕೂಡ ಸರಕಾರದ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ನಾವು ಈ ದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ದೇಶದ ಮೇಲೆ ನಮಗೆ ಪ್ರೀತಿಯಿದೆ; (ಆದರೆ ಈ ಪ್ರೀತಿ ಎಂದಿಗೂ, ಕಂಡುಬರುವುದಿಲ್ಲವೇಕೆ? – ಸಂಪಾದಕರು) ಆದರೆ ನಾವು ದೇಶವನ್ನು ‘ಪೂಜಿಸಲು’ ಸಾಧ್ಯವಿಲ್ಲ. ಇಸ್ಲಾಂ ಧರ್ಮದ ಪ್ರಕಾರ ಮುಸ್ಲಿಮರು ಕೇವಲ ಅಲ್ಲಾಹನನ್ನು ಮಾತ್ರ ಪೂಜಿಸುತ್ತಾರೆ. ‘ವಂದೇ ಮಾತರಂ’ ನಲ್ಲಿರುವ ಕೆಲವು ಸಾಲುಗಳು ನಮ್ಮ ಧರ್ಮದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿವೆ. ಸರಕಾರವು ಈ ನಿರ್ಧಾರವನ್ನು ಹಿಂಪಡೆಯಬೇಕು” ಎಂದು ಅಲಿ ಕಾಸಮಿ ಆಗ್ರಹಿಸಿದ್ದಾರೆ.
ಸರಕಾರವು ಧರ್ಮದ ಕಡೆಗಲ್ಲ, ಅಭಿವೃದ್ಧಿಯ ಕಡೆಗೆ ಗಮನ ಹರಿಸಲಿ!
ಮುಸ್ಲಿಂ ಸಂಘಟನೆಗಳ ಪ್ರಕಾರ, ಉದ್ಯೋಗ ನೀಡುವುದು ಮತ್ತು ಅಭಿವೃದ್ಧಿ ಮಾಡುವುದು ಸರಕಾರದ ಕೆಲಸವಾಗಿದೆ. ಸರಕಾರವು ಆರೋಗ್ಯ, ರಸ್ತೆ ಮತ್ತು ಕಾನೂನು-ಸುವ್ಯವಸ್ಥೆಯ ಕಡೆಗೆ ಗಮನ ಹರಿಸಬೇಕು. ಯಾರದೇ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಕಾರದ ಕೆಲಸವಲ್ಲ. (ಧರ್ಮದ ಆಧಾರದ ಮೇಲೆ ಸೌಲಭ್ಯಗಳನ್ನು ಕೇಳುವಾಗ ಈ ಅಂಶಗಳು ಹೇಗೆ ನೆನಪಿಗೆ ಬರುವುದಿಲ್ಲ? – ಸಂಪಾದಕರು)
ಶಾಲೆಗಳಲ್ಲಿ ಈ ನಿಯಮವಿರುವಾಗ, ಮದರಸಾಗಳಲ್ಲಿ ಏಕೆ ಇರಬಾರದು? – ಮದರಸಾ ಶಿಕ್ಷಣ ಸಚಿವರು
ರಾಜ್ಯದ ಮದರಸಾ ಶಿಕ್ಷಣ ಸಚಿವ ಖುದೀರಾಂ ತುಡು ಈ ಕುರಿತು ಮಾತನಾಡಿ, ಶಾಲೆಗಳಲ್ಲಿ ಈ ನಿಯಮವಿರುವಾಗ, ಮದರಸಾಗಳಲ್ಲಿ ಏಕೆ ಇರಬಾರದು? ಸರಕಾರವು ಹಳೆಯ ಎಲ್ಲಾ ನಿಯಮಗಳನ್ನು ರದ್ದುಗೊಳಿಸಿ ಈ ಆದೇಶವನ್ನು ಜಾರಿಗೆ ತಂದಿದೆ ಎಂದಿದ್ದಾರೆ.
‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ (ಇಸ್ಲಾಂ ಅಭ್ಯಾಸಕಾರ) ಸಾಜಿದ್ ರಶಿದಿ ಅವರ ಬೇಡಿಕೆಹುಮಾಯೂನ್ ಕಬೀರ್ ಒಬ್ಬ ಕೈಗೊಂಬೆ, ಅವನನ್ನು ಜೈಲಿಗೆ ಹಾಕಿ! ಶಾಸಕ ಹುಮಾಯೂನ್ ಕಬೀರ್ ಅವರ ಬಕ್ರೀದ್ ಹಬ್ಬದ ದಿನದಂದು ಹಸುವಿನ ಬಲಿ ಮಾಡಿ ತೀರುತ್ತೇವೆ ಎಂಬ ಹೇಳಿಕೆಗೆ ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ ಸಾಜಿದ್ ರಶಿದಿ ವಿರೋಧ ವ್ಯಕ್ತಪಡಿಸಿದ್ದಾರೆ. ರಶಿದಿ ಅವರು ಮಾತನಾಡಿ, ಕಬೀರ್ ಗೆ ಯಾವುದೇ ಅಸ್ತಿತ್ವವಿಲ್ಲ. ಆತ ಸರಕಾರದ ಕೈಗೊಂಬೆಯಾಗಿದ್ದಾನೆ. ಇಂತಹ ಮನುಷ್ಯ ಜೈಲಿನಲ್ಲಿರಬೇಕು. ಆತನನ್ನು ಮೊದಲು ತೃಣಮೂಲ ಕಾಂಗ್ರೆಸ್ ತನ್ನ ಮಡಿಲಿಗೆ ಹಾಕಿಕೊಂಡಿತ್ತು, ಇಂದು ಭಾಜಪ ಕೂಡ ಅದೇ ಕೆಲಸ ಮಾಡಿದೆ ಎಂದು ಕಿಡಿಕಾರಿದ್ದಾರೆ. |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !