ಮುಸಲ್ಮಾನರಿಂದ ಹಿಂದೂ ಯುವಕನ ‘ಮಾಬ್ ಲಿಂಚಿಂಗ್’ ಮಾಡಲು ಯತ್ನ!

  • ಮುಸಲ್ಮಾನ ಬಾಹುಳ್ಯದ ಕೊಂಡ್ವಾ (ಪುಣೆ) ದಲ್ಲಿನ ಸಣ್ಣ ಮಕ್ಕಳ ಜಗಳದ ಪ್ರಕರಣ

  • ರಸ್ತೆಯಲ್ಲಿ 'ಅಲ್ಲಾ ಹು ಅಕ್ಬರ್' ('ಅಲ್ಲಾ ಮಹಾನ್ ಆಗಿದ್ದಾನೆ' ಎಂಬ) ಘೋಷಣೆಗಳನ್ನು ಕೂಗುತ್ತಾ ಆತಂಕ ಸೃಷ್ಟಿಸಲು ಯತ್ನ

ಪುಣೆ – ಇಲ್ಲಿನ ಮುಸಲ್ಮಾನ ಬಾಹುಳ್ಯದ ಪ್ರದೇಶವಾದ ಕೊಂಡ್ವಾದ ‘ಈಶಾ ಬೆಲಾ ಸೊಸೈಟಿ’ಯಲ್ಲಿನ ಸಣ್ಣ ಮಕ್ಕಳ ಜಗಳದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮತಾಂಧ ಮುಸಲ್ಮಾನ ಗುಂಪು ರಸ್ತೆಗಿಳಿದು ಹಿಂದೂ ಯುವಕನೊಬ್ಬನ ‘ಮಾಬ್ ಲಿಂಚಿಂಗ್’ ಮಾಡಲು ಯತ್ನಿಸಿದೆ. ಗುಂಪು ರಸ್ತೆ ತಡೆದು ಸಂಚಾರ ಅಸ್ತವ್ಯಸ್ತಗೊಳಿಸಲು ಯತ್ನಿಸಿದೆ. ರಸ್ತೆಗಿಳಿದು ಘೋಷಣೆಗಳನ್ನು ಕೂಗುತ್ತಾ ಪರಿಸರದಲ್ಲಿ ಆತಂಕ ಸೃಷ್ಟಿಸಿದೆ. ಈ ಗುಂಪು ಕೊಂಡ್ವಾ ಪೊಲೀಸ್ ಠಾಣೆ ಆವರಣಕ್ಕೆ ತೆರಳಿದ ಬಳಿಕ ಗುಂಪು ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಪರಿಣಾಮವಾಗಿ ಪೊಲೀಸರು ಗಲಭೆಕೋರರ ಮೇಲೆ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೇ ೧೮ ರ ಮಧ್ಯರಾತ್ರಿ ಈ ಘಟನೆ ನಡೆದಿದೆ.

೧. ಕೊಂಡ್ವಾದ ‘ಈಶಾ ಬೆಲಾ ಸೊಸೈಟಿ’ಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಚಿಕ್ಕಮಕ್ಕಳು ಬಂದಿದ್ದರು. ಅವರ ನಡುವೆ ಜಗಳವಾಗಿ ಅವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಜಗಳದಲ್ಲಿ ದೊಡ್ಡವರು ಮಧ್ಯಪ್ರವೇಶಿಸಿ ಇದಕ್ಕೆ ಧಾರ್ಮಿಕ ಬಣ್ಣ ಬಳಿಯಲು ಯತ್ನಿಸಿದರು.

೨. ಗುಂಪು ರಸ್ತೆಗೆ ಬಂದಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಆ ವೇಳೆ ರಸ್ತೆಯಲ್ಲಿದ್ದ ಕೆಲವರ ಮೇಲೂ ಹಲ್ಲೆ ನಡೆಸಲಾಗಿದೆ. ‘ಅಲ್ಲಾಹು ಅಕ್ಬರ್’, ‘ಲಾ ಇಲಾಹ ಇಲ್ಲಲ್ಲಾಹ’ (ಅಲ್ಲಾನ ಹೊರತು ಬೇರೆ ಯಾರೂ ಪೂಜನೀಯರಲ್ಲ) ಎಂಬ ಘೋಷಣೆಗಳನ್ನು ಕೂಗಿ ರಸ್ತೆ ತಡೆದು ಆತಂಕ ಸೃಷ್ಟಿಸಲು ಯತ್ನಿಸಿದರು.

೩. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಖುದ್ದು ಸ್ಥಳಕ್ಕಾಗಮಿಸಿದ್ದರು.

೪. ಪ್ರಸ್ತುತ ಕೊಂಡ್ವಾ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರುವುದರಿಂದ ವಾತಾವರಣ ಶಾಂತವಾಗಿದ್ದು ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಸಂಪಾದಕೀಯ ನಿಲುವು

  • ಇಂತಹ ಘಟನೆಗಳು ನಡೆಯಲು ಪುಣೆ ಭಾರತದಲ್ಲಿದೆಯೋ ಅಥವಾ ಬಾಂಗ್ಲಾದೇಶ ಇಲ್ಲವೇ ಪಾಕಿಸ್ತಾನದಲ್ಲಿದೆಯೋ? ಇಂತಹ ಘಟನೆಗಳು ಮುಂದೆ ನಡೆಯದಂತೆ ತಡೆಯಲು ಪುಣೆ ನಾಗರೀಕರು ಸಕ್ಷಮ ಹಿಂದೂ ಸಂಘಟನೆಗಾಗಿ ಮುಂದೆ ಬರಬೇಕು!
  • ಸಣ್ಣ ಮಕ್ಕಳ ಜಗಳದಿಂದ ಮತಾಂಧ ಮುಸಲ್ಮಾನರ ಗುಂಪು ಇಷ್ಟೊಂದು ಆಕ್ರಮಣಕಾರಿಯಾಗುತ್ತದೆ ಎಂದರೆ, ಈ ಜನರು ಗಲಭೆ ಮಾಡಲು ನೆಪವನ್ನೇ ಹುಡುಕುತ್ತಿರುತ್ತಾರೆ ಎಂದೇ ಹೇಳಬೇಕು!
  • ಗಲಭೆಕೋರರ ಪ್ರವೃತ್ತಿಯನ್ನು ಹತ್ತಿಕ್ಕಲು ಮಹಾರಾಷ್ಟ್ರ ಪೊಲೀಸರು ಯೋಗಿ ಆದಿತ್ಯನಾಥ್ ಸರಕಾರದಂತೆ ಈಗ ಬುಲ್ಡೋಜರ್ ಕಾರ್ಯಾಚರಣೆಯಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದೇ ಈಗ ರಾಜ್ಯದ ಹಿಂದೂಗಳಿಗೆ ಅನ್ನಿಸತೊಡಗಿದೆ!