ಮೇ ೨೩ ರಿಂದ ೬ ದಿನಗಳ ಕಾಲ ಭಾರತೀಯ ಸ್ಟೇಟ್ ಬ್ಯಾಂಕ್ ಬಂದ್ !

ನವದೆಹಲಿ – ಸಾರ್ವಜನಿಕ ವಲಯದಲ್ಲಿ ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ‘ಭಾರತೀಯ ಸ್ಟೇಟ್ ಬ್ಯಾಂಕ್’ (ಎಸ್‌.ಬಿ.ಐ.) ಮೇ ೨೩, ೨೦೨೬ ರಿಂದ ೬ ದಿನಗಳ ಕಾಲ ಮುಚ್ಚಿರುತ್ತದೆ. ಆದಾಗ್ಯೂ ಆನ್‌ಲೈನ್ ಸೇವೆಗಳು ಮುಂದುವರಿಯಲಿವೆ. ಈ ಅವಧಿಯಲ್ಲಿ ಬ್ಯಾಂಕಿನ ಗ್ರಾಹಕರು ‘ನೆಟ್ ಬ್ಯಾಂಕಿಂಗ್’, ‘ಎ.ಟಿ.ಎಂ’, ‘ಮೊಬೈಲ್ ಬ್ಯಾಂಕಿಂಗ್’ ಮುಂತಾದ ಸೇವೆಗಳನ್ನು ಬಳಸಿಕೊಳ್ಳಬಹುದು. ಪ್ರಸ್ತಾವಿತ ಮುಷ್ಕರ, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಈದ್-ಉಲ್-ಅಝಹಾ (ಬಕ್ರೀದ್) ಹಬ್ಬಕ್ಕಾಗಿ ನೀಡಲಾಗಿರುವ ರಜೆ ಮತ್ತು ವಾರಾಂತ್ಯದ ರಜೆ, ಇವೆಲ್ಲವೂ ಸೇರಿ ಒಟ್ಟು ೬ ದಿನಗಳ ಕಾಲ ಬ್ಯಾಂಕ್ ಮುಚ್ಚಿರುತ್ತದೆ.