ಮೂರ್ತಿಗಳ ವಿಸರ್ಜನೆ ಅಥವಾ ರಿಸೈಕ್ಲಿಂಗ್ (ಮರುಬಳಕೆ) ಮಾಡಲಾಗುವುದು
ಸಾರ್ವಜನಿಕರಿಂದ ಸಲಹೆಗಳಿಗೆ ಆಹ್ವಾನ

ನವದೆಹಲಿ – ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೇವತೆಗಳ ಭಗ್ನವಾದ ಮೂರ್ತಿಗಳಿಗಾಗಿ ‘ಸಂಗ್ರಹಣಾ ಕೇಂದ್ರಗಳನ್ನು’ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಸರಕಾರವು ದೆಹಲಿಯ ವಿವಿಧ ಸ್ಥಳಗಳಲ್ಲಿ ಇಂತಹ ಸಂಗ್ರಹಣಾ ಕೇಂದ್ರಗಳನ್ನು ನಿರ್ಮಿಸಲಿದೆ. ಭಗ್ನಗೊಂಡ ಮೂರ್ತಿಗಳನ್ನು ಗೌರವಯುತವಾಗಿ ವಿಸರ್ಜಿಸಲು ಮತ್ತು ಮರುಬಳಕೆ ಮಾಡಲು ಸಂಪೂರ್ಣ ನೀತಿಯನ್ನು ಸಿದ್ಧಪಡಿಸಲಾಗುವುದು. ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಈ ಕುರಿತು ಮಾಹಿತಿ ನೀಡುತ್ತಾ ಸಾರ್ವಜನಿಕರಿಂದ ಸಲಹೆಗಳನ್ನೂ ಆಹ್ವಾನಿಸಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಮಾತನಾಡಿ, “ಮೂರ್ತಿಗಳು ಭಗ್ನವಾದಾಗ ಜನರು ಹೆಚ್ಚಾಗಿ ಅವುಗಳನ್ನು ಅರಳಿ ಮರದ ಕೆಳಗೆ, ನದಿತೀರದಲ್ಲಿ, ಉದ್ಯಾನವನಗಳಲ್ಲಿ ಅಥವಾ ರಸ್ತೆಬದಿಯಲ್ಲಿ ಬಿಟ್ಟು ಹೋಗುತ್ತಾರೆ. ಇದು ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮಾತ್ರವಲ್ಲದೆ, ಸ್ವಚ್ಛತೆ ಮತ್ತು ಪರಿಸರದ ದೃಷ್ಟಿಯಿಂದಲೂ ಕಳವಳಕಾರಿ ವಿಷಯವಾಗಿದೆ. ಇದೇ ಕಾರಣಕ್ಕಾಗಿ ಸರಕಾರವು ಇಂತಹ ಭಗ್ನವಾದ ಮೂರ್ತಿಗಳಿಗಾಗಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಅಲ್ಲಿ ಜನರು ಮೂರ್ತಿಗಳನ್ನು ಗೌರವಪೂರ್ವಕವಾಗಿ ಒಪ್ಪಿಸಬಹುದಾಗಿದೆ. ತದನಂತರ ಈ ಮೂರ್ತಿಗಳ ಮೇಲೆ ವೈಜ್ಞಾನಿಕವಾಗಿ ಪ್ರಕ್ರಿಯೆ ನಡೆಸಿ ಅವುಗಳನ್ನು ಮರುಬಳಕೆ (ರಿಸೈಕಲ್) ಮಾಡಲಾಗುವುದು. ಧಾರ್ಮಿಕ ಶ್ರದ್ಧೆಗೆ ಗೌರವ ನೀಡುವುದರ ಜೊತೆಗೆ ಪರಿಸರದ ಸುರಕ್ಷತೆಯನ್ನೂ ಖಾತ್ರಿಪಡಿಸುವುದು ನಮ್ಮ ಪ್ರಯತ್ನವಾಗಿದೆ. ಸರಕಾರವು ಇದಕ್ಕಾಗಿ ವಿವರವಾದ ಕಾರ್ಯಯೋಜನೆಯನ್ನು ಸಿದ್ಧಪಡಿಸುತ್ತಿದ್ದು, ನಾಗರಿಕರಿಂದ ಸಲಹೆಗಳನ್ನು ಕೋರಲಾಗಿದೆ. ಸಂಗ್ರಹಣಾ ಕೇಂದ್ರಗಳಿಗಾಗಿ ಸೂಕ್ತ ಜಾಗ ಮತ್ತು ಈ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಏನೇನು ಮಾಡಬಹುದು ಎಂಬ ಬಗ್ಗೆ ನಾಗರಿಕರು ತಮ್ಮ ಸಲಹೆಗಳನ್ನು ನೀಡಬಹುದು. ಶ್ರದ್ಧೆಯ ಗೌರವ ಮತ್ತು ದೆಹಲಿಯ ಸ್ವಚ್ಛತೆ, ಇವೆರಡೂ ನಮ್ಮ ಜವಾಬ್ದಾರಿಯಾಗಿದೆ,” ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!