ಉತ್ತರಪ್ರದೇಶದ ಸಿಕಂದರಾಬಾದ್ ನಗರಸಭೆಯ ಅಧ್ಯಕ್ಷ ಹಾಗೂ ಭಾಜಪ ನಾಯಕ ಡಾ. ಪ್ರದೀಪ ದೀಕ್ಷಿತ ಅವರ ಘೋಷಣೆ
ಸಾಯೋನಿ ಘೋಷ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಭಗವಾನ್ ಶಿವನನ್ನು ಅವಮಾನಿಸುವ ಪೋಸ್ಟ್ ಪ್ರಸಾರ ಮಾಡಿದ್ದಾರೆಂಬ ಆರೋಪ

ಬುಲಂದಶಹರ್ (ಉತ್ತರಪ್ರದೇಶ) – ಜಿಲ್ಲೆಯ ಸಿಕಂದರಾಬಾದ್ ನಗರಸಭೆಯ ಅಧ್ಯಕ್ಷರು ಮತ್ತು ಭಾಜಪ ನಾಯಕರಾದ ಡಾ. ಪ್ರದೀಪ್ ದೀಕ್ಷಿತ್ ಅವರು ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಸಾಯೋನಿ ಘೋಷ್ ಅವರ ಶಿರಚ್ಛೇದ ಮಾಡುವವರಿಗೆ ೧ ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅವರ ಈ ಘೋಷಣೆಯು ಸಾಯೋನಿ ಘೋಷ್ ಅವರು ಶಿವಲಿಂಗವನ್ನು ಅವಮಾನಿಸಿದ ಹಳೆಯ ಪೋಸ್ಟಗೆ (ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾದ ಮಾಹಿತಿ ಅಥವಾ ವಿಡಿಯೋ) ಸಂಬಂಧಿಸಿದೆ.
೧. ಪ್ರದೀಪ ದೀಕ್ಷಿತ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಅದರಲ್ಲಿ ಅವರು, ‘ನಾನು ಪ್ರತಿದಿನ ೧ ಗಂಟೆ ಭಗವಾನ್ ಶಂಕರನ ಪೂಜೆ ಮಾಡುತ್ತೇನೆ. ತೃಣಮೂಲ ಸಂಸದೆ ಸಾಯೋನಿ ಘೋಷ್ ಮಾಡಿದ ಕೃತ್ಯದಿಂದ ನನಗೆ ಆಳವಾದ ನೋವಾಗಿದೆ. ಯಾರು ಸಾಯೋನಿ ಘೋಷ್ ಅವರ ಕತ್ತರಿಸಿದ ಶಿರವನ್ನು ತರುತ್ತಾರೋ, ಅವರಿಗೆ ೧ ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು’ ಎಂದು ಹೇಳುತ್ತಿದ್ದಾರೆ. ಸಿಕಂದರಾಬಾದ್ ನಲ್ಲಿ ನಡೆದ ಪ್ರತಿಭಟನೆಯೊಂದರ ಸಂದರ್ಭದಲ್ಲಿ ದೀಕ್ಷಿತ್ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಆಯೋಜಕರು ಸಾಯೋನಿ ಘೋಷ್ ಅವರ ಪೋಸ್ಟ್ ಅನ್ನು ‘ದೇವತೆಗಳಿಗೆ ಮಾಡಿದ ಅಪಮಾನ’ ಎಂದು ಕರೆದಿದ್ದರು.
೨. ದೀಕ್ಷಿತ್ ಅವರ ಈ ಹೇಳಿಕೆಗೆ ಬುಲಂದಶಹರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿಯಾವುರ್ ರೆಹಮಾನ್ ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ. ರೆಹಮಾನ್ ಮಾತನಾಡಿ, ‘ಪಕ್ಷದಲ್ಲಿ ಇಂತಹ ಜನರಿದ್ದಾಗ ಮಹಿಳೆಯರು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ಅವರು ಮಹಿಳೆಯೊಬ್ಬಳ ಕೊಲೆಗಾಗಿ ಬಹುಮಾನ ನೀಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಪಕ್ಷದ ಹಿರಿಯ ಅಧಿಕಾರಿಗಳು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಾವು ಮೊಕದ್ದಮೆ ದಾಖಲಿಸಲು ಒತ್ತಾಯಿಸುತ್ತೇವೆ’ ಎಂದರು.
೩. ಭಾಜಪ ಜಿಲ್ಲಾಧ್ಯಕ್ಷ ವಿಕಾಸ ಚೌಹಾಣ್ ಅವರು ಇದು ದೀಕ್ಷಿತ್ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಏನಿದು ಸಂಪೂರ್ಣ ಪ್ರಕರಣ?
ಸಾಯೋನಿ ಘೋಷ್ ಅವರು ೨೦೧೫ ರಲ್ಲಿ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಿಂದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು, ಇದು ೨೦೨೧ ರಲ್ಲಿ ಮತ್ತು ನಂತರ ಈ ವರ್ಷ ೨೦೨೬ ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜನರ ಗಮನಕ್ಕೆ ಬಂದಿತ್ತು. ಈ ಹಿಂದೆಯೂ ಈ ಪೋಸ್ಟನ ಹಿನ್ನೆಲೆಯಲ್ಲಿ ಘೋಷ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ೨೦೧೫ ರ ವರ್ಷದಲ್ಲಿ ತಮ್ಮ ಖಾತೆಯು ‘ಹ್ಯಾಕ್’ ಆಗಿತ್ತು ಮತ್ತು ಹ್ಯಾಕರ್ ಆ ಪೋಸ್ಟ್ ಮಾಡಿದ್ದನು ಎಂದು ಘೋಷ್ ಸ್ಪಷ್ಟನೆ ನೀಡಿದ್ದರು. ಖಾತೆಯು ಮತ್ತೆ ತಮ್ಮ ನಿಯಂತ್ರಣಕ್ಕೆ ಬಂದ ತಕ್ಷಣವೇ ಆ ಪೋಸ್ಟ್ ಅನ್ನು ತೆಗೆದುಹಾಕಲಾಗಿತ್ತು.
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !