
ನವದೆಹಲಿ – ಭಾರತವು ಡ್ರೋನ್‌ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು. ಈ ಕ್ಷಿಪಣಿಯ ಹೆಸರು ‘ಯು.ಎಲ್.ಪಿ.ಜಿ.ಎಮ್.-ವಿ ೩’ (ULPGM-V 3) ಎಂದಿದೆ. ಇದು ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ಭೂಮಿಯ ಮೇಲೆ ಹೀಗೆ ಎರಡೂ ರೀತಿಯ ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡಬಲ್ಲದು. ಇದು ಗಾಳಿಯಲ್ಲಿ ಶತ್ರುಗಳ ಹೆಲಿಕಾಪ್ಟರ್, ಡ್ರೋನ್ ಮತ್ತು ಇತರ ಗುರಿಗಳನ್ನು ಹೊಡೆದುರುಳಿಸಬಲ್ಲದು. ಹಾಗೆಯೇ ಭೂಮಿಯ ಮೇಲೆ ಯುದ್ಧಟ್ಯಾಂಕ್‌ಗಳು, ಮಿಲಿಟರಿ ವಾಹನಗಳು ಮತ್ತು ಬಂಕರ್‌ಗಳನ್ನು ಗುರಿಯಾಗಿಸಬಲ್ಲದು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಈ ಕ್ಷಿಪಣಿ ಉತ್ಪಾದನೆಯಲ್ಲಿನ ಯಶಸ್ಸು ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರತೆಯ ದಿಕ್ಕಿನಲ್ಲಿ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ, ಎಂದು ಹೇಳಿದ್ದಾರೆ.
೫೦ ಸಾವಿರ ಸೈನಿಕರ ಸ್ವತಂತ್ರ ‘ಡ್ರೋನ್ ದಳ’ ಇರಲಿದೆ!
ಭಾರತವು ಒಂದು ‘ಡ್ರೋನ್ ಫೋರ್ಸ್’ (ಡ್ರೋನ್ ದಳ) ಅನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ದಳ ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲಿ ‘ಫಸ್ಟ್ ರೆಸ್ಪಾಂಡರ್’ (ಮೊದಲ ಪ್ರತಿಕ್ರಿಯೆ ನೀಡುವ ದಳ) ಆಗಿ ಕಾರ್ಯ ನಿರ್ವಹಿಸಲಿದೆ. ಈ ದಳಕ್ಕಾಗಿ ಪ್ರಸ್ತುತ ೫೦ ಸಾವಿರ ಮಿಲಿಟರಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ೩ ವರ್ಷಗಳಲ್ಲಿ ೧೫ ಹೊಸ ‘ಸೆಂಟರ್ ಆಫ್ ಎಕ್ಸಲೆನ್ಸ್’ (ಶ್ರೇಷ್ಠತಾ ಕೇಂದ್ರಗಳು) ಅನ್ನು ಸ್ಥಾಪಿಸಲಾಗುವುದು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”